ರಿಷಬ್ ಪಂತ್ ತಂಡಕ್ಕೆ ಮರಳಿದರೂ ಕೀಪಿಂಗ್ ಗ್ಲೌಸ್ ತೊಡುವುದು ಅನುಮಾನ..!

ರಿಷಬ್ ಪಂತ್ ತಂಡಕ್ಕೆ ಮರಳಿದರೂ ಕೀಪಿಂಗ್ ಗ್ಲೌಸ್ ತೊಡುವುದು ಅನುಮಾನ..!

ಟೀಮ್ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ಯಾವಾಗ ಕಂಬ್ಯಾಕ್ ಮಾಡುತ್ತಾರೆ ಅನ್ನೋ ಪ್ರಶ್ನೆ ಆಗಾಗ ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಆದರೆ, ರಿಷಭ್ ಪಂತ್ ವಿಕೆಟ್ ಕೀಪರ್, ಬ್ಯಾಟರ್ ಆಗಿ ಕಂಬ್ಯಾಕ್ ಮಾಡಲು ಮತ್ತಷ್ಟು ತಿಂಗಳು ಬೇಕಾಗಬಹುದು ಎನ್ನಲಾಗಿದೆ. ಪ್ರಸ್ತುತ ಮಾಹಿತಿ ಪ್ರಕಾರ ಪಂತ್ ಏಕದಿನ ವಿಶ್ವಕಪ್ ವೇಳೆಗೆ ತಂಡಕ್ಕೆ ಮರಳುವ ಸಾಧ್ಯತೆಯಿಲ್ಲ.

ಇದನ್ನೂ ಓದಿ: ಗಂಭೀರ ಅಪಘಾತದಿಂದ ಮರುಜನ್ಮ ಪಡೆದ ರಿಷಬ್ ಪಂತ್ – ಎರಡನೇ ಹುಟ್ಟುಹಬ್ಬವೆಂದು ಬರ್ತ್‌ಡೇಟ್ ಬದಲಿಸಿದ ಕ್ರಿಕೆಟಿಗ..!

ಕಳೆದ 8 ತಿಂಗಳುಗಳಿಂದ ಮೈದಾನದಿಂದ ಹೊರಗುಳಿದಿರುವ ಪಂತ್ ಮತ್ತೆ ಗ್ಲೌಸ್ ತೊಟ್ಟು ವಿಕೆಟ್ ಕೀಪಿಂಗ್ ಪುನರಾರಂಭಿಸಲು ಕನಿಷ್ಠ 6 ತಿಂಗಳಾದರೂ ಬೇಕು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಸ್ತೆ ಅಪಘಾತದಲ್ಲಿ ಪಂತ್ ಅವರ ಕಾಲಿಗೆ ಗಂಭೀರ ಗಾಯವಾಗಿತ್ತು. ಆ ಬಳಿಕ ನಡೆದ ಶಸ್ತ್ರ ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದಾಗ್ಯೂ ಅವರು ವಿಕೆಟ್ ಕೀಪಿಂಗ್‌ನಲ್ಲಿ ಚುರುಕುತನ ಸಾಧಿಸಲು ಮತ್ತಷ್ಟು ಸಮಯ ತೆಗೆದುಕೊಳ್ಳಲಿದೆ. ಹೀಗಾಗಿ ಪಂತ್ ತಂಡಕ್ಕೆ ಮರಳಿದರೂ ಕೀಪಿಂಗ್ ಗ್ಲೌಸ್ ತೊಡುವುದು ಅನುಮಾನ ಎಂದು ವರದಿಯಾಗಿದೆ. ಸದ್ಯ ರಿಷಭ್ ಪಂತ್‌ಗೆ ಕೇವಲ 25 ವರ್ಷ. ಹೀಗಾಗಿ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಿದ ಬಳಿಕ ತಂಡಕ್ಕೆ ಮರಳಬಹುದು. ಅಂದರೆ ಐದಾರು ತಿಂಗಳುಗಳ ಕಾಲ ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸಿ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ಆಗಿ ಕಂಬ್ಯಾಕ್ ಮಾಡಲು ಬಯಸಿದರೆ ಮುಂದಿನ ಐಪಿಎಲ್ ವೇಳೆ ಮತ್ತೆ ಕಣಕ್ಕಿಳಿಯಬಹುದು.

suddiyaana