ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವಕನಿಗೆ ನಡುರಸ್ತೆಯಲ್ಲೇ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು!

ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಯುವಕನಿಗೆ ರಸ್ತೆಯಲ್ಲೇ ಶಸ್ತ್ರಚಿಕಿತ್ಸೆ ಮಾಡಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಇದೀಗ ವೈದ್ಯರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಅಯ್ಯಯ್ಯೋ.. ಚಿರತೆ ಸೆರೆಗೆ ಇಟ್ಟಿದ್ದ ಬೋನಿನೊಳಗೆ 3 ಗಂಟೆ ಲಾಕ್ ಆದ ರೈತ!
ಕೇರಳದ ಎರ್ನಾಕುಲಂನಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಮೂವರು ಯುವಕರು ಗಾಯಗೊಂಡಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ರೆ, ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿತ್ತು. ಆತ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ಮೂವರು ವೈದ್ಯರು ದೇವರಂತೆ ಬಂದಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವಕನ ಜೀವ ಉಳಿಸಿದ್ದಾರೆ.
ಏನಿದು ಘಟನೆ?
ಎರ್ನಾಕುಲಂನ ದಕ್ಷಿಣ ಪರವೂರಿನಲ್ಲಿ ಅಪಘಾತ ಸಂಭವಿಸಿತ್ತು. ಅಪಘಾತ ಸಂಭವಿಸಿದ ಹೊತ್ತಲ್ಲಿ ಇದೇ ರಸ್ತೆಯಲ್ಲಿ ಕೊಚ್ಚಿಯ ಇಂದಿರಾ ಗಾಂಧಿ ಸಹಕಾರಿ ಆಸ್ಪತ್ರೆ ಮೂವರು ರೈತರು ಚರ್ಚ್ಗೆ ಹೋಗುತ್ತಿದ್ದರು. ಅಪಘಾತ ಆಗಿದ್ದನ್ನ ಗಮನಿಸಿದ ಡಾ. ಮನೂಪ್, ಡಾ. ಥಾಮಸ್ ಪೀಟರ್ ಮತ್ತು ಅವರ ಪತ್ನಿ ಡಾ. ದಿಧಿಯಾ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಮೂವರು ಯುವಕರನ್ನ ಪರೀಕ್ಷಿಸಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ರೆ, ಲಿನು ಎಂಬ ಯುವಕನ ಸ್ಥಿತಿ ಗಂಭೀರವಾಗಿತ್ತು. ರಕ್ತ ಹಾಗೂ ಮಣ್ಣು ಯುವಕನ ಶ್ವಾಸಕೋಶಕ್ಕೆ ಪ್ರವೇಶಿಸಿ, ಉಸಿರಾಟದ ತೊಂದರೆ ಉಂಟಾಗಿತ್ತು. ಹೀಗಾಗಿ ಆಸ್ಪತ್ರೆ ತಲುಪುವವರೆಗೂ ಯುವಕ ಬದುಕುಳಿಯುವುದಿಲ್ಲ ಎಂದು ವೈದ್ಯರಿಗೆ ಅರಿವಾಗಿದೆ. ಬಳಿಕ ರಸ್ತೆಯಲ್ಲೇ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದ್ದಾರೆ. ಆದ್ರೆ ಈ ವೇಳೆ ವೈದ್ಯರ ಬಳಿ ಶಸ್ತ್ರಚಿಕಿತ್ಸೆಗೆ ಬೇಕಾದ ಯಾವುದೇ ಉಪಕರಣ ಇರಲಿಲ್ಲ. ಬಳಿಕ ಸ್ಥಳೀಯರ ಬಳಿ ಪೇಪರ್ ಸ್ಟ್ರಾಗಳು ಮತ್ತು ಬ್ಲೇಡ್ಗಳನ್ನು ಪಡೆದುಕೊಂಡು ರಸ್ತೆಯಲ್ಲಿ ಸರ್ಜರಿ ಮಾಡಿದ್ದಾರೆ. ಆಂಬ್ಯುಲೆನ್ಸ್ ಬರುವ ಹೊತ್ತಿಗೆ ಲಿನು ಉಸಿರಾಡಲು ಪ್ರಾರಂಭಿಸಿದ್ದ. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸದ್ಯ ಲಿನು ಎರ್ನಾಕುಲಂ ವೆಲ್ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಪೊಲೀಸರು ಕೂಡ ಸಾಥ್ ನೀಡಿದ್ದಾರೆ. ಇದೀಗ ವೈದ್ಯರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ನೋಡಿರಿ

