ಅತ್ತಿಬೆಲೆ, ಸರ್ಜಾಪುರವರೆಗೂ ನಮ್ಮ ಮೆಟ್ರೊ ರೈಲುಗಳ ಸಂಚಾರ ವಿಸ್ತರಣೆ!

ಅತ್ತಿಬೆಲೆ, ಸರ್ಜಾಪುರವರೆಗೂ ನಮ್ಮ ಮೆಟ್ರೊ ರೈಲುಗಳ ಸಂಚಾರ ವಿಸ್ತರಣೆ!

ಸಿಲಿಕಾನ್‌ ಸಿಟಿ ಬೆಂಗಳೂರಿಗರ ಪಾಲಿಗೆ ‘ನಮ್ಮ ಮೆಟ್ರೋ’ ರೈಲು ಸಾರಿಗೆ ವ್ಯವಸ್ಥೆಯ ಜೀವನಾಡಿ ಎಂದೆನಿಸಿದೆ. ಟ್ರಾಫಿಕ್‌ ಕಿರಿಕಿರಿಯಿಂದ ಬೇಸತ್ತು, ಲಕ್ಷಾಂತರ ಜನರು ಮೆಟ್ರೋ ಮೂಲಕವೇ ಪ್ರಯಾಣಿಸ್ತಿದ್ದಾರೆ. ಬಿಎಂಆರ್‌ಸಿಎಲ್‌ ಕೂಡ ನಮ್ಮ ಮೆಟ್ರೋವನ್ನು ವಿಸ್ತರಿಸುತ್ತಲೇ ಇದೆ. ಇದೀಗ ಬಿಎಂಆರ್‌ಸಿಲ್‌ ಅತ್ತಿಬೆಲೆ, ಸರ್ಜಾಪುರಕ್ಕೆ ಜನರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ನಾಯಕತ್ವವನ್ನು ಹಾಡಿ ಹೊಗಳಿದ ವ್ಲಾಡಿಮಿರ್‌ ಪುಟಿನ್‌! – ಹೊಗಳಿಕೆ ಹಿಂದಿನ ಮರ್ವವೇನು?

ಹೌದು, ಅತ್ತಿಬೆಲೆ ಹಾಗೂ ಸರ್ಜಾಪುರಕ್ಕೆ ನಮ್ಮ ಮೆಟ್ರೋ ರೈಲು ಮಾರ್ಗವನ್ನು ವಿಸ್ತರಣೆ ಮಾಡಲಾಗುತ್ತಿದೆ. ಈ ಬಗ್ಗೆ  ಸಂಸದ ಡಿಕೆ ಸುರೇಶ್‌ ಮಾಹಿತಿ ನೀಡಿದ್ದಾರೆ. ”ಈಗಾಗಲೇ ಬೊಮ್ಮಸಂದ್ರದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಚಂದಾಪುರ ಮಾರ್ಗವಾಗಿ ಆನೇಕಲ್‌ ಪಟ್ಟಣ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರಕ್ಕೂ ಮೆಟ್ರೋ ರೈಲು ಸೌಲಭ್ಯ ಸಿಗಲಿದೆ. ಗೊಟ್ಟಿಗೆರೆ ಮಾರ್ಗವಾಗಿ ಬನ್ನೇರುಘಟ್ಟದಿಂದ ಜಿಗಣಿಗೆ ಮೆಟ್ರೋ ಸಂಪರ್ಕ ಸಿಗಲಿದೆ. ಈಗಾಗಲೇ ಡಿಪಿಆರ್‌ಗೆ ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಎಲೆಕ್ಟ್ರಾನಿಕ್ಸ್‌ ಸಿಟಿಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ಆರ್‌.ವಿ.ರಸ್ತೆ-ಬೊಮ್ಮಸಂದ್ರ (18.82 ಕಿ.ಮೀ.) ಹಳದಿ ಮಾರ್ಗಕ್ಕೆ ಚಾಲಕ ರಹಿತ ರೈಲು ಫೆಬ್ರವರಿ ಮಧ್ಯಂತರ ಅಥವಾ ಅಂತ್ಯಕ್ಕೆ ಬರುವ ಸಾಧ್ಯತೆ ಇದೆ. ಸೆಪ್ಟೆಂಬರ್‌ನಿಂದ ಹಳದಿ ಮಾರ್ಗ ಜನಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

Shwetha M