ಸ್ಟೋಕ್ಸ್ ಇಲ್ಲದ್ದಕ್ಕೇ IND ಗೆದ್ದಿದ್ದಾ? – ಡ್ರಾ ಬೆನ್ನಲ್ಲೇ ಆಂಗ್ಲರ ಹೊಸ ವರಸೆ
ENGನಲ್ಲಿ ಬೆನ್ ಸ್ಟೋಕ್ಸ್ ಹವಾ!

ಸ್ಟೋಕ್ಸ್ ಇಲ್ಲದ್ದಕ್ಕೇ IND ಗೆದ್ದಿದ್ದಾ? – ಡ್ರಾ ಬೆನ್ನಲ್ಲೇ ಆಂಗ್ಲರ ಹೊಸ ವರಸೆENGನಲ್ಲಿ ಬೆನ್ ಸ್ಟೋಕ್ಸ್ ಹವಾ!

ಆಂಡರ್ಸನ್ ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿ ಡ್ರಾನಲ್ಲಿ ಕೊನೆಗೊಂಡಿದೆ. ಭಾರತ ಎರಡು ಪಂದ್ಯ ಗೆದ್ರೆ ಇಂಗ್ಲೆಂಡ್ ಕೂಡ ಎರಡು ಮ್ಯಾಚ್ ಗೆದ್ದಿತ್ತು. ಒಂದು ಪಂದ್ಯ ಡ್ರಾ ಆಗಿದ್ರಿಂದ ಸರಣಿ ಕೂಡ ಡ್ರಾನಲ್ಲೇ ಮುಗಿದಿದೆ. ಆದ್ರೆ ಇಂಗ್ಲೆಂಡ್ ತಂಡ ಸಿರೀಸ್ ಗೆಲ್ಲುತ್ತೆ ಅಂತಾ ಕಾಯ್ತಿದ್ದವರು ಹೊಸ ವರಸೆ ತೆಗೆದಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ ಅವ್ರಂತೂ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಸೋಲಿಗೆ ಕಾರಣ ಏನು ಅನ್ನೋದನ್ನ ಹೇಳಿದ್ದಾರೆ. ಫೈನಲ್ ಮ್ಯಾಚ್ ನಲ್ಲಿ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಆಡದೆ ಇದ್ದದ್ದೇ ಪಂದ್ಯದ ಸೋಲಿಗೆ ಕಾರಣವಾಯ್ತು ಎಂದಿದ್ದಾರೆ.

ಇದನ್ನೂ ಓದಿ : ENGಗೆ 35 ರನ್.. INDಗೆ 4 ವಿಕೆಟ್ – 5ನೇ ಪಂದ್ಯ.. 5ನೇ ದಿನ.. ಗೆಲ್ಲೋದ್ಯಾರು?

ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ನೀಡಿದ್ದ 374 ರನ್‌ಗಳ ದಾಖಲೆಯ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಇಬ್ಬರೂ ಕೂಡ ಶತಕವೀರರಾಗಿ ಮೆರೆದಾಡಿದ್ರು. 301 ರನ್ ಗಳಿಗೆ 3 ವಿಕೆಟ್ ಅಷ್ಟೇ ಕಳ್ಕೊಂಡಿತ್ತು. ಬಟ್ 367 ರನ್ ಗಳನ್ನ ಕಲೆ ಹಾಕುವಷ್ಟ್ರಲ್ಲೇ ಆಲೌಟ್ ಆಯ್ತು. ಅದ್ರಲ್ಲೂ ಐದನೇ ದಿನದಾಟದ ವೇಳೆಗೆ ಇಂಗ್ಲೆಂಡ್ ತಂಡಕ್ಕೆ 35 ರನ್ಸ್ ಬೇಕಿತ್ತು. ಇನ್ನೂ 4 ವಿಕೆಟ್ ಅವ್ರ ಜೊತೆಯಲ್ಲಿತ್ತು. ಬಟ್ ಸಿರಾಜ್ ಮತ್ತು ಪ್ರಸಿದ್ಧ್ ಕೊಟ್ಟ ಸ್ಟ್ರೋಕ್​ಗೆ ಗೆಲುವಿಗೆ 7 ರನ್ಸ್ ಬೇಕಿದ್ದಾಗ ಸೋಲೊಪ್ಪಿಕೊಳ್ತು. ತೀರಾ ಕ್ಲೋಸ್​ಗೆ ಬಂದು ಸೋತಿದ್ದಕ್ಕೆ ಮಾಜಿ ಕ್ಯಾಪ್ಟನ್ ವಾಘನ್ ಬೆನ್ ಸ್ಟೋಕ್ಸ್ ತಂಡದಲ್ಲಿ ಇಲ್ಲದ್ದೇ ಕಾರಣ ಎಂದಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಇದ್ದಿದ್ರೆ ಗೆಲುವು ಫಿಕ್ಸ್ ಇರ್ತಿತ್ತು. ಸ್ಟೋಕ್ಸ್ ಇಲ್ಲದ ಪರಿಣಾಮ ಉಳಿದ ಆಟಗಾರರ ಮನಸ್ಥಿತಿ ಕೂಡ ತುಂಬಾ ವೀಕ್ ಆಗಿತ್ತು ಎಂಂದಿದ್ದಾರೆ.

ಇಂಗ್ಲೆಂಡ್ ಕಂಡ ಶ್ರೇಷ್ಠ ಆಲ್‌ರೌಂಡರ್ ಅಂತಾನೇ ಕರೆಸಿಕೊಳ್ತಿರೋ ಬೆನ್ ಸ್ಟೋಕ್ಸ್ ನಾಯಕನಾಗಿಯೂ ಟೆಸ್ಟ್ ಕ್ರಿಕೆಟ್‌ನ ಲೆಗಸಿಯನ್ನ ಕಂಟಿನ್ಯೂ ಮಾಡ್ತಿದ್ದಾರೆ. ಕಂಟಿನ್ಯೂ ಅನ್ನೋದಕ್ಕಿಂತ ಉತ್ತುಂಗಕ್ಕೆ ಏರಿಸುತ್ತಿದ್ದಾರೆ. ಟೆಸ್ಟ್ ತಂಡದ ಮುಖ್ಯ ತರಬೇತುದಾರ ಬ್ರೆಂಡನ್ ಮೆಕಲಮ್ ಜೊತೆಗೂಡಿ ಬಾಜ್​ಬಾಲ್ ಸ್ಟೈಲಲ್ಲಿ ಹೊಸ ಭಾಷ್ಯ ಬರೀತಿದ್ದಾರೆ.  ಭಾರತ ವಿರುದ್ಧದ ಸರಣಿಯಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಾಲ್ಕು ಟೆಸ್ಟ್‌ಗಳಲ್ಲಿ 25.23 ಬೌಲಿಂಗ್ ಸರಾಸರಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದ್ರಲ್ಲಿ ಒಂದು ಐದು ವಿಕೆಟ್ ಗೊಂಚಲು ಕೂಡ ಸೇರಿದೆ. ಹೈಯೆಸ್ಟ್ ವಿಕೆಟ್ ಟೇಕರ್ ಲಿಸ್ಟ್ ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಬ್ಯಾಟಿಂಗ್ ನಲ್ಲೂ ಕೂಡ ಒಂದು ಸೆಂಚುರಿ ಸೇರಿ 304 ರನ್ಸ್ ಕಲೆ ಹಾಕಿದ್ದಾರೆ. ಇದೇ ಕಾರಣಕ್ಕೋ ಏನೋ ಬಹುಶಃ ಸ್ಟೋಕ್ಸ್ ಇದ್ದಿದ್ರೆ ಪರಿಸ್ಥಿತಿ ಬೇರೆಯದ್ದೇ ಇರ್ತಿತ್ತು ಅಂತಿದ್ದಾರೆ.

Shantha Kumari