ಬ್ಯಾಟಿಂಗ್ ನಲ್ಲೂ ಭಾರತದ ಬೌಲರ್ಸ್ ಕಾಡಿದ ಆಂಗ್ಲರು – ಪೋಪ್ & ರೂಟ್ ಅದ್ಭುತ ಜೊತೆಯಾಟ

ಕ್ರಿಕೆಟ್ನಲ್ಲಿ ಇಂಡಿವಿಶ್ಯೂಯಲ್ ಸ್ಕೋರ್ಗಿಂತ ಪಾರ್ಟ್ನರ್ಶಿಪ್ ಮೋಸ್ಟ್ ಇಂಪಾರ್ಟೆಂಟ್. ಜೊತೆಯಾಟದಲ್ಲಿ ಬಿಗ್ ಸ್ಕೋರ್ ಬಂತು ಅಂದ್ರಷ್ಟೇ ಇಡೀ ಪಂದ್ಯವನ್ನ ಡಾಮಿನೇಟ್ ಮಾಡಬಹುದು. ಬಟ್ ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಟೀಂ ಇಂಡಿಯಾ ಬ್ಯಾಟರ್ಸ್ ಕಡೆಯಿಂದ ಈ ಜೊತೆಯಾಟ ಬರ್ಲಿಲ್ಲ. ಅತ್ತ ಆಂಗ್ಲರು ಮಾತ್ರ ಕಂಪ್ಲೀಟ್ ಕಂಟ್ರೋಲ್ನಲ್ಲಿ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ : ಬೆರಳು ಮುರಿದ್ರೂ ಬ್ಯಾಟಿಂಗ್ ಇಳಿದ ಪಂತ್ – ಮ್ಯಾಚ್ ಗೆಲ್ಲೋಕೆ ರಿಸ್ಕ್ ತಗೊಂಡ್ರಾ?
ಮ್ಯಾಂಚೆಸ್ಟರ್ನಲ್ಲಿ ನಡೀತಿರೋ ನಾಲ್ಕನೇ ಟೆಸ್ಟ್ ಪಂದ್ಯ ಭಾರತದ ಪಾಲಿಗೆ ಗೆಲ್ಲಲೇಬೇಕಾದ ಪಂದ್ಯ. ಆದ್ರೆ ಫಸ್ಟ್ ಇನ್ನಿಂಗ್ಸ್ನಲ್ಲಿ ಆಲ್ರೆಡಿ ಬ್ರಿಟಿಷರೇ ಮೇಲುಗೈ ಸಾಧಿಸಿದ್ದಾರೆ. ಭಾರತದ ಪರ ಬ್ಯಾಟಿಂಗ್ನಲ್ಲಿ ಯಾವುದೇ ಬಿಗ್ ಸ್ಕೋರ್ ಆಗ್ಲಿ ಅಥವಾ ಪಾರ್ಟ್ನರ್ಶಿಪ್ ಆಗ್ಲಿ ಬರದಂತೆ ಬೌಲಿಂಗ್ನಲ್ಲಿ ಕಂಟ್ರೋಲ್ ಮಾಡಿದ್ರು. ಈಗ ಬ್ಯಾಟಿಂಗ್ನಲ್ಲೂ ಅಂಥದ್ದೇ ವ್ಯಾಲ್ಯುಯೇಬಲ್ ಇನ್ನಿಂಗ್ಸ್ ಆಡ್ತಿದ್ದಾರೆ. ಫಸ್ಟ್ ವಿಕೆಟ್ಗೆ ಶತಕದ ಜೊತೆಯಾಟ ಆಡಿದ್ದವ್ರು ಮೂರನೇ ವಿಕೆಟ್ ವೇಳೆಗೆಲ್ಲಾ 300+ ಸ್ಕೋರ್ ಮಾಡಿದ್ದಾರೆ. ಸೋ ಫಸ್ಟ್ ಇನ್ನಿಂಗ್ಸ್ನಲ್ಲಿ ಮುನ್ನಡೆ ಸಾಧಿಸೋದಂತೂ ಪಕ್ಕಾ ಆಗಿದೆ.
ಫಸ್ಟ್ ಇನ್ನಿಂಗ್ಸ್ನಲ್ಲಿ 358 ರನ್ಗಳಿಗೆ ಟೀಂ ಇಂಡಿಯಾ ಬ್ಯಾಟರ್ಸ್ ಆಲೌಟ್ ಆಗಿದ್ರು. ಈ ಸ್ಕೋರ್ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಸವಾಲಿನ ಗುರಿ ಆಗಬಹುದು ಅನ್ನೋ ನಿರೀಕ್ಷೆ ಇತ್ತು. ಆದ್ರೆ ಜಾಕ್ ಕ್ರೌಲಿ ಮತ್ತು ಬೆನ್ ಡಕೆಟ್ ಇಂಗ್ಲೆಂಡ್ ಪರ ಓಪನರ್ಸ್ ಆಗಿ ಕಣಕ್ಕಿಳಿದು ಎಲ್ಲರ ಲೆಕ್ಕಾಚಾರಗಳನ್ನ ತಲೆಕೆಳಗಾಗುವಂತೆ ಮಾಡಿದ್ರು. ಟೆಸ್ಟ್ ಮ್ಯಾಚ್ ಅನ್ನೋದನ್ನೂ ಮರೆತು ಓಡಿಐ ಸರಣಿಯಂತೆ ಅಗ್ರೆಸ್ಸಿವ್ ಇಂಟೆಂಟ್ನಲ್ಲೇ ಬ್ಯಾಟ್ ಬೀಸಿದ್ರು. ಟೆಸ್ಟ್ನ 2ನೇ ದಿನದ ಆರಂಭದಲ್ಲಿಯೇ ಇಂಗ್ಲೆಂಡ್ ಮೇಲುಗೈ ಸಾಧಿಸಿತು. ಮೊದಲ ದಿನದಂದು ಕಾಲ್ಬೆರಳಿನ ಮುರಿತದಿಂದ ಗಾಯಗೊಂಡು ರಿಟೈರ್ಡ್ ಹರ್ಟ್ ಆಗಿದ್ರು. ಬಟ್ ಎರಡನೇ ದಿನ ಮತ್ತೆ ಬ್ಯಾಟಿಂಗ್ಗೆ ಇಳಿದು ಅರ್ಧಶತಕ ಬಾರಿಸಿದ್ರು. ಭಾರತ ಮೊದಲ ಇನ್ನಿಂಗ್ಸ್ನಲ್ಲಿ 358 ರನ್ ಗಳಿಸಲು ಸಹಾಯ ಮಾಡಿದರು. ಇತ್ತ ಕ್ರೌಲಿ ಮತ್ತು ಡಕೆಟ್ ಅಗ್ರೆಸ್ಸಿವ್ ಬ್ಯಾಟಿಂಗ್ನಿಂದ ಪ್ರತಿ ಓವರ್ಗೆ 4.89 ರನ್ಗಳ ವೇಗದಲ್ಲಿ ಸ್ಕೋರ್ ಮಾಡಿ ಕೇವಲ 46 ಓವರ್ಗಳಲ್ಲಿ 2 ವಿಕೆಟ್ಗೆ 225 ರನ್ ಗಳಿಸಿತು. ಬೆನ್ ಡಕೆಟ್ ಮತ್ತು ಝಾಕ್ ಕ್ರಾಲಿ ಕೇವಲ 192 ಎಸೆತಗಳಲ್ಲಿ 166 ರನ್ಗಳ ಅದ್ಭುತ ಜೊತೆಯಾಟವಾಡಿದ್ರು. ಹೀಗಿದ್ರೂ ಜಡೇಜಾ ಮತ್ತು ಅನ್ಶುಲ್ ತಲಾ ಒಂದೊಂದು ವಿಕೆಟ್ ತೆಗೆದು ಸ್ವಲ್ಪ ಹೋಪ್ಸ್ ತಂದುಕೊಟ್ಟಿದ್ರು.
ಮೂರನೇ ದಿನದಾಟದಲ್ಲಿ ಪೋಪ್ & ರೂಟ್ ಅದ್ಭುತ ಜೊತೆಯಾಟ!
ಸೆಕೆಂಡ್ ಡೇ ಅಂತೂ ಬೇಗ ವಿಕೆಟ್ ಬೀಳಲಿಲ್ಲ. ಬಟ್ ಮೂರನೇ ದಿನವಾದ್ರೂ ಭಾರತೀಯ ಬೌಲರ್ಸ್ ಕಮ್ ಬ್ಯಾಕ್ ಮಾಡಬಹುದು ಅನ್ನೋ ನಿರೀಕ್ಷೆ ಇತ್ತು. ಬಟ್ ಅದನ್ನ ಹುಸಿಗೊಳಿಸಿದ್ದು ಓಲಿ ಪೋಪ್ ಮತ್ತು ಜೋ ರೂಟ್. ಬುಮ್ರಾ, ಸಿರಾಜ್, ಅನ್ಶುಲ್ ಹೀಗೆ ಯಾರೇ ಬೌಲಿಂಗ್ಗೆ ಬಂದ್ರೂ ವಿಕೆಟ್ ಕೊಡದೆ ಕಾಡಿದ್ರು. ಇಬ್ಬರೂ ಕೂಡ ಅರ್ಧಶತಕಗಳನ್ನ ಕಂಪ್ಲೀಟ್ ಮಾಡಿಕೊಂಡ್ರು. 100 ರನ್ಗಳ ಜೊತೆಯಾಟವಾಡಿದ್ರು. ಮೊದಲ ವಿಕೆಟ್ಗೆ 166 ರನ್ಗಳ ಜೊತೆಯಾದ 3ನೇ ವಿಕೆಟ್ಗೆ 100 ರನ್ಗಳ ಜೊತೆಯಾಟದ ಮೂಲಕ ಭಾರತದ ಟೆನ್ಷನ್ ಹೆಚ್ಚಿಸಿದ್ರು. ಇಬ್ಬರ ವಿಕೆಟ್ ತೆಗೆಯೋದೇ ದೊಡ್ಡ ಸವಾಲಾಯ್ತು. ಮೂರನೇ ದಿನದಾಟದ ಫಸ್ಟ್ ಸೆಷನ್ ಮುಗಿಯೋ ವೇಳೆಗೆ ಇಂಗ್ಲೆಂಡ್ ತಂಡ ಎರಡು ವಿಕೆಟ್ ಗಳ ನಷ್ಟಕ್ಕೆ 332 ರನ್ ಗಳನ್ನ ಕಲೆ ಹಾಕಿತ್ತು.

ನೋಡಿರಿ

