ಐಪಿಎಲ್ ನಲ್ಲಿ ಹೈದ್ರಾಬಾದ್ ದಾಖಲೆ ಬ್ಯಾಟಿಂಗ್ – 300+ ಸ್ಕೋರ್ ಮಾಡ್ತಾರಾ ಕಮಿನ್ಸ್ ಬಾಯ್ಸ್?

ಐಪಿಎಲ್ ನಲ್ಲಿ ಹೈದ್ರಾಬಾದ್ ದಾಖಲೆ ಬ್ಯಾಟಿಂಗ್ – 300+ ಸ್ಕೋರ್ ಮಾಡ್ತಾರಾ ಕಮಿನ್ಸ್ ಬಾಯ್ಸ್?

ಐಪಿಎಲ್​ ಸೀಸನ್ 18 ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿದೆ. ಮೂಲಬೆಲೆಗೆ ಟೀಂ ಸೇರ್ಕೊಂಡಿದ್ದವ್ರು ಸೂಪರ್ ಸ್ಟಾರ್ ಪರ್ಫಾಮೆನ್ಸ್ ತೋರಿಸ್ತಿದ್ದಾರೆ. ಕಾಸ್ಟ್ಲಿ ಅನ್ನಿಸಿಕೊಂಡವ್ರು ಝೀರೋಗಳಾಗಿದ್ದಾರೆ. ಚೇಸಿಂಗ್ ಅಸಾಧ್ಯ ಅನ್ಕೊಂಡಿದ್ದ ಟೀಮ್​ಗಳು ಮಿರಾಕಲ್ ಎನ್ನುವಂತೆ ಟಾರ್ಗೆಟ್ ರೀಚ್ ಮಾಡ್ತಿದ್ದಾರೆ. ಬಟ್ 10 ಫ್ರಾಂಚೈಸಿಗಳ ಪೈಕಿ ಸ್ಟ್ರಾಂಗೆಸ್ಟ್ ಟೀಂ ಆಗಿ ಕಾಣ್ತಿರೋದು ಸನ್ ರೈಸರ್ಸ್ ಹೈದ್ರಾಬಾದ್. ಎಸ್​ಆರ್​ಹೆಚ್​ನ ಪ್ಲಸ್ ಪಾಯಿಂಟ್ ಅಂದ್ರೆ ಬ್ಯಾಟಿಂಗ್ ಲೈನಪ್. ಈಗಾಗ್ಲೇ ಮೊದಲನೇ ಪಂದ್ಯದಲ್ಲೇ ಝಲಕ್ ತೋರಿಸಿರೋ ಹೈದ್ರಾಬಾದ್ ಈ ಸೀಸನಲ್ಲಿ 300+ ರನ್ ಸ್ಕೋರ್ ಮಾಡಿದ್ರೂ ಅಚ್ಚರಿ ಇಲ್ಲ. ಬೌಲರ್​ಗಳಿಗೆ ಮರ್ಯಾದೆನೇ ಕೊಡ್ದೇ ಚಚ್ಚುವಂತ ಪ್ಲೇಯರ್​ಗಳೇ ಟೀಮ್​ನಲ್ಲಿದ್ದು ಅಗ್ರೆಸ್ಸಿವ್ ಇಂಟೆಂಟ್​ನಲ್ಲೇ ಬ್ಯಾಟ್ ಬೀಸ್ತಾರೆ. ಇದೇ ಈಗ ಹೈದ್ರಾಬಾದ್​ ತಂಡಕ್ಕೆ ಪ್ಲಸ್ ಆಗಿದೆ.

ಇದನ್ನೂ ಓದಿ : CSK ಟೀಂನಿಂದ ಬಾಲ್ ಟ್ಯಾಂಪರಿಂಗ್? – ಸೋಶಿಯಲ್ ಮೀಡಿಯಾದಲ್ಲಿ ಬ್ಯಾನ್ ಟ್ರೆಂಡಿಂಗ್ 

18ನೇ ಸೀಸನ್ ಆರಂಭ ಆಗೋ ಮುಂಚೆಯೇ ಸಾಕಷ್ಟು ಕ್ರಿಕೆಟ್ ಎಕ್ಸ್​ಪರ್ಟ್ಸ್ ಪ್ಲೇಆಫ್​ಗೇರಬಹುದಾದ ತಂಡಗಳ ಬಗ್ಗೆ ಪ್ರೆಡಿಕ್ಟ್ ಮಾಡಿದ್ರು. ಅದ್ರಲ್ಲೂ 90 ಪರ್ಸೆಂಟ್ ವಿಶ್ಲೇಷಕರ ಬಾಯಲ್ಲಿ ಬಂದದ್ದೇ ಸನ್ ರೈಸರ್ಸ್ ಹೈದ್ರಾಬಾದ್ ಟೀಂ. ಅವ್ರ ನಿರೀಕ್ಷೆಯಂತೆಯೇ ಈ ಸೀಸನ್​ನ ತಮ್ಮ ಮೊದಲ ಪಂದ್ಯದಲ್ಲೇ ಸಾಧಿಸಿ ತೋರಿಸಿದ್ದಾರೆ. ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದಾಖಲೆಯ ರನ್ ಕಲೆ ಹಾಕಿದ್ದಾರೆ. ಅದ್ರಲ್ಲೂ ಮೆಗಾ ಹರಾಜಿನಲ್ಲಿ ಹೈದ್ರಾಬಾದ್ ತಂಡ ಸೇರಿದ ಜಾರ್ಖಂಡ್ ಬಾಯ್​​​​ ಇಶಾನ್ ಕಿಶನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾನುವಾರ ಮಧ್ಯಾಹ್ನ ಹೈದ್ರಾಬಾದ್​​ನ ರಣ ಬಿಸಿಲ ನಡುವೆ ಬ್ಯಾಟ್​ ಹಿಡಿದು ಅಬ್ಬರಿಸಿದ ಇಶಾನ್​ ಕಿಶನ್​ ಬೌಲರ್​ಗಳಿಗೆ ನರಕ ದರ್ಶನ ಮಾಡಿಸಿದರು. ರಾಜಸ್ಥಾನ್​ ರಾಯಲ್ಸ್​​​ ಬೌಲಿಂಗ್​ ಅಟ್ಯಾಕ್​ನ ಚಿಂದಿ ಉಡಾಯಿಸಿದ ಕಿಶನ್​, ಜಸ್ಟ್​ 45 ಎಸೆತಗಳಲ್ಲಿ ಅಜೇಯ ಶತಕ ಸಿಡಿಸಿ ಸಂಭ್ರಮಿಸಿದರು. ಪರಿಣಾಮ ಹೈದ್ರಾಬಾದ್ ತಂಡ 286 ರನ್ ಗಳಿಸಿತು. ಇದು ಐಪಿಎಲ್​ನಲ್ಲಿ ಎರಡನೇ ಅತ್ಯಧಿಕ ಸ್ಕೋರ್​.  ಅಲ್ದೇ ಟಾಪ್ 5 ಹೈಯೆಸ್ಟ್ ಸ್ಕೋರ್ ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡವೇ ನಾಲ್ಕು ಬಾರಿ ಈ ಸಾಧನೆ ಮಾಡಿದೆ.

ಐಪಿಎಲ್ ನಲ್ಲಿ ಹೈದ್ರಾಬಾದ್ ಸುನಾಮಿ!

ತಂಡ                ರನ್ಸ್                ಯಾರ ವಿರುದ್ಧ?

SRH                287/3                 RCB (2024)

SRH                286/6                  RR (2025)

SRH                 277/3                  MI (2024)

KKR                 272/7                 DC (2024)

SRH                 266/7                 DC (2024)

ಹೀಗೆ ಟಾಪ್ 5 ರೇಸ್​ನಲ್ಲಿ ಹೈದ್ರಾಬಾದ್ ತಂಡವೇ ನಾಲ್ಕು ಸಲ ಹೈಯೆಸ್ಟ್ ಸ್ಕೋರ್ ಕಲೆ ಹಾಕಿದೆ. ಅದೂ ಲಾಸ್ಟ್ ಸೀಸನ್​ನಲ್ಲೇ ನಾಲ್ಕು ಬಾರಿ ಈ ರೀತಿಯಾದ ಸ್ಕೋರ್ ಬಂದಿದೆ. ಇದಕ್ಕೂ ಮುನ್ನ ಆರ್​ಸಿಬಿ 5 ವಿಕೆಟ್ ನಷ್ಟಕ್ಕೆ 263 ರನ್​ ಗಳಿಸಿದ್ದೇ ಐಪಿಎಲ್ ಇತಿಹಾಸದಲ್ಲಿ ಹೈಯೆಸ್ಟ್ ಸ್ಕೋರ್ ಆಗಿತ್ತು. 2013ರಿಂದ 2024ರವರೆಗೆ ಯಾರಿಂದಲೂ ಇದನ್ನ ಬ್ರೇಕ್ ಮಾಡೋಕೆ ಆಗಿರಲಿಲ್ಲ. ಬಟ್ ಹೈದ್ರಾಬಾದ್ ಬ್ಯಾಟರ್ಸ್ ಬೌಲರ್​ಗಳಿಗೆ ಕೇರೇ ಮಾಡದೇ ಬ್ಯಾಕ್ ಟು ಬ್ಯಾಕ್ ಈ ಸಾಧನೆ ಮಾಡಿದ್ದಾರೆ. ಈ ವರ್ಷವೂ ಮೊದಲ ಮ್ಯಾಚಲ್ಲೇ ದಾಖಲೆ ಬರೆದಿದ್ದಾರೆ. ಇವ್ರ ಬ್ಯಾಟಿಂಗ್ ಸ್ಟೈಲ್ ನೋಡ್ತಿದ್ರೆ ಮುಂದಿನ ದಿನಗಳಲ್ಲಿ 300+ ರನ್ ಸಿಡಿಸಿದ್ರೂ ಅಚ್ಚರಿ ಇಲ್ಲ.

Shantha Kumari

Leave a Reply

Your email address will not be published. Required fields are marked *