ಪರೀಕ್ಷೆಯಲ್ಲಿ ಕಾಪಿ ಹೊಡೆಯೋದನ್ನು ತಪ್ಪಿಸಲು ವಿದ್ಯಾರ್ಥಿಗಳು ಹೀಗೆ ಬಂದಿದ್ದಾರೆ! ವಿಡಿಯೋ ವೈರಲ್
ಈ ಫನ್ನಿ ಐಡಿಯಾವನ್ನು ಕಂಡು ನೆಟ್ಟಿಗರು ಫುಲ್ ಫಿದಾ

ಪರೀಕ್ಷೆಯಲ್ಲಿ ಕಾಪಿ ಹೊಡೆಯೋದನ್ನು ತಪ್ಪಿಸಲು ವಿದ್ಯಾರ್ಥಿಗಳು ಹೀಗೆ ಬಂದಿದ್ದಾರೆ! ವಿಡಿಯೋ ವೈರಲ್ಈ ಫನ್ನಿ ಐಡಿಯಾವನ್ನು ಕಂಡು ನೆಟ್ಟಿಗರು ಫುಲ್ ಫಿದಾ

ಸಾಮಾನ್ಯವಾಗಿ ಪರಿಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಪ್ರಾಧ್ಯಾಪಕರೂ ಕಾಪಿ ಹೊಡೆವುದನ್ನು ತಡೆಯಲು ತಲೆಕೆಡಿಸಿಕೊಳ್ಳುತ್ತಾರೆ.  ಇನ್ನೊಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆ ಕದ್ದು ನೋಡಿ ಬರೆಯುವುದು, ಕಣ್ಸನ್ನೆ ಮಾಡುವುದೆಲ್ಲಾ ಮಾಡುತ್ತಾರೆ. ಇದನ್ನು ತಡೆಯಲು ಫಿಲಿಫೈನ್ಸ್ ನ ಕಾಲೇಜೊಂದರ ವಿದ್ಯಾರ್ಥಿಗಳು ಉಪಾಯವೊಂದು ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಫನ್ನಿ ಐಡಿಯಾವನ್ನು ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಇದನ್ನೂ ಓದಿ:ಓಲಾ-ಉಬರ್‌ಗೆ ಸೆಡ್ಡು ಹೊಡೆಯುತ್ತಾ ‘ನಮ್ಮ ಯಾತ್ರಿ’? 

ಫೀಪಿಫೈನ್ ನ ಲೆಗಜ್ಜಿ ಸಿಟಿಯಲ್ಲಿರುವ ಕಾಲೇಜೊಂದರ ಪ್ರಾಧ್ಯಾಪಕರು ಕಾಫಿ ಹೊಡೆಯುವುದನ್ನು ತಪ್ಪಿಸಲು ತಲೆಯನ್ನು ಕವರ್  ಮಾಡುವಂತೆ ಏನಾದರೂ ಧರಿಸಿ ಪರೀಕ್ಷೆ ಬರೆಯಿರಿ. ಇತರರ ಉತ್ತರ ಪತ್ರಿಕೆ ನೋಡುವಂತಾಗಬಾರದು ಎಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದರು. ಅದಕ್ಕಾಗಿ ವಿದ್ಯಾರ್ಥಿಗಳು ಫನ್ನಿ ಐಡಿಯಾವನ್ನು ಮಾಡಿದ್ದು, ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ವೇಳೆ ಮೊಟ್ಟೆ ರಟ್ಟು, ಪೇಪರ್ ಬಳಸಿಕೊಂಡು ಹೆಡ್ ಗೇರ್ ಮಾಡಿ ಧರಿಸಿಕೊಂಡು ಬಂದಿದ್ದಾರೆ. ವಿದ್ಯಾರ್ಥಿಗಳ ಈ ಅವತಾರಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ.

ಇತರರ ಉತ್ತರ ಪತ್ರಿಕೆಗಳನ್ನು ನೋಡಿ ಕಾಪಿ ಹೊಡೆಯುವುದನ್ನು ತಡೆಗಟ್ಟಲು ಮಾಡಿದ ಈ ಐಡಿಯಾಗೆ  ನೆಟ್ಟಿಗರು ವ್ಯಕ್ತಪಡಿಸಿದ್ದು, ಇದು ಸೂಪರ್ ಐಡಿಯಾ ಎಂದಿದ್ದಾರೆ.

suddiyaana