ಇಂಗ್ಲೆಂಡ್ ವಿರುದ್ಧ ಇಟಲಿಗೆ ವೀರೋಚಿತ ಸೋಲು – ಕೆಚ್ಚೆದೆಯ ಹೋರಾಟದ ಮೂಲಕ ಗಮನ ಸೆಳೆದ ಇಟಲಿ

ಟಿ20 ವಿಶ್ವಕಪ್‌ನಲ್ಲಿ ಇಟಲಿ ತಂಡ ಇದೇ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಇಟಲಿ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಆದರೆ, ಆಡಿರುವ ಮೂರೂ ಪಂದ್ಯಗಳಲ್ಲೂ ಇಟಲಿ ತಂಡದ ಕೆಚ್ಚೆದೆಯ ಹೋರಾಟ ಕ್ರಿಕೆಟ್ ಲೋಕವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಸೋಮವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಇಟಲಿ ಕೆಚ್ಚೆದೆಯ ಹೋರಾಟ ನೀಡಿ ಸೋಲೊಪ್ಪಿಕೊಂಡಿದೆ.
ಇದನ್ನೂ ಓದಿ:ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನೇ ಬಗ್ಗು ಬಡಿದ ಶ್ರೀಲಂಕಾ – ಟೂರ್ನಿಯಿಂದ ಆಸೀಸ್ ಪಡೆ ಔಟ್?
ಟಿ20 ವಿಶ್ವಕಪ್‌ನ ಮೂರನೇ ಪಂದ್ಯದಲ್ಲಿ ಇಟಲಿಯನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ಸೂಪರ್ 8 ರಲ್ಲಿ ಸ್ಥಾನ ಪಡೆದುಕೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಟೂರ್ನಿಯ 29ನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಇಟಲಿ ಮುಖಾಮುಖಿಯಾಗಿದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 7 ವಿಕೆಟ್‌ಗೆ 202 ರನ್ ಗಳಿಸಿತು. ಈ ಟಾರ್ಗೆಟ್ ಬೆನ್ನತ್ತಿದ ಇಟಲಿ 178 ರನ್‌ಗಳನ್ನು ತಲುಪುವಲ್ಲಿ ಯಶಸ್ವಿಯಾಯಿತು. ಕೊನೆವರೆಗೂ ಹೋರಾಡಿದ ಇಟಲಿ ಆಲೌಟಾಗುವ ಮೂಲಕ 24 ರನ್‌ಗಳಿಂದ ಸೋಲನ್ನು ಅನುಭವಿಸಿತು.
ಇನ್ನು ಇಟಲಿ ಪರ ಎರಡು ಪಂದ್ಯಗಳಲ್ಲಿ ಮಿಂಚಿದ ಸ್ಫೋಟಕ ಬ್ಯಾಟರ್ ಆಂಥೋನಿ ಮೊಸ್ಕಾ ಗೋಲ್ಡನ್ ಡಕ್‌ಗೆ ಔಟಾದರು. ಇದಾದ ನಂತರ, ಜೆಜೆ ಸ್ಮಟ್ಸ್ ಕೂಡ ಖಾತೆ ತೆರೆಯದೆ ಔಟಾದರು. 4 ಓವರ್‌ಗಳ ನಂತರ ಇಟಲಿ ತಂಡದ ಸ್ಕೋರ್ 3 ವಿಕೆಟ್‌ಗಳಿಗೆ 22 ರನ್‌ಗಳಾಗಿತ್ತು. ಇಲ್ಲಿಂದ, ಜಸ್ಟಿನ್ ಮೊಸ್ಕಾ ಮತ್ತು ಬೆನ್ ಮಾನೆಂಟಿ ನಡುವೆ 48 ಎಸೆತಗಳಲ್ಲಿ 92 ರನ್‌ಗಳ ಜೊತೆಯಾಟ ಮೂಡಿಬಂತು. ಬೆನ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಅವರು 25 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 60 ರನ್ ಗಳಿಸಿದರು. ಜಸ್ಟಿನ್ ಮೊಸ್ಕಾ 43 ರನ್ ಗಳಿ ಔಟಾದರು. ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುತ್ತಿರುವ ಇಟಲಿ ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋತರೂ, ನೇಪಾಳವನ್ನು 10 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಮಾಸ್ಕೊ ಸಹೋದರರು, ಬೆನ್ ಮಾನೆಂಟಿಯಂತಹ ಹಿಟ್ಟರ್‌ಗಳು ಇಟಲಿ ತಂಡದ ಹೋರಾಟಕ್ಕೆ ಸಾಕ್ಷಿಯಾಗಿದೆ. ಜೊತೆಗೆ ಗ್ರೂಪ್-ಸಿಯಲ್ಲಿ ಪ್ರಬಲ ಸ್ಪರ್ಧಿಯಾಗಿ ಇಟಲಿ ತಂಡ ಹೊರಹೊಮ್ಮಿದೆ.

ನೋಡಿರಿ

