ಆರ್‌ಆರ್‌ಆರ್‌ಗೆ ಆಸ್ಕರ್ ಪ್ರಶಸ್ತಿಯ ನಿರೀಕ್ಷೆ – ಯುಎಸ್ ಗೆ ಹೊರಟ ಜ್ಯೂನಿಯರ್ ಎನ್‌ಟಿಆರ್

ಆರ್‌ಆರ್‌ಆರ್‌ಗೆ ಆಸ್ಕರ್ ಪ್ರಶಸ್ತಿಯ ನಿರೀಕ್ಷೆ – ಯುಎಸ್ ಗೆ ಹೊರಟ ಜ್ಯೂನಿಯರ್ ಎನ್‌ಟಿಆರ್

ಈ ಬಾರಿ ಭಾರತ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಎದುರು ನೋಡುತ್ತಿದೆ. ಯಾಕೆಂದರೆ, ಆರ್.ಆರ್. ಆರ್ ಸಿನಿಮಾ ಈ ಬಾರಿ ಆಸ್ಕರ್ ಗೆಲ್ಲಲಿದೆ ಎಂಬ ವಿಶ್ವಾಸ ಕೋಟಿ ಕೋಟಿ ಭಾರತೀಯ ಅಭಿಮಾನಿಗಳದ್ದು. ಎಸ್. ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ತಂಡ ಈ ಬಾರಿ ಆಸ್ಕರ್ ಪ್ರಶಸ್ತಿ ಗೆಲ್ಲುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಮಾರ್ಚ್ 12 ರಂದು ಲಾಸ್ ಏಂಜಲೀಸ್‌ನಲ್ಲಿ ಆಸ್ಕರ್ ಸಮಾರಂಭ ನಡೆಯುತ್ತಿದೆ. ಅಕಾಡೆಮಿ ಅವಾರ್ಡ್ ಸಮಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಈಗಾಗಲೇ ಆರ್ ಆರ್ ಆರ್ ಸಿನಿಮಾ ತಂಡ ಯು ಎಸ್ ತಲುಪಿಯಾಗಿದೆ. ರಾಮ್‌ಚರಣ್ ತೇಜಾ ಕೂಡಾ ಯು.ಎಸ್ ನಲ್ಲಿದ್ದಾರೆ. ಆದರೆ ಜೂ.ಎನ್ ಟಿ ಆರ್ ಮಾತ್ರ ಇನ್ನೂ ಹೊಗಿರಲಿಲ್ಲ. ಜೂ.ಎನ್ ಟಿ ಆರ್ ಯಾಕೆ ಹೋಗಿಲ್ಲ, ಹೋಗಲ್ವಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು.

ಇದನ್ನೂ ಓದಿ:  ಜ್ಯೂನಿಯರ್ ಎನ್‌ಟಿಆರ್ ಸಿನಿಮಾದಲ್ಲಿ ಜಾನ್ವಿ ಕಪೂರ್ – ಬಾಲಿವುಡ್ ಬೆಡಗಿಯ ಫಸ್ಟ್ ಲುಕ್ ರಿಲೀಸ್

ಕೊನೆಗೂ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೂ.ಎನ್ ಟಿ ಆರ್ ಯುಎಸ್ ಫ್ಲೈಟ್ ಹತ್ತಿದ್ದಾರೆ. ಹೈದರಾಬಾದ್ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿರುವ ಜೂ.ಎನ್ ಟಿ ಆರ್ ಆಸ್ಕರ್ ಸಮಾರಂಭಕ್ಕೆ ಹೊರಟಿದ್ದಾರೆ. ಇತ್ತೀಚೆಗಷ್ಟೆ ರಾಮ್ ಚರಣ್ ತೇಜಾ ಯುಎಸ್‌ಗೆ ಬರಿಗಾಲಿನಲ್ಲೇ ಹೊರಟಿದ್ದರು. ರಾಮ್ ಚರಣ್ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜೂ.ಎನ್ ಟಿ ಆರ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಕಾರಣ ತಡವಾಗಿ ಯು ಎಸ್ ಹೋಗುತ್ತಿದ್ದಾರೆ. ಈಗಾಗಲೇ ಯುಎಸ್ ನಲ್ಲಿ ಆರ್ ಆರ್ ಆರ್ ಸಿನಿಮಾದ ಸ್ಕ್ರೀನಿಂಗ್ ಆಗಿದೆ.  ಸ್ಕ್ರೀನಿಂಗ್ ವೇಳೆ ನಿರ್ದೇಶಕ ರಾಜಮೌಳಿ, ನಟ ರಾಮ್ ಚರಣ್ ಮತ್ತು ಕೀರವಾಣಿ ಭಾಗಿಯಾಗಿದ್ದರು. ಇದೀಗ ಜೂ ಎನ್ ಟಿ ಆರ್, ಆರ್ ಆರ್ ಆರ್ ತಂಡ ಸೇರಿಕೊಳ್ಳುತ್ತಾರೆ. ಈಗಾಗಲೇ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಗೆದ್ದು ಬೀಗಿರುವ ಆರ್ ಆರ್ ಆರ್ ಇದೀಗ ಪ್ರತಿಷ್ಠಿತ ಆಸ್ಕರ್ ಗೆ ಎದುರು ನೋಡುತ್ತಿದೆ.

suddiyaana