ಶ್ರೀಲಂಕಾ ವಿರುದ್ಧ ಸತತ ಸೋಲುಂಡ ಇಂಗ್ಲೆಂಡ್ – ಆಂಗ್ಲರ ವಿರುದ್ಧ ಲಂಕಾ ಪಡೆಯ ಪಾರುಪತ್ಯ

ಶ್ರೀಲಂಕಾ ವಿರುದ್ಧ ಸತತ ಸೋಲುಂಡ ಇಂಗ್ಲೆಂಡ್ – ಆಂಗ್ಲರ ವಿರುದ್ಧ ಲಂಕಾ ಪಡೆಯ ಪಾರುಪತ್ಯ

ಈ ಬಾರಿಯ ವಿಶ್ವಕಪ್​ನಲ್ಲಿ ಇದುವರೆಗೆ 5 ಪಂದ್ಯಗಳನ್ನಾಡಿರುವ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಬಾಂಗ್ಲಾದೇಶ್ ವಿರುದ್ಧ ಮಾತ್ರ ಗೆದ್ದಿರುವ ಇಂಗ್ಲೆಂಡ್, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಸೋತು ಸುಣ್ಣವಾಗಿದೆ. ಏಕದಿನ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡವು ಶ್ರೀಲಂಕಾ ವಿರುದ್ಧ ಕೊನೆಯ ಬಾರಿಗೆ ಗೆದ್ದಿರುವುದು 1999ರಲ್ಲಿ. ಇದಾದ ಬಳಿಕ ನಡೆದ ಐದು ವಿಶ್ವಕಪ್​ನಲ್ಲೂ ಆಂಗ್ಲರ ವಿರುದ್ಧ ಲಂಕಾ ಪಡೆ ಪಾರುಪತ್ಯ ಮೆರೆಯುತ್ತಾ ಬಂದಿದೆ.

ಇದನ್ನೂ ಓದಿ: ಐಸಿಸಿ ಏಕದಿನ Ranking ಪಟ್ಟಿ ರಿಲೀಸ್ -ನಂಬರ್ 1 ರೇಸ್‌ನಿಂದ ಗಿಲ್ ಜಸ್ಟ್ ಮಿಸ್

ವರ್ಲ್ಡ್​​ಕಪ್​ನಲ್ಲಿ ಹೇಗೆ ಟೀಂ ಇಂಡಿಯಾ ಪ್ರತಿ ಬಾರಿಯೂ ಪಾಕಿಸ್ತಾನವನ್ನ ಸೋಲಿಸುತ್ತೋ ಅದೇ ರೀತಿ, ಕಳೆದ 5 ವಿಶ್ವಕಪ್​​ಗಳಲ್ಲಿ ಶ್ರೀಲಂಕಾ ತಂಡ ಇಂಗ್ಲೆಂಡ್​​ನ್ನ ಮಣಿಸುತ್ತಲೇ ಇದೆ. 2007ರಲ್ಲಿ ವೆಸ್ಟ್​ಇಂಡೀಸ್​​ನಲ್ಲಿ ನಡೆದ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ನ್ನ ಶ್ರೀಲಂಕಾ ಸೋಲಿಸಿತ್ತು. 2011ರಲ್ಲೂ ಶ್ರೀಲಂಕಾ ಮುಂದೆ ಇಂಗ್ಲೆಂಡ್ ಸೋತಿತ್ತು. 2015ರಲ್ಲೂ ಇದೇ ಕಥೆಯಾಗಿತ್ತು. 2019ರಲ್ಲಿ ಇಂಗ್ಲೆಂಡ್​ ವರ್ಲ್ಡ್​ಕಪ್​ ಗೆದ್ರೂ ಕೂಡ ಶ್ರೀಲಂಕಾದ ವಿರುದ್ಧದಲ್ಲಿ ಮಾತ್ರ ಸೋಲನುಭವಿಸಿತ್ತು. ಈಗ 2023ರಲ್ಲಿ ಶ್ರೀಲಂಕಾ 5ನೇ ಬಾರಿಗೆ ಇಂಗ್ಲೆಂಡ್​​ನ್ನ ವರ್ಲ್ಡ್​​ಕಪ್​ನಲ್ಲಿ ಮಣಿಸಿದೆ.

ಇನ್ನು ಶ್ರೀಲಂಕನ್ ಕ್ರಿಕೆಟ್ ಟೀಂ ಬಗ್ಗೆ ಒಂದು ವಿಚಾರವನ್ನ ಹೇಳಲೇಬೇಕು. ಇಂಗ್ಲೆಂಡ್​ಗಿಂತ ಹೆಚ್ಚು ಫೈಟಿಂಗ್​ ಸ್ಪಿರಿಟ್​ನ್ನ ಶ್ರೀಲಂಕಾದ ಯಂಗ್ ಟೀಂ ತೋರಿಸ್ತಾ ಇದೆ. ಅದ್ರಲ್ಲೂ 36 ವರ್ಷದ ಆ್ಯಂಜಲೋ ಮ್ಯಾಥ್ಯೂಸ್​ ಕಮ್​ಬ್ಯಾಕ್​ ಮಾಡ್ತಾರೆ ​ಅಂತಾ ಯಾರು ಕೂಡ ಅಂದುಕೊಂಡಿರಲಿಲ್ಲ. ಇಂಗ್ಲೆಂಡ್​ ವಿರುದ್ಧದ ಮ್ಯಾಚ್​ ಈ ಬಾರಿಯ ವರ್ಲ್ಡ್​​ಕಪ್​ನಲ್ಲಿ ಮ್ಯಾಥ್ಯೂಸ್ ಆಡಿರುವ ಮೊದಲ ಪಂದ್ಯ. 2020ರ ಮಾರ್ಚ್​​ನಲ್ಲಿ ಆ್ಯಂಜಲೊ ಮ್ಯಾಥ್ಯೂಸ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ವಂಡೇ ಮ್ಯಾಚ್ ಆಡಿದ್ರು. ಅದಾದ ಬಳಿಕ ಶ್ರೀಲಂಕಾ ಪರ ಯಾವುದೇ ವಂಡೇ ಮ್ಯಾಚ್​ ಆಡಿರಲಿಲ್ಲ. ಮ್ಯಾಥ್ಯೂಸ್ ಕ್ರಿಕೆಟ್ ಕೆರಿಯರ್ ಅಂತ್ಯವಾಯ್ತು ಅಂತಾನೆ ಎಲ್ಲರೂ ಅಂದುಕೊಂಡಿದ್ರು. ಈ ಬಾರಿವ ವರ್ಲ್ಡ್​​ಕಪ್​ನಲ್ಲಿ ಟಾಪ್​-15 ಸ್ಕ್ವಾಡ್​​ನಲ್ಲಿ ಕೂಡ ಮ್ಯಾಥ್ಯೂಸ್ ಹೆಸರು ಇರಲಿಲ್ಲ. ಮ್ಯಾಥ್ಯೂಸ್​ ರಿಸರ್ವ್ಡ್​ ಪ್ಲೇಯರ್​ ಆಗಿದ್ರು. ಆದ್ರೆ ಪತಿರಣ ಗಾಯಗೊಂಡಿದ್ರಿಂದಾಗಿ ಮ್ಯಾಥ್ಯೂಸ್​​ರನ್ನ ಭಾರತಕ್ಕೆ ಕರೆತರಲಾಯ್ತು. ಇಂಗ್ಲೆಂಡ್​ ವಿರುದ್ಧ ಈ ಬಾರಿಯ ವರ್ಲ್ಡ್​​ಕಪ್​ನ ತಮ್ಮ ಫಸ್ಟ್ ಓವರ್​ನಲ್ಲೇ ಮ್ಯಾಥ್ಯೂಸ್ ವಿಕೆಟ್ ಪಡೆದ್ರು. 5 ಓವರ್​ಗಳಲ್ಲಿ 14 ರನ್​ ನೀಡಿ ಒಟ್ಟು 2 ವಿಕೆಟ್ ಗಳಿಸಿದ್ದಾರೆ. ಇನ್ನು ಶ್ರೀಲಂಕಾ ಕ್ಯಾಪ್ಟನ್ ಕುಸಾಲ್ ಮೆಂಡಿಸ್ ಕೂಡ ಅಷ್ಟೇ, ಇಂಗ್ಲೆಂಡ್​ ವಿರುದ್ಧದ ಮ್ಯಾಚ್​ನಲ್ಲಿ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. 7 ಓವರ್​ಗಳ ಅಂತರದಲ್ಲಿ ಒಟ್ಟು 5 ಬಾರಿ ಬೌಲಿಂಗ್​ ಚೇಂಜ್ ಮಾಡಿದ್ದಾರೆ. ಅಂದ್ರೆ 7 ಓವರ್​ಗಳ ಒಳಗೆ ಐವರು ಬೌಲರ್ಸ್​ಗಳನ್ನ ಬಳಸಿದ್ರು. ಈ ಮೂಲಕ ಇಂಗ್ಲೆಂಡ್​ ಬ್ಯಾಟ್ಸ್​​ಮನ್​ಗಳನ್ನ ಸೆಟ್ ಆಗೋಕೆ ಬಿಟ್ಟಿಲ್ಲ. ಆದ್ರೆ ಇಂಥಾ ಸ್ಮಾರ್ಟ್ ಥಿಂಕಿಂಗ್​ನಲ್ಲಿ ಜಾಸ್ ಬಟ್ಲರ್ ಫೇಲ್ ಆಗಿದ್ದಾರೆ. ಹೀಗಾಗಿ ಮತ್ತೊಂದು ಹೊಡೆತ ತಿಂದು ಈಗ ಇಂಗ್ಲೆಂಡ್ ಟೀಂ ಲಂಡನ್ ಫ್ಲೈಟ್ ಹತ್ತಲು ರೆಡಿಯಾಗಿದೆ.

Sulekha