ಸ್ಟಾರ್ ಪ್ಲೇಯರ್ಸ್ ಗೆ RCB ದುಡ್ಡು – ಬೆಂಗಳೂರಿನಲ್ಲಿದ್ದ ದುಬಾರಿ ಆಟಗಾರರೆಷ್ಟು?
ಈ ಸಲವೂ ವಿದೇಶಿಗರಿಗೆ ಹಣ ಸುರಿಯುತ್ತಾ?

ಆರ್‌ಸಿಬಿ.. ಈ ಹೆಸರಿಗೆ ಒಂದು ಗತ್ತಿದೆ.. ತಾಕತ್ತಿದೆ.. ಈ ಹೆಸರು ಕಿವಿಗೆ ಬೀಳುತ್ತಿದ್ದಂತೆ ಒಂಥರಾ ರೋಮಾಂಚನವಾಗುತ್ತೆ.. ಕೋಟಿ ಕೋಟಿ ಅಭಿಮಾನಿಗಳು ಈ ತಂಡವನ್ನ ಆರಾಧಿಸುತ್ತಾರೆ, ಪೂಜೆಸುತ್ತಾರೆ.. ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಕಪ್ ಗೆಲ್ಲದಿದ್ದರು, ಆರ್‌ಸಿಬಿ ಮೇಲೆ ಇರೋ ಅಭಿಮಾನಿ ಸ್ವಲ್ಪವೇ ಸ್ವಲ್ಪ ಕಮ್ಮಿಯಾಗಿಲ್ಲ.. ಪ್ರತಿ ಸಲ ಕಪ್ ತಂದು ಕೊಡುವ ಭರವಸೆ ನೀಡುವ ಆರ್‌ಸಿಬಿ ಫಾನ್ಸ್‌ಗಳ ಆಸೆಗೆ ತಣ್ಣೀರು ಹಾಕುತ್ತಲೇ ಇದೆ. ಹಾಗಂತ ಆರ್‌ಸಿಬಿ ಟೀಂನಲ್ಲಿ ಕಳಪೆ ಆಟಗಾರರು ಇಲ್ಲ.. ದುಬಾರಿ ಆಟಗಾರರೇ ಇದ್ದಾರೆ.. ಕೋಟಿ ಕೋಟಿ ಕೊಟ್ಟು ಆರ್‌ಸಿಬಿ ಪ್ಲೇಯರ್‌ಗಳನ್ನ ಖರೀದಿ ಮಾಡಿದೆ.. ಅಷ್ಟಕ್ಕೂ ಬೆಂಗಳೂರು ತಂಡ ಯಾವೆಲ್ಲಾ ಆಟಗಾರರನ್ನ ಅತೀ ಹೆಚ್ಚು ಹಣ ನೀಡಿ ಖರೀದಿ ಮಾಡಿತ್ತು? ಎಷ್ಟು ಕೋಟಿ ನೀಡಲಾಗಿತ್ತು.? ಈ ಬಾರಿಯ ಐಪಿಎಲ್ ಪಂದ್ಯದಲ್ಲಿ ಇವರು ಇರ್ತರಾ..? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಹಿಷಾ ದಸರಾದಿಂದ ಸಾಂಸ್ಕೃತಿಕ ನಗರಿಯ ಹೆಸರೇ ಚೇಂಜ್! – ಮೈಸೂರು ಅಲ್ಲ.. ‘ಮಹಿಷೂರು’
ಪ್ರತಿ ಸಲದಂತೆ ಈ ಸಲನೂ ಕಪ್ ನಮ್ದೆ ಅಂತಾ ಐಪಿಎಲ್ ಅಖಾಡಕ್ಕಿಳಿಯೋ ಆರ್‌ಸಿಬಿ ಕಪ್ ಗೆಲ್ಲುವ ಭರವಸೆಯಲ್ಲಿದೆ.. ಐಪಿಎಲ್ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಅದಕ್ಕಾಗಿ ಆರ್‌ಸಿಬಿ ಫ್ರಾಂಚೈಸಿ ತಯಾರಿ ನಡೆಸಿದೆ. ಈ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವ ಆಟಗಾರರನ್ನು ಖರೀದಿಸುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಜೊತೆಗೆ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ? ಅನ್ನೋದು ಕೂಡ ನಿಗೂಢವಾಗಿದೆ. ಐಪಿಎಲ್ ಇತಿಹಾಸದಲ್ಲಿ RCB ಖರೀದಿಸಿದ 5 ಅತ್ಯಂತ ದುಬಾರಿ ಆಟಗಾರರು ಇಲ್ಲಿದ್ದಾರೆ. ಅವರನ್ನ ಇಟ್ಟು ಕೊಳ್ಳುತ್ತಾ ಕೈ ಬಿಡುತ್ತಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ..
ಕ್ಯಾಮೆರಾನ್ ಗ್ರೀನ್ .. 17.5 ಕೋಟಿಗೆ ಖರೀದಿ..!
ಸದ್ಯ ಆರ್‌ಸಿಬಿಯ ದುಬಾರಿ ಆಟಗಾರ ಅಂದ್ರೆ ಅದು ಕ್ಯಾಮೆರಾನ್ ಗ್ರೀನ್.. ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ರೀನ್ ಆರ್‌ಸಿಬಿ ಸೇರುವುದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಕಳೆದ ಬಾರಿ ಆರ್‌ಸಿಬಿ ಫ್ರಾಂಚೈಸಿ ಇವರನ್ನು 17.5 ಕೋಟಿಗೆ ಖರೀದಿಸಿ ಅಚ್ಚರಿ ಮೂಡಿಸಿತ್ತು. ಐಪಿಎಲ್ ಇತಿಹಾಸದಲ್ಲೇ ಆರ್‌ಸಿಬಿ ಇಷ್ಟೊಂದು ಮೊತ್ತ ನೀಡಿ ಖರೀದಿಸಿದ ಏಕೈಕ ಆಟಗಾರ ಗ್ರೀನ್ ಆಗಿದ್ದಾರೆ. 2024ರ ಐಪಿಎಲ್ನಲ್ಲಿ ಗ್ರೀನ್ ಆರ್‌ಸಿಬಿ ಪರ ಅಬ್ಬರಿಸಿಲ್ಲ.. 17.5ಕೋಟಿ ಕೊಟ್ಟರು ಅದಕ್ಕೆ ತಕ್ಕಂತೆ ಆಟವಾಡಿಲ್ಲ.. ಇದು ಆರ್‌ಸಿಬಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.. ಕಳೆದ ಬಾರಿ ಗ್ರೀನ್ ಅವರ ಆಟ ನೋಡಿರೋ ಆರ್‌ಸಿಬಿ ಈ ಬಾರಿ ಇವರನ್ನು ಕೈಬಿಟ್ಟರೂ ಅಚ್ಚರಿ ಇಲ್ಲ.
ಕೈಲ್ ಜೇಮಿಸನ್.. 15 ಕೋಟಿಗೆ ಖರೀದಿ!
ಐಪಿಎಲ್ ಹರಾಜು 2021ರಲ್ಲಿ ಆರ್‌ಸಿಬಿ ನ್ಯೂಜಿಲೆಂಡ್ನ ಜೇಮಿಸನ್ ಮೇಲೆ ಹಣದ ಸುರಿಮಳೆಗೈದಿತ್ತು. ಆರ್‌ಸಿಬಿ ಇವರನ್ನು 15 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. 15 ಕೋಟಿ ಹಣವನ್ನ ನೀಡಿದ್ರು ಯಾವುದೇ ಪ್ರಯೋಜನ ಇಲ್ಲದಂತೆ ಆಗಿತ್ತು.. ಆರ್‌ಸಿಬಿ ಪರವಾಗಿ ಕೈಲ್ ಅತ್ಯತ್ತಮ ಪ್ರದರ್ಶನ ನೀಡಿಲ್ಲ.. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೇಮ್ಸನ್ ಅವರನ್ನು ಬಿಡುಗಡೆ ಮಾಡಿತು.
ಗ್ಲೆನ್ ಮ್ಯಾಕ್ಸ್ ವೆಲ್.. 14.25 ಕೋಟಿ ರೂ.ಗೆ ಖರೀದಿ
ಐಪಿಎಲ್ ಹರಾಜು 2021ರಲ್ಲಿ ಆರ್‌ಸಿಬಿ ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು 14.25 ಕೋಟಿ ರೂ.ಗೆ ಖರೀದಿಸಿತು. ಈ ಮೂಲಕ ಮ್ಯಾಕ್ಸ್‌ವೆಲ್ ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂರನೇ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಈ ಬಾರಿ ಮೆಗಾ ಹರಾಜಿಗೆ ಮೊದಲು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಬಿಡುಗಡೆ ಮಾಡಬಹುದು.
ಯುವರಾಜ್ ಸಿಂಗ್.. 14 ಕೋಟಿಗೆ ಬಿಡ್ಡಿಂಗ್
ಇನ್ನು ಯುವರಾಜ್ ಸಿಂಗ್ ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಲ್ಕನೇ ಅತ್ಯಂತ ದುಬಾರಿ ಆಟಗಾರ. 2014ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುವರಾಜ್ ಸಿಂಗ್ ಅವರನ್ನು 14 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿತ್ತು. ಆ ಸಮಯದಲ್ಲಿ ಯುವರಾಜ್ ಸಿಂಗ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದರು.
ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ದೀರ್ಘಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಆರ್‌ಸಿಬಿಯ ಮಾಜಿ ಆಟಗಾರ ಎಬಿಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸಾಕಷ್ಟು ರನ್ ಗಳಿಸಿದರು. 2011ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಬಿ ಡಿವಿಲಿಯರ್ಸ್ ಅವರನ್ನು 11 ಕೋಟಿ ರೂ.ಗೆ ಖರೀದಿಸಿತ್ತು. ಒಟ್ನಲ್ಲಿ ಆರ್‌ಸಿಬಿ ಫ್ರಾಂಚೈಸಿ ತನಗೆ ಬೇಕಾದ ಆಟಗಾರರನ್ನ ಎಷ್ಟೇ ಕೋಟಿಯಾದ್ರೂ ಕೊಟ್ಟು ಖರೀದಿ ಮಾಡುತ್ತೆ..ಆದ್ರೆ ವಿದೇಶಿ ಆಟಗಾರರ ಮೇಲೆ ಕೋಟಿ ಕೋಟಿ ಸುರಿಯುವ ಬದಲು ನಮ್ಮ ನೆಲದ ಆಟಗಾರರ ಮೇಲೆ ಆ ಹಣವನ್ನ ಸುರಿದ್ರೆ ಒಳ್ಳೆಯದಲ್ವಾ ಅನ್ನೋ ಮಾತು ಅಭಿಮಾನಿಗಳದ್ದು.. ಆದ್ರೆ ಈ ಬಾರಿಯೂ ಆರ್‌ಸಿಬಿ ವಿದೇಶಿ ಆಟಗಾರರ ಮೇಲೆ ಸುಖಸುಮ್ಮನೆ ಹಣ ಸುರಿಯುತ್ತಾ ಅಥವಾ ನಮ್ಮವರಿಗೆ ಚಾನ್ಸ್ ಕೊಡುತ್ತಾಅನ್ನೋದು ಕೆಲ ದಿನಗಳಲ್ಲಿ ಗೊತ್ತಾಗಲಿದೆ.