10 ದಿನಗಳ ಕಾಲ ಎಸ್ಕಾಂ ಆನ್‌ಲೈನ್ ಸೇವೆ ಬಂದ್! – ಕಾರಣವೇನು ಗೊತ್ತಾ?
ಭಾನುವಾರದಿಂದ ಬರೋಬ್ಬರಿ 10 ದಿನಗಳ ಕಾಲ ಎಲ್ಲಾ ಎಸ್ಕಾಂ ಆನ್‌ಲೈನ್ ಸೇವೆಗಳು ಬಂದ್ ಆಗಲಿವೆ. ತಂತ್ರಾಂಶ ಉನ್ನತೀಕರಣ ಹಿನ್ನೆಲೆಯಲ್ಲಿ ಇಂಧನ ಇಲಾಖೆಯ ವ್ಯಾಪ್ತಿಯ ಎಲ್ಲ ಎಸ್ಕಾಂಗಳಲ್ಲಿ ಆನ್ ಲೈನ್ ಸೇವೆ ಅಲಭ್ಯವಾಗಲಿವೆ ಎಂದು ವರದಿಯಾಗಿದೆ.
ಈ ಬಗ್ಗೆ ಇಂಧನ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಸಾಫ್ಟ್ವೇರ್ ಅಪ್ಡೇಟ್ ಹಿನ್ನೆಲೆ ಎಸ್ಕಾಂಗಳಲ್ಲಿ ಮಾರ್ಚ್ 10 ರಿಂದ 19 ರವರೆಗೆ ಎಲ್ಲ ಅನ್ಲೈನ್ ಸೇವೆಗಳು ಸ್ಥಗಿತಗೊಳ್ಳಲಿದೆ . ಬೆಸ್ಕಾಂ, ಜೆಸ್ಕಾಂ, ಸೆಸ್ಕ್, ಮೆಸ್ಕಾಂ, ಹೆಸ್ಕಾಂನಲ್ಲಿ ಆನ್‌ಲೈನ್ ಸೇವೆಗಳು ಸಿಗುವುದಿಲ್ಲ ಭಾನುವಾರದಿಂದ ಸಿಗುವುದಿಲ್ಲ ಅಂತಾ ತಿಳಿಸಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ನೀರಿನ ಸಮಸ್ಯೆ – ಶೌಚ ಮಾಡಲು ಮಾಲ್‌ಗೆ ಹೋಗ್ತಿದ್ದಾರೆ ಜನ!
ರಾಜ್ಯದ ಎಲ್ಲ ಎಸ್ಕಾಂಗಳ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಕೆ ಸೇರಿ ಯಾವ ಆನ್‌ಲೈನ್ ಸೇವೆಗಳು ಲಭ್ಯವಿರೋದಿಲ್ಲ. ಆದರೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಮಾಡಲ್ಲ. ನಿರಂತರವಾಗಿ ವಿದ್ಯುತ್ ನೀಡಲಾಗುತ್ತದೆ. ಸಾಫ್ಟ್ ವೇರ್ ಅಪ್ಗ್ರೇಡ್ ಸಂದರ್ಭದಲ್ಲಿ ವಿದ್ಯುತ್ ಪಾವತಿ ಮಾಡೋದಕ್ಕೆ ಕಷ್ಟ ಆಗಬಹುದು.
ಆದರೆ ಆ ಸಂದರ್ಭ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದಿಲ್ಲ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ. ಸರ್ವರ್ ಅಪ್ ಗ್ರೇಡ್ ಆರಂಭವಾದ ಬಳಿಕ ಸ್ಥಿರಗೊಳ್ಳಲು 15 ದಿನಗಳ ಕಾಲಾವಕಾಶ ಇರುತ್ತದೆ. ಹೀಗಾಗಿ ಈ ವೇಳೆ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಇದಕ್ಕೆ ಗ್ರಾಹಕರು ಸಹಕರಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.