ಬಜೆಟ್‌ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ – ಹೋಟೆಲ್ ವ್ಯಾಪಾರ ಅವಧಿ ರಾತ್ರಿ 1 ಗಂಟೆಗೆ ವಿಸ್ತರಣೆ

ಬಜೆಟ್‌ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ – ಹೋಟೆಲ್ ವ್ಯಾಪಾರ ಅವಧಿ ರಾತ್ರಿ 1 ಗಂಟೆಗೆ ವಿಸ್ತರಣೆ

ಸಿದ್ದು ಲೆಕ್ಕ 2024ರಲ್ಲಿ ಬೆಂಗಳೂರಿಗೆ ಬಂಪರ್ ಆಫರ್ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಭರಪೂರ ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ: ಮಂತ್ರಾಲಯಕ್ಕೆ ರಸ್ತೆ ಸಂಪರ್ಕ , ಬ್ರಿಡ್ಸ್ ಕಂ ಬ್ಯಾರೇಜ್ – ತಿರುಮಲದಲ್ಲಿ 200ಕೋಟಿ ರೂ ವೆಚ್ಚದಲ್ಲಿ ವಸತಿ ಗೃಹ

ಬೆಂಗಳೂರಲ್ಲಿ ನೂತ‌ನ Bio CNG Plant ಸ್ಥಾಪನೆ ಮಾಡಲಾಗುವುದು. ಬೆಂಗಳೂರಿಲ್ಲಿ 420 ಹಬ್ & ಸ್ಪೋಕ್ ಮಾದರಿಯಲ್ಲಿ ಪ್ರಯೋಗಾಲಯಕ್ಕೆ 20 ಕೋಟಿ ಮೀಸಲಿಡಲಾಗಿದೆ. ಬೆಂಗಳೂರಿನ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ 20 ಕೋಟಿ ವೆಚ್ಚದಲ್ಲಿ ರೋಬೋಟಿಕ್ ಯಂತ್ರ ಸ್ಥಾಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದ ಪೂರ್ವ ಭಾಗದಲ್ಲಿ 10 ಕೋಟಿ ವೆಚ್ಚದಲ್ಲಿ 500 ಜನ ವ್ಯವಸ್ಥೆಯ ನಿರಾಶ್ರಿತ ಕೇಂದ್ರ ತೆರೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಜಾಹೀರಾತು ಮೂಲಕ 2000 ಕೋಟಿ ನಿರೀಕ್ಷೆಯಿದೆ, ನಗರದಲ್ಲಿ 147km ವೈಟ್ ಟಾಪಿಂಗ್ ಗೆ 1,700 ಕೋಟಿ ಮೀಸಲಿಡಲಾಗಿದೆ. ಹೆಬ್ಬಾಳ ಜಂಕ್ಷನ್ ನಲ್ಲಿ ಸುರಂಗ ಮಾರ್ಗ ನಿರ್ಮಿಸಲು ಸರ್ಕಾರ ಅಸ್ತು ಎಂದಿದೆ. ಹೊರವರ್ತುಲ ರಸ್ತೆ ಅಭಿವೃದ್ಧಿಗೆ 200 ಕೋಟಿ ಸರ್ಕಾರ ಮೀಸಲಿಟ್ಟಿದೆ.
ಬೆಂಗಳೂರಿಗೆ ನೂತನ ಬ್ಯುಸಿನೆಸ್ ಕಾರಿಡಾರ್ ಘೋಷಣೆ ಮಾಡಲಾಗಿದೆ. ಹಾಗೂ 73km ಉದ್ದದ ಬ್ಯುಸಿನೆಸ್ ಕಾರಿಡಾರ್ ಗೆ 27 ಸಾವಿರ ಕೋಟಿ, ನಗರದಲ್ಲಿ 250 ಮೀಟರ್ ಎತ್ತರದ ಸ್ಕೈ ಡೆಕ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ನಮ್ಮ ಮೆಟ್ರೋದ ಫೇಸ್ 3ಗೆ 15,611 ಕೋಟಿ ಅನುದಾನ ಮೀಸಲು, ಬಿಎಂಟಿಸಿಗೆ 820 ಹೊಸ ಇಲೆಕ್ಟ್ರಿಕ್ ಬಸ್ ಖರೀದಿಗೆ 1,334 ಕೋಟಿ ಅನುದಾನ ನೀಡಲಾಗಿದೆ. ಜಲ ಮಂಡಳಿಯ ಕಾವೇರಿ 5ನೇ ಹಂತದ ಕಾಮಗಾರಿಗೆ 5,550 ಕೋಟಿ (12 ಲಕ್ಷ ಜನರಿಗೆ ಪ್ರತಿ ದಿನ ನೀರು),  ಬಿಬಿಎಂಪಿಯ 7 ಘನತ್ಯಾಜ್ಯ ಘಟಕಗಳ ಅಭಿವೃದ್ಧಿಗೆ 441 ಕೋಟಿ, ಬಿಬಿಎಂಪಿಯ 110 ಹಳ್ಳಿಗೆ ಕುಡಿಯುವ ನೀರು ಪೂರೈಕೆಗೆ 200 ಕೋಟಿ, ಬೆಂಗಳೂರಲ್ಲಿ ಹೋಟೆಲ್ ವ್ಯಾಪಾರ ಅವಧಿ ರಾತ್ರಿ ಒಂದು ಗಂಟೆಗೆ ವಿಸ್ತರಣೆ ಮಾಡಲಾಗಿದೆ.

 

Sulekha