ನಿವೃತ್ತಿ ವಯಸ್ಸು ದಾಟಿದರೂ ನಿರಂತರ ಕೆಲಸ..! – ಯುವಕರಿಗೆ ಸ್ಪೂರ್ತಿಯಾದ ಹಸನ್ ಅಲಿ..!

ನಿವೃತ್ತಿ ವಯಸ್ಸು ದಾಟಿದರೂ ನಿರಂತರ ಕೆಲಸ..! – ಯುವಕರಿಗೆ ಸ್ಪೂರ್ತಿಯಾದ ಹಸನ್ ಅಲಿ..!

ನಿಮಗೆ ಕೆಲಸ ಮಾಡಿ ಬೇಸರ ಆಗಿದ್ದರೆ, ನಿಮಗೆ ಸ್ಪೂರ್ತಿಯ ಬೂಸ್ಟ್ ಬೇಕಿದ್ದರೆ ಈ ಸ್ಟೋರಿ ಓದಲೇಬೇಕು. ಇದು ಕೆಲಸ ಮಾಡೋದನ್ನ ನಿಲ್ಲಿಸಲು ಸಾಧ್ಯವಾಗದ 74 ವರ್ಷದ ವ್ಯಕ್ತಿಯ ಕಥೆ. ಹಸನ್ ಅಲಿ ಎಂಬಾತ ದಶಕಗಳ ಹಿಂದೆಯೇ ನಿವೃತ್ತರಾದರೂ ಕೆಲಸ ಮಾಡುವ ಅವರ ಉತ್ಸಾಹವೂ ಇನ್ನು ಕಡಿಮೆಯಾಗಿಲ್ಲ. ಹಸನ್ ಈಗ ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ಕರವಸ್ತ್ರಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಸ್ಫೂರ್ತಿಯ ಕಥೆ ಈಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.

ಇದನ್ನೂ ಓದಿ: ಬಿ. ಟೆಕ್ ಚಾಯ್​ವಾಲಿ ಚಹಾ ಪ್ರಿಯರ ಹಾಟ್ ಫೇವರೆಟ್ – ವಿದ್ಯಾರ್ಥಿನಿಯ ಸ್ಪೂರ್ತಿಯ ಕಥೆಯಿದು…

ಹಸನ್ ಅವರ ಈ ಸ್ಪೂರ್ತಿದಾಯಕ ಕಥೆಯನ್ನ ಹ್ಯೂಮನ್ಸ್ ಆಫ್ ಬಾಂಬೆ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದೆ. ಹಸನ್ ಈ ಹಿಂದೆ ಶೂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರಿಗೆ ಮಾರಾಟ ಮಾಡುವ ಕಲೆ ತಿಳಿದಿತ್ತು. ಮಾರಾಟ ಅನ್ನೋದು ಕಲೆ ಇದ್ದಂತೆ. ವ್ಯಕ್ತಿಯು ಹೇಳದೆಯೇ ಆತನಿಗೆ ಏನು ಬೇಕು ಅನ್ನೋದನ್ನ ನಾವು ತಿಳಿದುಕೊಳ್ಳಬೇಕು. ತಮ್ಮ ಜೀವನದುದ್ದಕ್ಕೂ ಇದನ್ನೇ ಮಾಡುತ್ತಾ ಬಂದಿರುವ ಹಸನ್ ಅವರು ಕಳೆದ 17 ವರ್ಷಗಳಿಂದ ಕರವಸ್ತ್ರ ಮಾರಾಟ ಮಾಡುತ್ತಿದ್ದಾರೆ.

ಗ್ರಾಹಕರು ಇವರನ್ನ ಪ್ರೀತಿಯಿಂದ ಕಾಕಾ ಎಂದೂ ಕರೆಯುತ್ತಾರೆ. ಪ್ರತಿದಿನ ನಾನು ಮನೆಯಿಂದ ಬಸ್ ಹತ್ತಿ ಈ ಕರವಸ್ತ್ರಗಳನ್ನು ಮಾರಲು ಇಲ್ಲಿಗೆ ಬರುತ್ತೇನೆ. ನನ್ನನ್ನು ನನ್ನ ಗ್ರಾಹಕರು ಪ್ರೀತಿಯಿಂದ ಕಾಕಾ ಎಂದು ಕರೆಯುತ್ತಾರೆ. ಮತ್ತು ನನ್ನ ಎಲ್ಲಾ ಗ್ರಾಹಕರ ಮೇಲೆ ನನಗೂ ಅದೇ ಪ್ರೀತಿ. ಇದು ನನ್ನನ್ನ ಪ್ರತಿದಿನ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಹಸನ್ ಹೇಳುತ್ತಾರೆ.

ಹಸನ್ ಅವರ ಜೀವನ ಕಥೆ ಈಗ ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಸ್ಪೂರ್ತಿಯಾಗುತ್ತಿದೆ. ನಾನು ಇಂತಹ ಜನರೊಂದಿಗೆ ಕುಳಿತುಕೊಳ್ಳಲು ಮತ್ತೂ ಇನ್ನೊಂದು ಬದಿಯ ಜೀವನವನ್ನ ತಿಳಿದುಕೊಳ್ಳಲು ಬಯಸುತ್ತೇನೆ. ಕಲಿಯುವುದಕ್ಕೆ ತುಂಬಾ ಇದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ಇವರು ನನ್ನ ಜೀವನಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

suddiyaana