ಭಾರತ ಆಸ್ಟ್ರೇಲಿಯಾ ಫೈನಲ್ ಮ್ಯಾಚ್ ನಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ

ಭಾರತ ಆಸ್ಟ್ರೇಲಿಯಾ ಫೈನಲ್ ಮ್ಯಾಚ್ ನಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ

ವಿಶ್ವ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಅತ್ಯುನ್ನತ ಮಟ್ಟದ ಯಶಸ್ಸು ಸಾಧಿಸುತ್ತಿದೆ. ಎಲ್ಲಾ ಮಾದರಿಯಲ್ಲಿಯೂ ನಂಬರ್ 1 ಪಟ್ಟಕ್ಕೇರಿರುವ ಭಾರತ ತಂಡಕ್ಕೆ ಆಟಗಾರರ ವೈಯಕ್ತಿಕ ಸಾಧನೆಗಳು ಮತ್ತಷ್ಟು ಗರಿ ಮೂಡಿಸುವಂತಿದೆ. ಟೀಮ್ ಇಂಡಿಯಾದ ಭವಿಷ್ಯದ ತಾರೆ ಎನಿಸಿಕೊಂಡಿರುವ ಶುಬ್ಮನ್ ಗಿಲ್ ಏಕದಿನ ಮಾದರಿಯಲ್ಲಿ ವಿಶ್ವದ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರನ್ನು ಹಿಂದಿಕ್ಕಿರುವ ಶುಬ್ ಮನ್ ಗಿಲ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶುಬ್‌ಮನ್ ಗಿಲ್ ಈಗಾಗಲೇ ಹಲವು ದಾಖಲೆ ಬರೆದಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಈ ಸಾಧನೆ ಮಾಡಿರುವ ಕೇವಲ ನಾಲ್ಕನೇ ಕ್ರಿಕೆಟಿಗ ಶುಬ್ಮನ್ ಗಿಲ್. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಮಾತ್ರವೇ ಈ ಸಾಧನೆ ಮಾಡಿರುವ ಭಾರತೀಯ ಬ್ಯಾಟರ್‌ಗಳಾಗಿದ್ದರು. ಇದೀಗ ಈ ದಿಗ್ಗಜ ಆಟಗಾರರ ಸಾಲಿಗೆ ಶುಬ್ಮನ್ ಗಿಲ್ ಕೂಡ ಸೇರಿಕೊಂಡಿರುವುದು ವಿಶೇಷ  23ರ ಹರೆಯದ ಶುಬ್ಮನ್ ಗಿಲ್ ತನ್ನಲ್ಲಿರುವ ಅದ್ಭುತ ಕೌಶಲ್ಯದ ಮೂಲಕ ಈಗ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಇದನ್ನೂ ಓದಿ : ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಮಧ್ಯೆ ಬ್ರೋಮ್ಯಾನ್ಸ್ – ಇವರೇ ಟೀಮ್ ಇಂಡಿಯಾದ ಬಲಾಢ್ಯ ಕಂಬಗಳು

ಶುಬ್ಮನ್ ಗಿಲ್ ಪಂಜಾಬ್‌ನ ಫಜಿಲ್ಕಾ ಎನ್ನುವ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ತಂದೆ ಲಕ್ವಿಂದರ್ ಸಿಂಗ್ ಮೂಲತಃ ರೈತ. ಆದರೆ ಬಾಲ್ಯದಲ್ಲಿಯೇ ಶುಬ್ಮನ್ ಗಿಲ್ ಅವರಲ್ಲಿ ಕ್ರಿಕೆಟ್ ಮೇಲಿನ ಒಲವನ್ನು ಕಂಡ ಲಕ್ವಿಂದರ್ ಸಿಂಗ್ ಅದನ್ನು ಪೋಷಿಸಿ ಉತ್ತೇಜಿಸಿದರು. ಹೀಗಾಗಿಯೇ ಮಗನಿಗೆ ತಮ್ಮೂರಿನಲ್ಲಿ ಕ್ರಿಕೆಟ್‌ನ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಗಳು ಇಲ್ಲ ಎನ್ನುವ ಕಾರಣಕ್ಕೆ 2007ರಲ್ಲಿ ಮೊಹಾಲಿಗೆ ಇಡೀ ಕುಟುಂಬ ಸ್ಥಳಾಂತರಗೊಂಡಿದ್ದರು.

ಮಗನಿಗಾಗಿ ಕುಟುಂಬದ ತ್ಯಾಗ ಶುಬ್ಮನ್ ಗಿಲ್ ಕ್ರಿಕೆಟ್ ಭವಿಷ್ಯವನ್ನು ರೂಪಿಸಲು ಅವರ ಕುಟುಂಬ ತೆಗೆದುಕೊಂಡ ನಿರ್ಧಾರ ಸಣ್ಣದಲ್ಲ. ಮಗನ ಕನಸನ್ನು ನನಸಾಗಿಸಲು ಸುಮಾರು 15 ವರ್ಷಗಳ ಕಾಲ ಶುಬ್ಮನ್ ಕುಟುಂಬ ಗಟ್ಟಿಯಾಗಿ ನಿಂತಿತ್ತು. ತಮ್ಮ ಕೆಲಸ, ಕುಟುಂಬದ ಶುಭ ಸಮಾರಂಭಗಳು ಎಲ್ಲವನ್ನೂ ಬಿಟ್ಟು ಮಗನ ಕ್ರಿಕೆಟ್‌ಗಾಗಿ ಬೆಂಬಲವಾಗಿ ನಿಂತಿತ್ತು ಲಖ್ವಿಂದರ್ ಕುಟುಂಬ. ಮಗನ ಭವಿಷ್ಯಕ್ಕಾಗಿ ನಮ್ಮಿಂದ ಎಷ್ಟು ಸಮಯ ನೀಡಲು ಸಾಧ್ಯವಿತ್ತೋ ಅದನ್ನು ನಿಡಿದ್ದೇವೆ ಎಂದಿದ್ದಾರೆ ಗಿಲ್ ತಂದೆ ಲಖ್ವಿಂದರ್. ತಂದೆಯೇ ಮೊದಲ ಗುರು ಇನ್ನು ಶುಬ್ಮನ್ ಗಿಲ್‌ಗೆ ಆರಂಭಿಕ ಗುರು ಅವರ ತಂದೆಯೇ ಆಗಿದ್ದರು. ನಿತ್ಯವೂ 500-700 ಎಸೆತಗಳನ್ನು ಎದುರಿಸುವಂತೆ ಮಾಡಿದ್ದರು ಗಿಲ್ ತಂದೆ. ಇನ್ನು ವೇಗದ ಬೌಲಿಂಗ್ ಎದುರಿಸಲು ಸಹಾಯವಾಗುವಂತೆ ತಮ್ಮದೇ ಆದ ತಂತ್ರವನ್ನು ಬಳಸಿಕೊಂಡು ಅಭ್ಯಾಸ ಮಾಡಿಸುತ್ತಿದ್ದರು. ಹೀಗಾಗಿ ಗಿಲ್ ಅದ್ಭುತದ ಸಿದ್ಧತೆನ್ನು ಬಾಲ್ಯದಲ್ಲಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ನಂತರ ಅಂಡರ್ 14 ವಿಜಯ್ ಮರ್ಜೆಂಟ್ ಟ್ರೋಫಿಯಲ್ಲಿ ಪಂಜಾಬ್ ಪರ ಆಡುವ ಅವಕಾಶ ಗಿಟ್ಟಿಸಿಕೊಂಡ ಗಿಲ್ ನಂತರ ಸಿಕ್ಕ ಅವಕಾಶವನ್ನು ಬಾಚಿಕೊಳ್ಳುತ್ತಲೇ ಮುನ್ನುಗ್ಗಿದರು. ನಂತರ ಅಂಡರ್ 19 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾದ ಬಳಿಕ ಭಾರತ ತಂಡಕ್ಕೆ ಸೇರಿಕೊಳ್ಳಲು ವೇದಿಕೆಯನ್ನು ಸೃಷ್ಟಿಸಿಕೊಂಡರು. ಈಗ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ.

Shantha Kumari