ಹೃದಯದ ಆರೋಗ್ಯಕ್ಕೆ ಈ ವ್ಯಾಯಾಮ ಬೆಸ್ಟ್! – ದಿನಕ್ಕೆ 20 ನಿಮಿಷ ಹೀಗೆ ಮಾಡಿದ್ರೆ ಆಯಸ್ಸು ಹೆಚ್ಚಾಗುತ್ತೆ!

ಈಗೀಗ ಸಣ್ಣ ವಯಸ್ಸಲ್ಲೇ ನಾನಾ ಖಾಯಿಲೆಗಳು ಕಾಡುತ್ತಿವೆ. ಅನೇಕರು ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಜೀವನ ಶೈಲಿ. ನಾವು ಆರೋಗ್ಯವಾಗಿ ಇರಬೇಕಾದ್ರೆ ಆಹಾರದ ಜೊತೆಗೆ ನಮ್ಮ ದೇಹಕ್ಕೆ ವ್ಯಾಯಮ ಕೂಡ ಬಹಳ ಮುಖ್ಯ. ಹೀಗಾಗಿ ಈ ವ್ಯಾಯಾಮಗಳನ್ನ ಪ್ರತಿನಿತ್ಯ ಮಾಡಿದ್ರೆ ನಮ್ಮ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
ಇದನ್ನೂ ಓದಿ: ಶ್ರೇಷ್ಠಾ ಕುತಂತ್ರ.. ಆದಿ, ಭಾಗ್ಯ ಬ್ರೇಕ್‌ಅಪ್.. ಸೊಸೆ ಜೀವನ ಸರಿ ಮಾಡಲ್ವಾ ಕುಸುಮಾ?
ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅಧಿಕ ರಕ್ತದೊತ್ತಡ ಅಥವಾ ಅಧಿಕ ಒತ್ತಡವು ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಅಕಾಲಿಕ ಮರಣದಂತಹ ಗಂಭೀರ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಒಂದು ವರದಿಗಳ ಪ್ರಕಾರ ಯುಎಸ್‌ನಲ್ಲಿ ಅರ್ಧದಷ್ಟು ಹೆಚ್ಚಿನ ವಯಸ್ಕರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶ್ವದದಾದ್ಯಂತ ಪ್ರಮುಖ ಆರೋಗ್ಯ ಕಾಳಜಿ ಇದಾಗಿದ್ದು ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರಮುಖವಾಗಿದೆ. ಇದಕ್ಕಾಗಿ, ನಾವು ನಮ್ಮ ದೈನಂದಿನ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ. ಪೋಷಕಾಂಶ ಆಹಾರಗಳ ಸೇವನೆ ಮಾಡುವುದರ ಜೊತೆಗೆ ವ್ಯಾಯಾಮ ಕೂಡ ಮಾಡಬೇಕು.
ಓಟ, ಸೈಕ್ಲಿಂಗ್ ಮತ್ತು ಮೆಟ್ಟಿಲು ಹತ್ತುವಂತಹ ವ್ಯಾಯಾಮ ಚಟುವಟಿಕೆಗಳನ್ನು ಹೆಚ್ಚಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.ಉದಾಹರಣೆಗೆ, ಒಬ್ಬ ವ್ಯಕ್ತಿಯು ದಿನಕ್ಕೆ 21 ನಿಮಿಷ ವ್ಯಾಯಾಮ ಮಾಡಿದರೆ, ಅವರ ಸಿಸ್ಟೊಲಿಕ್ ರಕ್ತದೊತ್ತಡ ಸುಮಾರು 2 ಎಂಎಂಹೆಚ್ಜಿ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಓಟ, ಸೈಕ್ಲಿಂಗ್ ಮತ್ತು ಮೆಟ್ಟಿಲು ಹತ್ತುವುದು ಮಾತ್ರವಲ್ಲದೆ ಇತರ ಅಭ್ಯಾಸಗಳು ಸಹ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ನೋಡಿರಿ

