ಸೀನಿಯರ್ಸ್ ಇಲ್ಲದ್ದೇ ಹೊಸಬರಿಗೆ ಲಕ್ – ಇಂಗ್ಲೆಂಡ್ ಸರಣಿಯಲ್ಲಿ ಶೈನ್ ಆಗ್ತಾರಾ ಕರುಣ್ & ಕಿಶನ್?

ಸೀನಿಯರ್ಸ್ ಇಲ್ಲದ್ದೇ ಹೊಸಬರಿಗೆ ಲಕ್ – ಇಂಗ್ಲೆಂಡ್ ಸರಣಿಯಲ್ಲಿ ಶೈನ್ ಆಗ್ತಾರಾ ಕರುಣ್ & ಕಿಶನ್?

ಜೂನ್ 3ಕ್ಕೆ ಐಪಿಎಲ್ ಫೈನಲ್ ನಡೆಯಲಿದ್ದು ಜೂನ್ 20 ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭವಾಗುತ್ತೆ. ಇದೀಗ ಎ ಟೀಂ ಅನೌನ್ಸ್ ಆಗಿದ್ದು ಬಿಸಿಸಿಐ 18 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುವ 2 ಪ್ರಥಮ ದರ್ಜೆ ಪಂದ್ಯಕ್ಕೆ ಭಾರತ ಎ ತಂಡದ ನಾಯಕತ್ವವನ್ನು ಅನುಭವಿ ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್ ವಹಿಸಿಕೊಳ್ತಾರೆ. ಇನ್ನು ನಿರೀಕ್ಷೆಯಂತೆಯೇ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿ ಚಾನ್ಸ್ ನೀಡಲಾಗಿದೆ. ಇನ್ನೊಂದು ವಿಶೇಚ ಅಂದ್ರೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ಕಮ್ ಬ್ಯಾಕ್ ಮಾಡಿದ್ದಾರೆ.

ಇದನ್ನೂ ಓದಿ : ಚಿನ್ನಸ್ವಾಮಿಯಲ್ಲಿ 10 ವರ್ಷಗಳಿಂದ ಕೊಲ್ಕತ್ತಾ ಸೋತೇ ಇಲ್ಲ – ಸೇಡು ತೀರಿಸಿಕೊಳ್ಳುತ್ತಾ ಆರ್ ಸಿಬಿ?

ಇನ್ನು ಭಾರತ ಎ ತಂಡದಲ್ಲಿ ಅಭಿಮನ್ಯು ಈಶ್ವರನ್ ಕ್ಯಾಪ್ಟನ್ ಆಗಿದ್ರೆ ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಧ್ರುವ್ ಜುರೆಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮಾನವ್ ಸುತಾರ್, ಶಮ್ಸ್ ಮುಲಾನಿ, ಮುಕೇಶ್ ಕುಮಾರ್, ಆಕಾಶ್ ದೀಪ್, ರುತುರಾಜ್ ಗಾಯಕ್ವಾಡ್, ಸರ್ಫರಾಜ್ ಖಾನ್, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಹರ್ಷ್ ದುಬೆ ಸ್ಥಾನ ಪಡೆದಿದ್ದಾರೆ. ಹಾಗೇ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಫೈನಲ್ ರೇಸ್​ನಲ್ಲಿರುವ ಕಾರಣ ಗಿಲ್​ರನ್ನು ಮೊದಲ ಪಂದ್ಯಕ್ಕೆ ಆಯ್ಕೆ ಮಾಡಲಾಗಿಲ್ಲ. ಗಿಲ್ ಮಾತ್ರವಲ್ಲದೆ ಗುಜರಾತ್ ತಂಡದ ಮತ್ತೊಬ್ಬ ಆಟಗಾರ ಸಾಯಿ ಸುದರ್ಶನ್ ಅವರನ್ನು ಎರಡನೇ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ.

ಇನ್ನು ಎ ತಂಡದಲ್ಲಿ ಸ್ಥಾನ ಪಡೆದವರ ಪೈಕಿ ಕರುಣ್ ನಾಯರ್ ಮತ್ತು ಇಶಾನ್ ಕಿಶನ್ ಹೈಲೆಟ್ ಆಗಿದ್ದಾರೆ. ಕರುಣ್ ನಾಯರ್ ಅವರಿಗೆ ಹಲವು ವರ್ಷಗಳ ನಂತರ ಭಾರತ ತಂಡಕ್ಕೆ ಮರಳುವ ಅವಕಾಶ ಸಿಕ್ಕಿದೆ. ಕಳೆದ ದೇಶೀಯ ಸೀಸನ್​ನಲ್ಲಿ ಪ್ರಥಮ ದರ್ಜೆ ಮತ್ತು ಲಿಸ್ಟ್-ಎ ಕ್ರಿಕೆಟ್‌ನಲ್ಲಿ 1600 ಕ್ಕೂ ಹೆಚ್ಚು ರನ್‌ ಮತ್ತು 9 ಶತಕಗಳನ್ನು ಬಾರಿಸಿದ್ರು. ಹೀಗಾಗಿ ಕರುಣ್ ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಬೇಕು ಅಂತಾ ಸಾಕಷ್ಟು ಫ್ಯಾನ್ಸ್ ಒತ್ತಾಯ ಮಾಡಿದ್ರು. ಸೋ ಇಲ್ಲಿ ಒಳ್ಳೆ ಪರ್ಫಾಮೆನ್ಸ್ ನೀಡಿದ್ರೆ ಮುಖ್ಯ ತಂಡಕ್ಕೂ ಆಯ್ಕೆಯಾಗುವ ಸಾಧ್ಯತೆ ಇದೆ. ಅಲ್ದೇ ಇಶಾನ್ ಕಿಶನ್​ಗೂ ಆಯ್ಕೆ ಮಂಡಳಿ ಮತ್ತೊಂದು ಅವಕಾಶ ನೀಡಿದೆ. 2023 ರ ಡಿಸೆಂಬರ್‌ನಲ್ಲಿ ಭಾರತ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಇಶಾನ್ ಕಿಶನ್ ದಿಢೀರ್ ಅಂತಾ ಟೀಂ ತೊರೆದು ಭಾರತಕ್ಕೆ ಬಂದಿದ್ರು. ಸೋ ಅವಾಗಿಂದ ಅವ್ರಿಗೆ ಟೀಂ ಇಂಡಿಯಾ ಪರ ಪಂದ್ಯಗಳನ್ನ ಆಡೋಕೆ ಚಾನ್ಸ್ ಸಿಕ್ಕಿರಲಿಲ್ಲ. ಬಟ್ ಈಗ ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಆಯ್ಕೆಯಾಗಿದ್ದಾರೆ. ಅಲ್ದೇ ಬಿಸಿಸಿಐ ಈ ಸರಣಿಗೆ ಟೀಂ ಇಂಡಿಯಾದ ಕೆಲವು ಖಾಯಂ ಆಟಗಾರರನ್ನು ಸಹ ಆಯ್ಕೆ ಮಾಡಿದೆ. ಶುಭ್​ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಸೆಲೆಕ್ಟ್ ಆಗಿದ್ದಾರೆ.

ಸದ್ಯ ಭಾರತ ಎ ತಂಡದ ಇಂಗ್ಲೆಂಡ್ ಪ್ರವಾಸವು ಜೂನ್ 20 ರಿಂದ ಸ್ಟಾರ್ಟ್ ಆಗುವ ಭಾರತದ ಮುಖ್ಯ ತಂಡದ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಒಂದು ಪೂರ್ವಭಾವಿ ತಯಾರಿಯಾಗಿದೆ. ಈ ಪ್ರವಾಸದಲ್ಲಿ ಭಾರತ ಎ ತಂಡವು ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದೆ (ಮೇ 30-ಜೂನ್ 2 ಮತ್ತು ಜೂನ್ 6-9) ಮತ್ತು ಒಂದು ಪಂದ್ಯವನ್ನು ಭಾರತದ ಮುಖ್ಯ ತಂಡದ ವಿರುದ್ಧ ಆಡಲಿದೆ. (ಜೂನ್ 13-16). ಈ ಪಂದ್ಯಗಳು ಆಟಗಾರರಿಗೆ ಇಂಗ್ಲೆಂಡ್‌ನ ವೆದರ್​ಗೆ ಹೊಂದಿಕೊಳ್ಳಲು ಮತ್ತು ತಮ್ಮ ಸ್ಕಿಲ್ಸ್ ಪ್ರೂವ್ ಮಾಡೋಕೆ ಅವಕಾಶ ನೀಡುತ್ತೆ. ಹಾಗೇ ಈ ಇಂಗ್ಲೆಂಡ್ ಪ್ರವಾಸವು ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅತ್ಯುತ್ತಮ ಅವಕಾಶವಾಗಿದೆ.

Shantha Kumari

Leave a Reply

Your email address will not be published. Required fields are marked *