ಇಂಗ್ಲೆಂಡ್ 353 ರನ್‌ಗೆ ಆಲೌಟ್ – ಟೀಮ್ ಇಂಡಿಯಾದ ಮೊದಲ ಇನ್ನಿಂಗ್ಸ್ ಶುರು

ಇಂಗ್ಲೆಂಡ್ 353 ರನ್‌ಗೆ ಆಲೌಟ್ – ಟೀಮ್ ಇಂಡಿಯಾದ ಮೊದಲ ಇನ್ನಿಂಗ್ಸ್ ಶುರು

ಭಾರತದ ಬೌಲರ್‌ಗಳು ಆಂಗ್ಲರನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದ ನೆರವಿನೊಂದಿಗೆ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಒಳ್ಳೇ ಸ್ಕೋರ್ ದಾಖಲಿಸಿತ್ತು. ಹೀಗಿದ್ದರೂ ಕೂಡಾ ಆಂಗ್ಲರನ್ನು ಆಲೌಟ್ ಮಾಡಿರುವ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ಆರಂಭಿಸಿದೆ.

ಇದನ್ನೂ ಓದಿ: ಹಿಟ್‌ಮ್ಯಾನ್ ಸಿಟ್ಟು ಕ್ಯಾಮರಾ ಮೇಲೆ..! –ಕ್ಯಾಪ್ಟನ್ ಸಿಟ್ಟು ಕಂಡು ಕ್ಯಾಮರಾಮೆನ್ ಮಾಡಿದ್ದೇನು?

ರಾಂಚಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ. ಐದು ವಿಕೆಟ್‌ಗಳು ಬೇಗನೆ ಉರುಳಿದ್ದವು. ಆಂಗ್ಲರ ಸಂಕಷ್ಟಕ್ಕೆ ನೆರವಾದ ಜೋ ರೂಟ್ ಭರ್ಜರಿ ಶತಕ ಹೊಡೆದರು. ಜೋ ರೂಟ್ ಜವಾಬ್ದಾರಿಯುತ ಬ್ಯಾಟಿಂಗ್ ನಿಂದಾಗಿ ಆಂಗ್ಲರು 353 ರನ್ ಗಳಿಸಿದರು.

ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡವು 7 ವಿಕೆಟ್ ಕಳೆದುಕೊಂಡು 302 ರನ್ ಕಲೆಹಾಕಿತು. ಎರಡನೇ ದಿನದಾಟದಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಒಲೀ ರಾಬಿನ್ಸನ್ ಹಾಗೂ ಜೋ ರೂಟ್ ಆರಂಭದಲ್ಲೇ ರನ್ ಕಲೆಹಾಕುತ್ತಾ ಸಾಗಿದರು. ಇದೇ ವೇಳೆ ಒಲೀ ರಾಬಿನ್ಸನ್ ತಮ್ಮ ಚೊಚ್ಚಲ ಅರ್ಧಶತಕ ಪೂರೈಸಿದರು. ಆದರೆ ಈ ಹಾಫ್ ಸೆಂಚುರಿ ಬೆನ್ನಲ್ಲೇ ರಾಬಿನ್ಸನ್ (59) ವಿಕೆಟ್ ಪಡೆಯುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು. ಇನ್ನು ಶೊಯೆಬ್ ಬಶೀರ್ (0) ಬಂದ ವೇಗದಲ್ಲೇ ಹಿಂತಿರುಗಿದರು. ಇದಾಗ್ಯೂ ಜೋ ರೂಟ್ ಅವರ ಏಕಾಂಗಿ ಹೋರಾಟ ಮುಂದುವರೆಯಿತು. ಅಲ್ಲದೆ ತಂಡದ ಮೊತ್ತವನ್ನು 350 ರ ಗಡಿದಾಟಿಸಿದರು. ಅಂತಿಮವಾಗಿ ಜೇಮ್ಸ್ ಅ್ಯಂಡರ್ಸನ್ (0) ಔಟ್ ಆಗುವುದರೊಂದಿಗೆ ಇಂಗ್ಲೆಂಡ್ ತಂಡ 353 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ 122 ರನ್ ಬಾರಿ ಜೋ ರೂಟ್ ಅಜೇಯರಾಗಿ ಉಳಿದರು. ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ 4 ವಿಕೆಟ್ ಕಬಳಿಸಿ ಮಿಂಚಿದರೆ, ಆಕಾಶ್ ದೀಪ್ 3 ವಿಕೆಟ್ ಪಡೆದರು.

Sulekha