ಮಾಜಿ ಪತಿ ನಾಗಚೈತನ್ಯ ಸಹಿಯ ಟ್ಯಾಟೂ ಕಾಣಿಸುತ್ತಿಲ್ಲ – ಪ್ರೀತಿಯ ನೆನಪನ್ನು ಸಂಪೂರ್ಣ ಅಳಿಸಿಹಾಕಿದ್ರಾ ನಟಿ ಸಮಂತಾ?
ಪ್ರೀತಿ ಪಾತ್ರರ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್ ಮಾಮೂಲಿಯಾಗಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಟ್ರೆಂಡ್ ಫಾಲೋ ಮಾಡಿದ್ದಾರೆ. ತಮಗಿಷ್ಟವಾದವರ ಹೆಸರನ್ನು ಟ್ಯಾಟೂ ಮೂಲಕ ಸೆಲೆಬ್ರಿಟಿಗಳು ಹಾಕಿಸಿಕೊಂಡಿದ್ದಾರೆ. ನಟಿ ಸಮಂತಾ ಕೂಡ ಇದಕ್ಕೆ ಹೊರತಾಗಿಲ್ಲ. ಸಮಂತಾ ತನ್ನ ಮಾಜಿ ಪತಿಯ ಸಹಿಯ ಟ್ಯಾಟೂವನ್ನು ಪ್ರೀತಿ ಮಾಡುವಾಗ ಹಾಕಿಸಿಕೊಂಡಿದ್ದರು. ಇದೀಗ ಸಮಂತಾ ತನ್ನ ಮಾಜಿ ಪತಿಯ ನೆನಪನ್ನು ಅಳಿಸಿ ಹಾಕಿದ್ದಾರೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ – ಅನಿಮಲ್ ಸಿನಿಮಾದಲ್ಲಿ ರಣ್ಬೀರ್ ಕಪೂರ್ ಜೊತೆ ಸುದೀರ್ಘ ಚುಂಬನ
ತೆಲುಗು ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಪರಸ್ಪರ ಪ್ರೀತಿಸಿ ಮದುವೆ ಆದವರು. 10 ವರ್ಷಗಳ ಕಾಲ ಗೆಳೆಯರಾಗಿದ್ದರು. ನಂತರ ಪ್ರೇಮಿಗಳಾದರು. ಬಳಿಕ ಮದುವೆ ಆಗುವ ಮೂಲಕ ಪ್ರೀತಿಗೆ ಹೊಸ ಅರ್ಥ ನೀಡಿದರು. ವಿಪರ್ಯಾಸವೆಂದರೆ ಮದುವೆ ಆಗಿ ನಾಲ್ಕು ವರ್ಷ ಕಳೆಯುವುದರೊಳಗೆ ಇಬ್ಬರು ದೂರ ದೂರ ಆದರು. 2021ರ ಅಕ್ಟೋಬರ್ನಲ್ಲಿ ಡೈವೋರ್ಸ್ ಪಡೆದುಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಗುಡ್ಬೈ ಹೇಳಿದರು. ಇಬ್ಬರ ದಾಂಪತ್ಯ ಜೀವನ ಬೇರೆ ಬೇರೆಯಾಗಿ ಎರಡು ವರ್ಷಗಳು ಕಳೆದಿದೆ. ಆದರೂ ಇವರು ಮತ್ತೆ ಒಂದಾಗಬೇಕು ಎಂಬುದೇ ಅಭಿಮಾನಿಗಳ ಕೋರಿಕೆಯಾಗಿತ್ತು. ಆದರೆ, ಇದು ಎಂದಿಗೂ ಸಾಧ್ಯವಿಲ್ಲ ಎಂಬಂತೆ ಸಮಂತಾ ಒಂದು ಫೋಟೋ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಸಮಂತಾ ಈಗ ನಾಗಚೈತನ್ಯ ಸಹಿ ಇರುವ ಟ್ಯಾಟುವನ್ನು ಅಳಿಸಿಹಾಕಿದ್ದಾರೆ.
ಸಮಂತಾ ದೇಹದ ಮೇಲೆ ಮೂರು ಟ್ಯಾಟೂ ಇತ್ತು. ವೈಎಂಸಿ ಎಂಬ ಟ್ಯಾಟೂ ಬೆನ್ನಿನ ಭಾಗದಲ್ಲಿ ಇದೆ. ಇದರ ಅರ್ಥ ‘ಯೇ ಮಾಯಾ ಚೇಸಾವೆ’ ಎಂದು. ಸಮಂತಾ ಅವರನ್ನು ಸ್ಟಾರ್ ಆಗಿ ಮಾಡಿದ ಸಿನಿಮಾ ಇದು. ಅದರ ನೆನಪಿಗೆ ಸಮಂತಾ ಈ ಟ್ಯಾಟೂ ಹಾಕಿಸಿಕೊಂಡಿದ್ದರು. ಪಕ್ಕೆಲುಬು ಸಮೀಪ ನಾಗ ಚೈತನ್ಯ ಅವರ ಸಹಿಯ ಟ್ಯಾಟೂ ಇತ್ತು. ಇದನ್ನು ಸಮಂತಾ ತೆಗೆಸಿದ್ದಾರೆ. ಸದ್ಯ ಸಮಂತಾ ಅವರು ಹೊಸ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಹೊಟ್ಟೆಯ ಭಾಗ ಕೂಡ ಕಾಣಿಸಿದೆ. ಆದರೆ, ನಾಗ ಚೈತನ್ಯ ಅವರ ಸಹಿಯ ಟ್ಯಾಟೂ ಕಾಣಿಸಿಲ್ಲ. ಈ ಮೂಲಕ ಸಮಂತಾ ತನ್ನ ಮಾಜಿ ಪತಿಯ ನೆನಪನ್ನು ಅಳಿಸಿಹಾಕಿದ್ದಾರೆ.