ಅದಾನಿ ಸಮೂಹದ ತೆಕ್ಕೆಗೆ ಹೈಫಾ ಪೋರ್ಟ್- ಮೈಲಿಗಲ್ಲು ಎಂದ ಇಸ್ರೇಲ್ ಪ್ರಧಾನಿ

ಅದಾನಿ ಸಮೂಹದ ತೆಕ್ಕೆಗೆ ಹೈಫಾ ಪೋರ್ಟ್- ಮೈಲಿಗಲ್ಲು ಎಂದ ಇಸ್ರೇಲ್ ಪ್ರಧಾನಿ

ಹೈಫಾ: ಅದಾನಿ ಗ್ರೂಪ್ ಕೆಲ ದಿನಗಳಿಂದ ಹಿಂಡೆನ್‌ಬರ್ಗ್‌ ರೀಸರ್ಚ್‌ನ ವಿವಾದದ ಕಾರಣಗಳಿಂದಾಗಿಯೇ ಹೆಚ್ಚು ಸುದ್ದಿಯಾಗಿತ್ತು. ಇದೀಗ ಇಸ್ರೇಲ್‌ನ ಎರಡನೇ ಅತಿದೊಡ್ಡ ಬಂದರಾದ ಹೈಫಾವನ್ನು ಅದಾನಿ ಗ್ರೂಪ್‌ 1.2 ಬಿಲಿಯನ್‌  ಡಾಲರ್‌ ಗೆ ಸ್ವಾಧೀನಪಡಿಸಿಕೊಂಡಿದೆ.

ಯಹೂದಿ ರಾಷ್ಟ್ರದ  ಟೆಲ್ ಅವೀವ್ ನಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯ ಸೇರಿದಂತೆ ಇಸ್ರೇಲ್ ನಲ್ಲಿನ ಹೂಡಿಕೆಯ ನಿರ್ಧಾರ ಭಾಗವಾಗಿ ಅದಾನಿ ಸಮೂಹ ಈ ಹೈಫಾ ಪೋರ್ಟ್ ನ ಒಪ್ಪಂದಕ್ಕೆ ಮುಂದಾಗಿದೆ.

ಇದನ್ನೂ ಓದಿ: ಸರ್ಕಾರಿ ಹಳೇ ವಾಹನಗಳಿಗೆ ಏ.1ರಿಂದ ಗೇಟ್​ಪಾಸ್ – ಅದೆಷ್ಟು ಲಕ್ಷ ವಾಹನಗಳು ಗುಜರಿಪಾಲು..!?

ಹಿಂಡೆನ್‌ಬರ್ಗ್ ರಿಸರ್ಚ್‌ನ ವಂಚನೆಯ ಆರೋಪಗಳಿಂದ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಸಾಕಷ್ಟು ಆಸ್ತಿ ನಷ್ಟ ಅನುಭವಿಸಿದ್ದರು.  ಈ ವಿವಾದದ ನಡುವೆಯೇ ಗೌತಮ್ ಅದಾನಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಹೂಡಿಕೆ ಅವಕಾಶಗಳ ಕುರಿತು ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಹೈಫಾ ಪೋರ್ಟ್ ಒಪ್ಪಂದದ ಕುರಿತು ಮಾತನಾಡಿರುವ ನೇತನ್ಯಾಹು, ಅದಾನಿ ಸಮೂಹದ ಜೊತೆಗಿನ ಒಪ್ಪಂದ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಅಲ್ಲದೇ ಈ ಒಪ್ಪಂದ ಹಲವು ವಿಧಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.

suddiyaana