ಅಂಗಡಿಗೆ ಹೋಗಲು ಕಷ್ಟ ಅನ್ನುವವರಿಗೆ ‘ಮಿಲ್ಕ್ ಎಟಿಎಂ’ ಸೇವೆ – ಮನೆಗಳಿಗೇ ಬರುತ್ತೆ ಫ್ರೆಶ್ ಹಾಲು!

ಅಂಗಡಿಗೆ ಹೋಗಲು ಕಷ್ಟ ಅನ್ನುವವರಿಗೆ ‘ಮಿಲ್ಕ್ ಎಟಿಎಂ’ ಸೇವೆ – ಮನೆಗಳಿಗೇ ಬರುತ್ತೆ ಫ್ರೆಶ್ ಹಾಲು!

ಬೆಳಗ್ಗೆ ಎದ್ದು ಅಂಗಡಿಗೆ ಹೋಗಿ ಹಾಲು ತರುವುದು ದೈನಂದಿನ ದಿನಚರಿಯೂ ಹೌದು. ಇನ್ನು ಕೆಲವರು ತಮ್ಮ ಮನೆ ಬಾಗಿಲಿಗೆ ತಾಜಾಹಾಲು ತರಿಸಿಕೊಳ್ಳುತ್ತಾರೆ. ಸಿಟಿ ಮಂದಿಗೂ ಕೂಡಾ ದಿನದ ಆರಂಭ ಆಗುವುದು ಹಾಲು ಖರೀದಿಯಿಂದಲೇ. ಆದರೆ, ಕೆಲವರಿಗೆ ಅಂಗಡಿಗೆ ಹೋಗಿ ಹಾಲು ತರಲು ಕಷ್ಟ ಕೂಡಾ ಆಗಬಹುದು. ಇಂಥವರಿಗಾಗಿ ಹಾಲಿನ ಎಟಿಎಂ ಸೇವೆ ಕೂಡಾ ಸಿಗಲಿದೆ. ಈಗಾಗಲೇ ಬಿಹಾರದ ಭಾಗಲ್ಪುರ್ ನಿವಾಸಿ ವಿನಯ್ ಕುಮಾರ್ ಅವರು ಮಿಲ್ಕ್ ಎಟಿಎಂ ಸೇವೆ ಆರಂಭ ಮಾಡಿದ್ದು, ಕೃಷಿ ಮೇಳದಲ್ಲೂ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ : ಲೀಟರ್ ಹಾಲಿಗೆ ₹200, ಕೆಜಿ ಕೋಳಿ ಮಾಂಸಕ್ಕೆ ₹1,100 – ಪಾಪಿ ಪಾಕಿಸ್ತಾನದ ಸ್ಥಿತಿ ಅಧೋಗತಿ..!

ಸ್ಥಳೀಯರ ಬೇಡಿಕೆಯನ್ನು ಪೂರೈಸಲು ಈ ಹಿಂದೆ ವಿನಯ್ ತನ್ನ ಅಂಗಡಿಯೊಳಗೆ ಸಣ್ಣ ಹಾಲಿನ ಎಟಿಎಂ ಸ್ಥಾಪಿಸಿದ್ದರು. ಆದರೆ ಬೇಡಿಕೆ ಹೆಚ್ಚುತ್ತಿರುವುದನ್ನು ಕಂಡ ಕೂಡಲೇ ತನ್ನ ಮಿಲ್ಕ್ ಎಟಿಎಂಗೆ ಚಕ್ರಗಳನ್ನು ಅಳವಡಿಸಿ ಅದನ್ನು ಮೊಬೈಲ್ ಮಿಲ್ಕ್ ಎಟಿಎಂ ಮಾಡಿಕೊಂಡಿದ್ದಾರೆ. ಮೊದಲ 100 ಗ್ರಾಹಕರಿಗೆ ಸ್ವಲ್ಪ ಸಬ್ಸಿಡಿ ದರದಲ್ಲಿ ಲೀಟರ್‌ಗೆ 50 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ ಹಾಲು ನೀಡುತ್ತಿದ್ದಾರೆ. ವಿನಯ್ ಅವರು ಈ ಹಿಂದೆ ವಿಮಾ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಕೆಲಸವನ್ನು ತೊರೆದ ನಂತರ, ಅವರು ತಮ್ಮ ಸ್ಟಾರ್ಟ್ಅಪ್ ಸಂಸ್ಥೆ ಸ್ಥಾಪಿಸಲು 1 ವರ್ಷ ಸಂಶೋಧನೆ ನಡೆಸಿದ್ದಾರೆ. ಅವರು ಎಟಿಎಂಎ ಭಾಗಲ್ಪುರ್ (ಕೃಷಿ ಸಂಸ್ಥೆ) ನಲ್ಲಿ ತರಬೇತಿಯನ್ನು ಸಹ ತೆಗೆದುಕೊಂಡಿದ್ದಾರೆ. ಟಿವಿ ನೋಡುತ್ತಿದ್ದಾಗ ಮೊಬೈಲ್ ಮಿಲ್ಕ್ ಎಟಿಎಂ ಪರಿಕಲ್ಪನೆ ನನಗೆ ಹೊಳೆಯಿತು ಎಂದು ವಿನಯ್ ಹೇಳಿದ್ದಾರೆ. ಬಳಿಕ ಬಿಹಾರದ ಕೃಷಿ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ತರಬೇತಿ ಪಡೆದು ಮಿಲ್ಕ್ ಎಟಿಎಂ ಆರಂಭಿಸಿದ್ದಾಗಿ ತಿಳಿಸಿದ್ದಾರೆ. ನಮ್ಮ ಹಾಲಿನ ಎಟಿಎಂ ಮೂಲಕ ಜನರ ವಿಶ್ವಾಸಗಳಿಸಿಕೊಂಡಿದ್ದೇನೆ. ಸರಿಯಾದ ಸಮಯಕ್ಕೆ ಅವರಿಗೆ ಶುದ್ಧ ಹಾಲನ್ನು ತಲುಪಿಸುತ್ತಿರುವುದಾಗಿ ತಿಳಿಸಿದ್ದಾರೆ. ಮನೆಗಳಲ್ಲದೆ ಕೆಲವು ಹೋಟೆಲ್ಗಳಿಗೆ ಹಾಲು ಪೂರೈಕೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಹಾಲಿನ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಮಿಲ್ಕ್ ಎಟಿಎಂನಿಂದ ಮೊದಲು ಲೀಟರ್ ಹಾಲು 48 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಹೋಮ್ ಡೆಲಿವರಿಗೆ 52 ರೂಪಾಯಿ ತೆಗೆದುಕೊಳ್ಳಲಾಗುತ್ತಿದೆ. ಹಾಲನ್ನು 4 ಡಿಗ್ರಿ ಸೆಂಟಿಗ್ರೇಡ್ ತಣ್ಣಗಾಗಿಸಿ ನಂತರ ಎಟಿಎಂ ಮೂಲಕ ವಿತರಿಸಲಾಗುತ್ತದೆ ಎಂದು ವಿನಯ್ ಹೇಳಿದ್ದಾರೆ.

suddiyaana