ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೇ ಮಹತ್ವದ ನಿರ್ಧಾರ – ಗರ್ಭಗುಡಿ ಒಳಗಡೆ ಪ್ರವೇಶ ಮಾಡಿ ದರ್ಶನಕ್ಕೆ ನಿರ್ಬಂಧ

ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೇ ಮಹತ್ವದ ನಿರ್ಧಾರ – ಗರ್ಭಗುಡಿ ಒಳಗಡೆ ಪ್ರವೇಶ ಮಾಡಿ ದರ್ಶನಕ್ಕೆ ನಿರ್ಬಂಧ

ಹಾಸನಾಂಬ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಹಾಸನಾಂಬೆಯ ದರ್ಶನಕ್ಕೆ ಉಳಿದಿರುವುದು ಇನ್ನು ನಾಲ್ಕೇ ದಿನ. ಹೀಗಾಗಿ ಭಕ್ತರ ಸಂಖ್ಯೆ ಮತ್ತಷ್ಟೂ ಹೆಚ್ಚಾಗಲಿದೆ. ಹೀಗಿರುವಾಗಲೇ ದೇವಸ್ಥಾನ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೇ ಮಹತ್ವದ ನಿರ್ಧಾರ ಕೈಕೊಂಡಿದೆ. ಹಾಸನಾಂಬೆ ಗರ್ಭಗುಡಿ ಒಳಗಡೆ ಪ್ರವೇಶ ಮಾಡಿ ದರ್ಶನ ಪಡೆಯುವುದನ್ನು ನಿರ್ಬಂಧಿಸಿದೆ.

ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ! – ಮಾದಪ್ಪನ ಬೆಟ್ಟಕ್ಕೆ ದ್ವಿಚಕ್ರ ವಾಹನ, ಆಟೋಗಳಿಗೆ ನಿರ್ಬಂಧ!

ಹಾಸನಾಂಬ ದೇವಾಲಯ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೇ ಮಹತ್ವದ ನಿರ್ದಾರ ಕೈಕೊಂಡಿದೆ. ಹಾಸನಾಂಬೆ ಗರ್ಭಗುಡಿ ಒಳಗಡೆ ಪ್ರವೇಶ ಮಾಡಿ ದರ್ಶನ ಪಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಶುಕ್ರವಾರ ರಾತ್ರಿಯಿಂದಲೇ ಜಾರಿಗೆ ಬರುವಂತೆ ಅರ್ಚಕರನ್ನು ಹೊರತುಪಡಿಸಿ ಉಳಿದ ಯಾರಿಗೂ ಗರ್ಭಗುಡಿ ಪ್ರವೇಶವಿಲ್ಲವೆಂದು ಆದೇಶ ಹೊರಡಿಸಿದೆ. ಹಾಗೆ ಶಿಷ್ಟಾಚಾರ ದರ್ಶನ ವ್ಯವಸ್ಥೆಯನ್ನು ಕೂಡ ಸ್ಥಗಿತಗೊಳಿಸಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಗಣ್ಯರು, ಅತಿಗಣ್ಯರು ಗರ್ಭಗುಡಿ ಪ್ರವೇಶ ಮಾಡಿ ದರ್ಶನ ಪಡೆಯುತ್ತಿದ್ದರು. ಹಾಗೇ ಶಿಷ್ಟಾಚಾರ ಕೋಟಾದಡಿಯಲ್ಲೂ ಗರ್ಭಗುಡಿ ಒಳಗೆ ಪ್ರವೇಶ ದರ್ಶನ ಪಡೆಯುತ್ತಿದ್ದರು. ಇದರಿಂದ ಧರ್ಮದರ್ಶನ ಸಾಲಿನಲ್ಲಿ ಬರುವ ಅಪಾರ ಭಕ್ತರಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಜನರ ಒತ್ತಡಕ್ಕೆ ಮಣಿದು ಆಡಳಿತ ಮಂಡಳಿ ಮಹತ್ತರ ನಿರ್ಣಯ ಕೈಗೊಂಡಿದೆ. ಹಾಸನಾಂಬೆ ದರ್ಶನಕ್ಕೆ 9 ನೇ ದಿನವೂ ಭಕ್ತರ ದಂಡೇ ಹರಿದು ಬಂದಿದೆ. ದೇವಿ ದರ್ಶನಕ್ಕೆ ನಾಲ್ಕು ದಿನ ಮಾತ್ರ ಬಾಕಿಯಿದೆ. ಹೀಗಾಗಿ ಭಕ್ತರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ.

ಧರ್ಮದರ್ಶನ ಸಾಲಿನಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದರಿಂದ ಭಕ್ತರು VIP ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಭಕ್ತರು 300 ,1000 ರೂಪಾಯಿ ನೀಡಿ ವಿಐಪಿ ದರ್ಶನ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಧರ್ಮದರ್ಶನ ಸಾಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಣ ನೀಡಿ ದರ್ಶನಕ್ಕೆ ತೆರಳುತ್ತಿದ್ದಾರೆ.

Sulekha