ಶ್ರೀಲಂಕಾಕ್ಕೆ ಎಕ್ಸ್‌ಪೈರಿ ಆದ ಕಿಟ್ ಕಳುಹಿಸಿ ಪಾಕ್‌ – ವಿಶ್ವದ ಮುಂದೆ ನೀಚ ಕೃತ್ಯ ಬಯಲು

ಶ್ರೀಲಂಕಾಕ್ಕೆ ಎಕ್ಸ್‌ಪೈರಿ  ಆದ ಕಿಟ್ ಕಳುಹಿಸಿ ಪಾಕ್‌ – ವಿಶ್ವದ ಮುಂದೆ ನೀಚ ಕೃತ್ಯ ಬಯಲು

ಪಾಕಿಸ್ತಾನ ಶ್ರೀಲಂಕಾಕ್ಕೆ ಸಹಾಯ ಮಾಡೋ ನೆಪದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ವಿಶ್ವದ ಮುಂದೆ ತಲೆ ತಗ್ಗಿಸಿ ನಿಂತಿದೆ. ದಿತ್ವಾ ಚಂಡಮಾರುತದಿಂದ ತತ್ತರಿಸುತ್ತಿರುವ ಶ್ರೀಲಂಕಾಗೆ ಪಾಕಿಸ್ತಾನದಿಂದ ಅವಧಿ ಮೀರಿದ ಮೆಡಿಕಲ್‌ ಕಿಟ್‌ ಮತ್ತು ಆಹಾರ ಪದಾರ್ಥಗಳನ್ನು ನೀಡಿದೆ ಅನ್ನೋ ಆರೋಪ ಕೇಳಿ ಬಂದಿದೆ.  ಪಾಕಿಸ್ತಾನ ಶ್ರೀಲಂಕಾಕ್ಕೆ ಆಹಾರ ಸಾಮಾಗ್ರಿಗಳನ್ನ ಕಳುಹಿಸಿಕೊಟ್ಟಿದೆ. ಆದ್ರೆ ಅದ್ರಲ್ಲಿ ಕೆಲವು ಅವಧಿ ಮೀರಿದೆ ಸಾಮಾಗ್ರಿಗಳು ಇವೆ ಅನ್ನೋ ಫೋಟೋಗಳು ವೈರಲ್‌ ಆಗುತ್ತಿವೆ. ಇದು ಪಾಕಿಸ್ತಾನವನ್ನು ಮುಜುಗರಕ್ಕೀಡು ಮಾಡಿದ್ದು, ಶ್ರೀಲಂಕಾ ಮತ್ತು ವಿದೇಶಾಂಗ ಇಲಾಖೆಗೆ ಆತಂಕ ಎದುರಾಗಿದೆ.

ಇದನ್ನೂ ಓದಿ: ಹೈಕಮಾಂಡ್‌ ಹೇಳಿದಾಗ ಡಿಕೆಶಿ ಸಿಎಂ ಆಗುತ್ತಾರೆ ಎಂದ ಸಿದ್ಧರಾಮಯ್ಯ! – ವರ್ಕೌಟ್‌ ಆಯ್ತಾ ಬ್ರೇಕ್‌ಫಾಸ್ಟ್‌ ಮೀಟಿಂಗ್‌?

ದಿತ್ವಾ ಚಂಡಮಾರುತಕ್ಕೆ ನಲುಗಿದ ಶ್ರೀಲಂಕಾಕ್ಕೆ  ಭಾರತ ಸೇರಿದಂತೆ ಹಲವು ರಾಷ್ಟ್ರಗಳು ದ್ವೀಪ ರಾಷ್ಟ್ರಕ್ಕೆ ಸಹಾಯ ಹಸ್ತ ಚಾಚಿವೆ. ಸಹಾಯ ಮಾಡುವ ನೆಪ ತೋರಿರುವ ಪಾಕಿಸ್ತಾನ ಶ್ರೀಲಂಕಾಗೆ ಕಳುಹಿಸಲಾಗಿದ್ದ ವೈದ್ಯಕೀಯ ಕಿಟ್‌, ಆಹಾರ ಸರಬರಾಜು ಮತ್ತು ಅಗತ್ಯ ವಸ್ತುಗಳನ್ನು ಕಳುಹಿಸಿತ್ತು. ಆದರೆ ಅದೆಲ್ಲ ಅವಧಿ ಮೀರಿದ ವಸ್ತುಗಳು ಎಂದು ತಿಳಿದು ಬಂದಿದೆ. ಇದು ಪಾಕಿಸ್ತಾನಕ್ಕೆ ಮತ್ತೊಂದು ರಾಜತಾಂತ್ರಿಕ ನಿಲುವನ್ನು ಎದುರಿಸುವ ಸಂಕಷ್ಟಕ್ಕೆ ಸಿಲುಕಿಸಿದೆ. ದಿತ್ವಾ ಚಂಡಮಾರುತದ ಪರಿಣಾಮವಾಗಿ ಉಂಟಾದ ಭೂಕುಸಿತ ಮತ್ತು ಪ್ರವಾಹದಿಂದ ಹಾನಿಗೊಳಗಾಗಿರುವ ಶ್ರೀಲಂಕಾಗೆ ಕಳುಹಿಸಲಾಗಿರುವ ಈ ಸರಕಿನ ಅವಧಿ ಮೀರಿದ್ದು, ಅದು ಉಪಯೋಗಿಸಲು ಯೋಗ್ಯವಾಗಿಲ್ಲ ಎನ್ನಲಾಗಿದೆ.

ಇದು ಪಾಕಿಸ್ತಾನವನ್ನು ಮುಜುಗರಕ್ಕೀಡು ಮಾಡಿದ್ದು, ಶ್ರೀಲಂಕಾ ಮತ್ತು ವಿದೇಶಾಂಗ ಇಲಾಖೆಗಳಲ್ಲಿ ಕಳವಳ ಹುಟ್ಟುಹಾಕಿದೆ. ಕೊಲಂಬೊ ರಾಜತಾಂತ್ರಿಕ ಮಾರ್ಗಗಳ ಮೂಲಕ ಇಸ್ಲಾಮಾಬಾದ್‌ಗೆ ತನ್ನ ಅಸಮಧಾನ ತಿಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.  ಕೊಟ್ಟಿಲ್ಲ ಅಂದ್ರೂ ಬೇಜಾರ್ ಇಲ್ಲ, ವಿಶ್ವದ ಮುಂದೆ ನಾನು ಸಹಾಯ ಮಾಡ್ತೀನಿ ಅನ್ನೋದ್ದನ್ನ ತೋರಿಸುವುದ್ದಕ್ಕೆ ಅವಧಿ ಮೀರಿದ ಸಾಮಾಗ್ರಿಗಳನ್ನ ಕಳುಹಿಸಿದ್ದು ಯಾಕೆ ಅನ್ನೋ ಪ್ರಶ್ನೆ ಎದ್ದಿದೆ.

 

Kishor KV