ಸತತ ಸೋಲಿನ ಬಳಿಕ ಭಾರತವನ್ನು ಎದುರಿಸಲಿದೆ ಇಂಗ್ಲೆಂಡ್ –ಚಾಂಪಿಯನ್ ಟೀಮ್ ಎಡವುತ್ತಿರುವುದು ಎಲ್ಲಿ?
ಇಂಗ್ಲೆಂಡ್ನವರಿಗೆ ಈ ಬಾರಿ ಅದೇನ್ ಗರ ಬಡಿದಿದ್ಯೋ ಗೊತ್ತಿಲ್ಲ. ಚಾಂಪಿಯನ್ ಟೀಂಗೆ ಇಂಥಾ ಪರಿಸ್ಥಿತಿ ಬರುತ್ತೆ ಅಂತಾ ಯಾರು ಕೂಡ ಅಂದುಕೊಂಡಿರಲಿಲ್ಲ. ವರ್ಲ್ಡ್ಕಪ್ ಶುರುವಾಗುವ ಮುನ್ನ ಕ್ರಿಕೆಟ್ ಎಕ್ಸ್ಪರ್ಟ್ಗಳೆಲ್ಲಾ ಇಂಗ್ಲೆಂಡ್ ತಂಡ ಸೆಮಿಫೈನಲ್ಗೆ ಗ್ಯಾರಂಟಿ ಅಂತಾನೆ ಭವಿಷ್ಯ ನುಡಿದಿದ್ರು. ಮಾಜಿ ಕ್ರಿಕೆಟರ್ಸ್ ಕೂಡ ಅದನ್ನೇ ಹೇಳಿದ್ದರು. ಆದರೆ, ಈ ಟೂರ್ನಿಯಲ್ಲಿ ಆಡಿರೋದನ್ನ ನೋಡಿದರೆ ಇವ್ರೇನಾ ಕಳೆದ ಬಾರಿಯ ವರ್ಲ್ಡ್ಕಪ್ ವಿನ್ನರ್ಸ್ ಅನ್ನೋ ಡೌಟ್ ಬರುವಂತಾಗಿದೆ. ಅಷ್ಟಕ್ಕೂ ಇಂಗ್ಲೆಂಡ್ ಟೀಂ ಎಡವಿರೋದು ಎಲ್ಲಿ? ಎಂಬ ವಿವರ ಇಲ್ಲಿದೆ.
ಇದನ್ನೂ ಓದಿ: ಸತತ ಗೆಲುವು ಕಂಡಿರುವ ಟೀಂ ಇಂಡಿಯಾ ಸೀಕ್ರೆಟ್ ಏನು? – ಭಾರತ ತಂಡದ ಪ್ಲಸ್ ಮತ್ತು ಮೈನಸ್ ಯಾವುದು ಗೊತ್ತಾ?
ಚಾಂಪಿಯನ್ ಟೀಂ ಈ ಬಾರಿಯ ವರ್ಲ್ಡ್ಕಪ್ನಿಂದ ಔಟ್ ಆಗಿಯಾಗಿದೆ. ಬ್ರಿಟೀಷ್ ಏರ್ವೇಸ್ ಇನ್ನೇನು ರನ್ವೇಗೆ ಬಂದಿಳಿಯೋದಷ್ಟೇ ಬಾಕಿ. 2019ರ ವರ್ಲ್ಡ್ಕಪ್ನ್ನ ಇಂಗ್ಲೆಂಡ್ ಗೆದ್ದಿದ್ದೇ ಬೈ ಲಕ್ನಿಂದ. ಆದ್ರೆ ಈ ಬಾರಿಯ ವಿಶ್ವಕಪ್ನಲ್ಲಿ ಡೇ ಒನ್ನಿಂದಲೇ ಅದೃಷ್ಟ ಅನ್ನೋದು ಇಂಗ್ಲೆಂಡ್ಗೆ ಖುಲಾಯಿಸಲೇ ಇಲ್ಲ. ಆಡಿರೋ 5 ಮ್ಯಾಚ್ಗಳ ಪೈಕಿ 4ರಲ್ಲಿ ಇಂಗ್ಲೆಂಡ್ ಸೋತು ಸುಣ್ಣವಾಗಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯಿಂದ 2ನೇ ಸ್ಥಾನದಲ್ಲಿದೆ. ವರ್ಲ್ಡ್ಕಪ್ನಿಂದ ಇಂಗ್ಲೆಂಡ್ ಹೊರ ಬಿದ್ದಾಗಿದೆ. ಒಂದು ಚಾಂಪಿಯನ್ ತಂಡವಾಗಿ ಇಂಗ್ಲೆಂಡ್ ಪ್ಲೇಯರ್ಸ್ಗಳು ಆಡಿಯೇ ಇಲ್ಲ. ಬೆನ್ ಸ್ಟೋಕ್ಸ್ ಅಂತೂ ವಿಶ್ವಕಪ್ ಆಡೋಕೆ ಅಂತಾನೆ ನಿವೃತ್ತಿ ವಾಪಸ್ ಪಡೆದು ಟೀಂಗೆ ಕಮ್ಬ್ಯಾಕ್ ಮಾಡಿದ್ರು. ಪ್ರಮುಖ ಆಟಗಾರರರಾದ ಜೋ ರೋಟ್, ಬಟ್ಲರ್, ಜಾನಿ ಬ್ಯಾರ್ಸ್ಟೋ, ಮೊಯಿನ್ ಆಲಿ ಇವರೆಲ್ಲರೂ ಸಡನ್ ಫಾರ್ಮ್ ಕಳೆದುಕೊಂಡಿದ್ದಾರೆ. ಇನ್ನು ಬೌಲಿಂಗ್ ಡಿಪಾರ್ಟ್ಮೆಂಟ್ ಕೂಡ ಅಷ್ಟೇ. ಓವರ್ನ ಆರೂ ಬಾಲ್ಗಳನ್ನ 150+ ಕಿಲೋ ಮೀಟರ್ ವೇಗದಲ್ಲಿ ಎಸೆಯುವ ಮಾರ್ಕ್ ವುಡ್ ಬೌಲಿಂಗ್ ಕೂಡ ಏನೇನೂ ವರ್ಕೌಟ್ ಆಗಿಲ್ಲ.
ಇನ್ನು ಜಾಸ್ ಬಟ್ಲರ್ ಕ್ಯಾಪ್ಟನ್ಸಿ ಕೂಡ ಅಷ್ಟೊಂದು ಎಫೆಕ್ಟಿವ್ ಆಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ತಂಡದ ನಾಯಕನಾಗಿ ಖುದ್ದು ಬಟ್ಲರ್ ಕೂಡ ಈ ಬಾರಿಯ ವರ್ಲ್ಡ್ಕಪ್ನಲ್ಲಿ ಅಷ್ಟೊಂದು ಸ್ಕೋರ್ ಮಾಡಿಲ್ಲ. ಈಗಿನ ಪರಿಸ್ಥಿತಿ ನೋಡಿದರೆ, ವರ್ಲ್ಡ್ಕಪ್ ಬಳಿಕ ಜಾಸ್ ಬಟ್ಲರ್ ಕ್ಯಾಪ್ಟನ್ಸಿಯನ್ನ ತೊರೆದರೂ ಆಶ್ಚರ್ಯ ಇಲ್ಲ. ಯಾಕಂದ್ರೆ ವರ್ಲ್ಡ್ಕಪ್ನಂಥಾ ಟೂರ್ನಿಯಲ್ಲಿ ಈ ರೀತಿ ಹೀನಾಯವಾಗಿ ಸೋತರೆ, ಅದು ಯಾವುದೇ ಟೀಂನ ಕ್ಯಾಪ್ಟನ್ಗೆ ಅದ್ರೂ ದೊಡ್ಡ ಮಟ್ಟದ ಹಿನ್ನಡೆಯಾಗುತ್ತೆ. ಇವೆಲ್ಲದರ ಜೊತೆಗೆ ಭಾರತದ ಪಿಚ್ ಕಂಡೀಷನ್ಗೆ ಇಂಗ್ಲೆಂಡ್ ಪ್ಲೇಯರ್ಸ್ ಇನ್ನೂ ಕೂಡ ಹೊಂದಿಕೊಂಡಂತೆ ಕಾಣ್ತಿಲ್ಲ.