ತೂಕ ಇಳಿಸಲು ಈ ಪೊರಕೆ ತಗೋಬೇಕಾ? – ಪೊರಕೆ ಮೇಲೆ ಕೊಲೆಸ್ಟ್ರಾಲ್ ಚಾರ್ಟ್!
ಅಂಗಡಿಗಳಿಗೆ ತೆರಳಿದಾಗ ನಾವು ಯಾವುದೇ ವಸ್ತು ಖರೀದಿಸಿದರೆ ಅದರ ಬೆಲೆ ಹಾಗೂ ಗುಣಮಟ್ಟವನ್ನು ಮಾತ್ರ ಪರಿಶೀಲಿಸುತ್ತೇವೆ. ನಾವು ಖರೀದಿಸುವ ವಸ್ತುವಿನ ಪ್ಯಾಕ್ನಲ್ಲಿ ಏನೆಲ್ಲಾ ಬರೆದಿದೆ ಎಂದು ಯಾವತ್ತೂ ನೋಡುವುದಿಲ್ಲ. ಮನೆಗೆ ಬಂದ ಕೂಡಲೇ ನಾವು ಖರೀದಿಸಿದ ವಸ್ತುವನ್ನು ಪ್ಯಾಕ್ನಿಂದ ಹೊರತೆಗೆದು ಬಳಸುತ್ತೇವೆ. ಅದರ ಕವರ್ ಅನ್ನು ಕಸದ ಬುಟ್ಟಿಗೆ ಹಾಕುತ್ತೇವೆ. ಆದರೆ ಇಲ್ಲೊಬ್ಬ ಪೊರಕೆಯನ್ನು ಖರೀದಿಸಿದ್ದು, ಅದರ ಕವರ್ನಲ್ಲಿ ಏನು ಬರೆದಿದ್ದಾರೆ ಎಂದು ಫೋಟೋ ತೆಗೆದು ಪೋಸ್ಟ್ ಮಾಡಿದ್ದಾನೆ.
ಸಾಮಾನ್ಯವಾಗಿ ನಾವು ಪೊರಕೆ ಖರೀದಿಸಿದ ಮೇಲೆ ಕವರ್ನಿಂದ ಪೊರಕೆ ತೆಗೆದು ಉಪಯೋಗಿಸುತ್ತೇವೆ. ಆದರೆ ಅದರ ಪ್ಯಾಕ್ನಲ್ಲಿ ಏನು ಬರೆದಿದೆ ಎಂದು ನೋಡುವುದಿಲ್ಲ. ಇದೀಗ ಇಲ್ಲೊಬ್ಬ ವ್ಯಕ್ತಿ, ಪೊರಕೆ ಕವರ್ ಪೋಸ್ಟ್ ಮಾಡಿದ್ದಾನೆ. ಅದ್ರಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಹೇಳಿದ್ದಾನೆ. ಪೊರಕೆ ಕವರ್ನಲ್ಲಿ ಕೊಲೆಸ್ಟ್ರಾಲ್ ಬಗ್ಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಮನೆ ಕ್ಲೀನ್ ಮಾಡುವಾಗ ಸಿಕ್ತು ಅಪ್ಪನ ಪಾಸ್ಬುಕ್ – ಕೋಟ್ಯಾಧಿಪತಿಯಾದ ಮಗ..!
ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ನಾನಾ ಸಮಸ್ಯೆ ಆಗ್ತಿದೆ. ಇದ್ರ ಬಗ್ಗೆ ಮಾಹಿತಿ ನೀಡಲು ಪೊರಕೆ ಕಂಪನಿ ನಿರ್ಧರಿಸಿದಂತಿದೆ. ಜನರಿಗೆ ಕೊಲೆಸ್ಟ್ರಾಲ್ ಬಗ್ಗೆ ಮಾಹಿತಿ ನೀಡಲು ಪೊರಕೆ ಕವರ್ ಬಳಸಿಕೊಂಡಿದೆ. ಕವರ್ ಮೇಲೆ ಕೊಲೆಸ್ಟ್ರಾಲ್, ಸೋಡಿಯಂ, ಕೊಬ್ಬಿನ ಪ್ರಮಾಣ ಸೇರಿದಂತೆ ಕೆಲ ಮಾಹಿತಿಯನ್ನು ಬರೆಯಲಾಗಿದೆ. ಸದ್ಯ ಈ ಫೋಸ್ಟ್ ಭಾರಿ ವೈರಲ್ ಆಗಿದೆ.
@baldwhiner ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ಪೋಸ್ಟ್ ಮಾಡಲಾಗಿದೆ. ಪೋಸ್ಟ್ ನಲ್ಲಿ ನೀವು ಪೊರಕೆ ಕವರ್ ನೋಡ್ಬಹುದು. ಅದ್ರಲ್ಲಿ ಸಂಪೂರ್ಣ ಕ್ಯಾಲೋರಿ ಚಾರ್ಟ್ ಇದೆ. ಕೊಲೆಸ್ಟ್ರಾಲ್, ಸೋಡಿಯಂ, ಕೊಬ್ಬಿನ ಪ್ರಮಾಣವನ್ನು ಬರೆಯಲಾಗಿದೆ. ಯಾರಾದರೂ ತಿನ್ನಲು ಬಯಸಿದರೆ ಎಂದು ವ್ಯಕ್ತಿ ಫೋಟೋ ಜೊತೆ ಶೀರ್ಷಿಕೆ ಹಾಕಿದ್ದಾನೆ. ಇದು ಯುಎಸ್ ಎ ಮೆಕ್ಸಿಕನ್ ಕಂಪನಿ ತಯಾರಿಸಿದ ಪೊರಕೆ ಎಂಬುದು ತಿಳಿದು ಬಂದಿದೆ.
ಪೊರಕೆ ಕವರ್ ಮೇಲಿರುವ ಕ್ಯಾಲೋರಿ ಲೀಸ್ಟ್ ನೋಡಿ ತಮಾಷೆ ಮಾಡಿದ್ದಾರೆ. ಒಬ್ಬ ವ್ಯಕ್ತಿ 30 ನಿಮಿಷ ಈ ಪೊರಕೆ ಬಳಸಿದ್ರೆ 300 ಕ್ಯಾಲೋರಿ ಬರ್ನ್ ಮಾಡಬಹುದು ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಆಶ್ಚರ್ಯಕರ ವಿಷಯ, ಪೊರಕೆಯ ಪೌಷ್ಟಿಕತೆಯ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಈ ಕಾರಣಕ್ಕೆ ಹೆಂಡತಿ ತನ್ನ ಗಂಡನನ್ನು ಪೊರಕೆಯಿಂದ ಹೊಡೆಯುತ್ತಾಳೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಸಾಸ್ನೊಂದಿಗೆ ತಿನ್ನಲು ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಅದ್ರಲ್ಲಿ ತಪ್ಪು ಹುಡುಕುವ ಪ್ರಯತ್ನವನ್ನೂ ಬಳಕೆದಾರರೊಬ್ಬರು ಮಾಡಿದ್ದಾರೆ. ಅದ್ರಲ್ಲಿರುವ ಫೈಬರ್ ತಪ್ಪಾಗಿದೆ ಎಂದು ಅವರು ಹೇಳಿದ್ದಾರೆ. ನೀವು ರೂಮ್ ಕ್ಲೀನ್ ಮಾಡಿದ್ರೆ, ಮನೆ ಕ್ಲೀನ್ ಮಾಡಿದ್ರೆ, ಪಕ್ಕದ ಮನೆ ಕ್ಲೀನ್ ಮಾಡಿದ್ರೆ ಹೆಚ್ಚೆಚ್ಚು ಕ್ಯಾಲೋರಿ ಬರ್ನ್ ಮಾಡ್ತೀರಿ. ಆದ್ರೆ ಪತ್ನಿಯಿಂದ ಮಾತ್ರ ಇದನ್ನು ಅಡಗಿಸಿಡಿ ಎಂದು ಬಳಕೆದಾರ ಸಲಹೆ ನೀಡಿದ್ದಾನೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಇದನ್ನೇ ತಿನ್ಮೇಕಾಗ್ಬಹುದು, ಭಾರತದಲ್ಲಿ ಏನಾದ್ರೂ ಆಗ್ಬಹುದು, ಇದನ್ನು ತಿಂದ್ರೆ ಕ್ಯಾಲೋರಿ ಕಡಿಮೆ ಆಗುತ್ತಾ? ಹೀಗೆ ನಾನಾ ಕಮೆಂಟ್ ಗಳನ್ನು ಜನರು ಇಲ್ಲಿ ನೀಡಿರೋದನ್ನು ನೀವು ನೋಡ್ಬಹುದು.
the broom has a calorie chart …
in case you decide to snack on it! pic.twitter.com/II0N82b69k
— JΛYΣƧΉ (@baldwhiner) August 2, 2023