ಭೋಗ ನಂದೀಶ್ವರನ ಬಳಿ ಬಂದು ಪ್ರದೀಪ್ ಈಶ್ವರ್‌ ಪ್ರಮಾಣ ಮಾಡಲಿ – ಡಾ ಕೆ ಸುಧಾಕರ್ ಸವಾಲು

ಭೋಗ ನಂದೀಶ್ವರನ ಬಳಿ ಬಂದು ಪ್ರದೀಪ್ ಈಶ್ವರ್‌ ಪ್ರಮಾಣ ಮಾಡಲಿ – ಡಾ ಕೆ ಸುಧಾಕರ್ ಸವಾಲು

ಚಿಕ್ಕಬಳ್ಳಾಪುರದ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಕದನ ಮತ್ತೊಂದು ಹಂತಕ್ಕೆ ತಲುಪಿದೆ. ಭೂಮಿ ಮಂಜೂರು ವಿಚಾರವಾಗಿ ಆಣೆ ಪ್ರಮಾಣದ ಸವಾಲ್ ಹಾಕಿದ್ದಾರೆ. 20 ಸಾವಿರ ನಿವೇಶನಕ್ಕೆ ಭೂಮಿ ಮಂಜೂರು ಮಾಡಿಸಿದ್ದೇನೆ ಎಂದು ಭೋಗ ನಂದೀಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡುತ್ತೇನೆ. ಒಂದು ವೇಳೆ ನಾನು ಈ ಕೆಲಸ ಮಾಡಿಲ್ಲ ಎಂದಾದರೆ ಶಾಸಕ ಪ್ರದೀಪ್ ಈಶ್ವರ್ ಕೂಡ ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಡಾ.ಕೆ ಸುಧಾಕರ್‌ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ʼದ್ವೇಷವೇ ನಮ್ಮ ತಂದೆ-ತಾಯಿ, ದ್ವೇಷವೇ ನಮ್ಮ ಬಂಧು-ಬಳಗʼ ಎಂಬಂತಿದೆ ಕಾಂಗ್ರೆಸ್‌ ಸರ್ಕಾರದ ಆಡಳಿತ – ಬಿಜೆಪಿ ಕಿಡಿ

ಚಿಕ್ಕಬಳ್ಳಾಪುರ ವಸತಿ ಯೋಜನೆಗಳ ಬಗ್ಗೆ ಶಾಸಕರು ಸುಳ್ಳಿನ ಅಭಿಯಾನ ನಡೆಸಿದ್ದಾರೆ. ಸುಳ್ಳೇ ಅವರ ಮನೆ ದೇವರು ಅನ್ನೋ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಸಿನಿಮಾ ಡೈಲಾಗ್‌ಗಳನ್ನು ಹಾಕಿಕೊಂಡು ಓಡಾಡಿದ್ರೆ ರಾಜಕೀಯ ತುಂಬಾ ದಿನ‌ ನಡೆಯಲ್ಲ.  ಜನರಿಗೆ ನಿವೇಶನ ನೀಡಲು ಒಟ್ಟು 555 ಎಕರೆ ಜಮೀನು ಮಂಜೂರು ಆಗಿದೆ. ನಾನೇ ಖುದ್ದಾಗಿ ಗ್ರಾಮ ಸಭೆ ಮಾಡಿ ಫಲಾನುಭವಿ ಆಯ್ಕೆ ನಡೆಸಿದ್ದೇನೆ. ಇದು ಸಚಿವ ಸಂಪುಟದಲ್ಲೇ ಮಂಜೂರಾತಿಯಾಗಿದೆ ಎಂದು ಹೇಳಿದ್ದಾರೆ.

ನಾನು ನಿವೇಶನ ನೀಡಿದ್ದು ಸುಳ್ಳು ಎಂದಾದಲ್ಲಿ, ಭೋಗ ನಂದೀಶ್ವರ ದೇವಸ್ಥಾನದಲ್ಲಿ ದೀಪ ಹಚ್ಚಿ ಪ್ರಮಾಣ ಮಾಡಲು ಸಿದ್ಧನಿದ್ದೇನೆ.ಇಲ್ಲ ಎಂದು ಈಗಿನ ಶಾಸಕರು ಪ್ರಮಾಣ ಮಾಡಲಿ. ಚುನಾವಣೆಯಲ್ಲಿ ನಾವು ಸೋತಿರಬಹುದು, ಆದರೆ ಸತ್ತಿಲ್ಲ ಎಂದು ಡಾ ಕೆ ಸುಧಾಕರ್‌ ವಾಗ್ದಾಳಿ ನಡೆಸಿದ್ದಾರೆ.

suddiyaana