ಸರ್ಕಾರಿ ಶಾಲೆಯಲ್ಲಿ ಒಂದೇ ಒಂದು ಮಗು ಇದ್ರೂ ಶಾಲೆ ಮುಚ್ಚಲ್ಲ! – ಶಿಕ್ಷಣ ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲೆಯಲ್ಲಿ ಒಂದೇ ಒಂದು ಮಗು ಇದ್ರೂ ಶಾಲೆ ಮುಚ್ಚಲ್ಲ! – ಶಿಕ್ಷಣ ಸಚಿವ ಮಧು ಬಂಗಾರಪ್ಪ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ. ವಿದ್ಯಾರ್ಥಿಗಳಿಲ್ಲದೆ ಅನೇಕ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇದೀಗ ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಒಂದೇ‌ ಒಂದು ಮಗು ಇದ್ದರೂ ಶಾಲೆ ಮುಚ್ಚಲ್ಲ ಎಂದಿದ್ದಾರೆ.

ಇದನ್ನೂ ಓದಿ:ಫೋನ್‌ನಲ್ಲಿ ಆ ವಿಡಿಯೋ ನೋಡ್ತಾನೆ, ಹೆಂಡ್ತಿ ಹತ್ರ ಹಾಗೆ ಮಾಡು ಅಂತಾನೆ – ಬೆತ್ತಲೆ ಗಂಡನ ಕಾಟಕ್ಕೆ ಹೆಂಡತಿ ಕಂಗಾಲು

ಸರ್ಕಾರಿ ಶಾಲೆಗಳನ್ನ ಮುಚ್ಚಬೇಡಿ ಎಂಬ ಸಾಹಿತಿ ಬರಗೂರು ರಾಮಚಂದ್ರಪ್ಪ ಮನವಿ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ‌ನೀಡಿದ ಅವರು, ಶಾಲೆಗಳನ್ನು ವಿಲೀನ ಮಾಡೋ ಅಧಿಕಾರ ನಮಗೆ ಇಲ್ಲ. ನಾವು ವೀಲಿನವೂ ಮಾಡೊಲ್ಲ. ಬರಗೂರು ರಾಮಚಂದ್ರಪ್ಪ ಅವರಿಗೂ ಮಾಹಿತಿ ಕೊಡಲಾಗಿದೆ. ಸ್ವ-ಇಚ್ಚೆಯಿಂದ KPS ಶಾಲೆಗೆ ವಿಲೀನ ಮಾಡ್ತೀವಿ ಅಂದರೆ ನಾನು ಇಲ್ಲ ಅನ್ನೋಕೆ ಅಗೊಲ್ಲ. ನಾನು ಈಗಾಗಲೇ ಹೇಳಿದ್ದೇನೆ. ಒಂದು ಮಗು ಇದ್ದರೂ ಶಾಲೆ ಮುಚ್ಚೋದಿಲ್ಲ. ಟೀಚರ್ ಇರ್ತಾರೆ, ಮಧ್ಯಾಹ್ನದ ಊಟವೂ ಇರುತ್ತದೆ. ಯಾರೇ ಮುಚ್ಚುತ್ತಾರೆ ಅಂತ ಹೇಳಿದರೆ ಅದಕ್ಕೆ ನಾನು ಉತ್ತರ ಕೊಡಲು ಆಗೊಲ್ಲ. ಬರಗೂರು ಅವರಿಗೆ ಹೇಳ್ತೀನಿ. ಬೇರೆ ಅವರ ಮಾತು ಕೇಳಿ ಅವರು ಹೇಳಿಕೆ ಕೊಡಬಾರದು. ಸಿಎಂ ಅವರು ಕೂಡಾ ಮಾತಾಡೋದಾಗಿ ಹೇಳಿದ್ದಾರೆ ಎಂದು ಹೇಳಿದರು.

KPS ಒಳ್ಳೆಯ ಪ್ರಾಜೆಕ್ಟ್‌ ನಿಲ್ಲಿಸಲು ಆಗೊಲ್ಲ. ಗುಣಮಟ್ಟದ ಶಿಕ್ಷಣ ಸಿಗಲಿದೆ. ಉತೀರ್ಣ ಅಂಕ ಕಡಿಮೆ ಮಾಡಿರೋದಕ್ಕೆ ಬರಗೂರು ಅವರ ವಿರೋಧ ಇದೆ. ಬೇರೆ ರಾಜ್ಯದಲ್ಲಿ ಏನಿದೆ ಅಂತ ಬರಗೂರು ರಾಮಚಂದ್ರಪ್ಪ ನೋಡಿಕೊಂಡು ಬರಲಿ. ಯಾಕೆ ಬೇರೆ ರಾಜ್ಯದವರಿಗೆ ಕೆಲಸ ಸಿಗುತ್ತದೆ ಅಂತ ತಿಳಿದುಕೊಂಡರೆ ಉತ್ತರ ಸಿಗುತ್ತದೆ. ಉದ್ಯೋಗ ಸಿಗೋದ್ರಲ್ಲೂ ಇದು ಒಳ್ಳೆ ಬೆಳವಣಿಗೆ. ವಿಲೀನ ನಾವು ಮಾಡೊಲ್ಲ. BEO ಹೇಳಿದ್ದರೆ ಅವರನ್ನ ಕರೆದುಕೊಂಡು ಬಂದರೆ ಅವರನ್ನ ಅಮಾನತು ಮಾಡ್ತೀನಿ. ಸರ್ಕಾರ ಹೇಳ್ತಿದೆ ಕ್ಲೋಸ್ ಮಾಡೊಲ್ಲ ಎಂದರು.

ಯಾರ್ ಇದನ್ನ ಮಾಡ್ತಿದ್ದಾರೆ. ಇದಕ್ಕೆ ಯಾರ ಸಪೋರ್ಟ್ ಇದೆ ನನಗೆ ಗೊತ್ತು. ಇದು ಬರಗೂರು ರಾಮಚಂದ್ರಪ್ಪ ಹೇಳಿಕೆ ಅಲ್ಲ. ಅದರ ಹಿಂದೆ ಕೆಲವರು ಇದ್ದಾರೆ. ವ್ಯವಹಾರಿಕವಾಗಿ ಶಿಕ್ಷಣ ಸಂಸ್ಥೆ ನಡೆಸೋರು ಇರುತ್ತಾರೆ. ಮಕ್ಕಳಿಗೆ ಉಚಿತ, ಗುಣಮಟ್ಟದ ಶಿಕ್ಷಣ ಕೊಡೋದು ನಮ್ಮ ಸರ್ಕಾರದ ಗ್ಯಾರಂಟಿ. ಮಕ್ಕಳನ್ನು ಇಟ್ಟುಕೊಂಡು ಆಟ ಆಡೋದು ಬೇಡ ಅಂತ ತಿಳಿಸಿದರು.

Shwetha M