ENGನಲ್ಲಿ ಯಂಗ್ ಸ್ಟರ್ಸ್ ಸುನಾಮಿ – ಜೈಸ್ವಾಲ್ ಟು ಕರುಣ್.. ಹೇಗಿದೆ ತಂತ್ರ?
ಟಾಸ್ ಸೋತ್ರೂ ಮ್ಯಾಚ್ ಗೆಲ್ಲುತ್ತಾ IND?

2025-27ರ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡಲು ಭಾರತ ಇಂಗ್ಲೆಂಡ್ ತಂಡಗಳು ಅಖಾಡಕ್ಕಿಳಿದಿದೆ. 5 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಲೀಡ್ಸ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಅನುಭವಿ ಆಟಗಾರರ ಆಬ್ಸೆನ್ಸ್ನಲ್ಲಿ ಕಣಕ್ಕಿಳಿದಿರೋ ಯಂಗ್ ಸ್ಟರ್ಸ್ ಗೆ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸೋ ಸವಾಲೂ ಇದೆ. 45 ದಿನಗಳ ಸುದೀರ್ಘ ಸರಣಿ ಬಳಿಕ ಟ್ರೋಫಿಯನ್ನು ಗೆದ್ದು ಭಾರತಕ್ಕೆ ತರುವ ಜವಾಬ್ದಾರಿ ಕೂಡ ಯಂಗ್ ಇಂಡಿಯಾ ಮೇಲಿದೆ.
ಇದನ್ನೂ ಓದಿ : ದಿನಕ್ಕೆ 8 ಗಂಟೆ ಬದಲು 10 ಗಂಟೆಗೆ ವಿಸ್ತರಿಣೆಗೆ ವಿರೋಧ – ಸ್ಪಷ್ಟನೆ ಕೊಟ್ಟ ಕಾರ್ಮಿಕ ಸಚಿವ ಸಂತೋಷ್ ಲಾಡ್
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯೂ ಇಂದಿನಿಂದ ಆರಂಭವಾಗಿದೆ. ಲೀಡ್ಸ್ನ ಹೆಡಿಂಗ್ಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಭಾರತ ತಂಡದಲ್ಲಿ ಯುವ ಆಟಗಾರರೇ ತುಂಬಿದ್ದು ಅನುಭವಿ ಹಾಗೇ ಬಲಿಷ್ಠ ಬ್ರಿಟಿಷ್ ತಂಡವನ್ನು ಎದುರಿಸಲಿದ್ದಾರೆ.
ಪ್ಲೇಯಿಂಗ್ 11 ಆಟಗಾರರು!
ಯಶಸ್ವಿ ಜೈಸ್ವಾಲ್
ಕೆ.ಎಲ್ ರಾಹುಲ್
ಸಾಯಿ ಸುದರ್ಶನ್
ಶುಭಮನ್ ಗಿಲ್
ರಿಷಭ್ ಪಂತ್
ಕರುಣ್ ನಾಯರ್
ರವೀಂದ್ರ ಜಡೇಜಾ
ಶಾರ್ದೂಲ್ ಠಾಕೂರ್
ಜಸ್ಪ್ರೀತ್ ಬುಮ್ರಾ
ಮೊಹಮ್ಮದ್ ಸಿರಾಜ್
ಪ್ರಸಿದ್ಧ್ ಕೃಷ್ಣ
ಸೋ ಇಷ್ಟು ಆಟಗಾರುರ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ದೇ ಈ ಮ್ಯಾಚ್ ನ ಹೈಲೆಟ್ ಅಂದ್ರೆ ಈ ಪಂದ್ಯದ ಮೂಲಕ ಐಪಿಎಲ್ನಲ್ಲಿ ಮಿಂಚಿದ್ದ ಹಾಗೇ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿರುವ ಸ್ಟಾರ್ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಅವ್ರ ಕ್ಯಾಪ್ ನಂಬರ್ 317. ಹಾಘೇ ಕಳೆದ ಒಂದುವರೆ ವರ್ಷದಿಂದ ತಂಡದಿಂದ ದೂರ ಉಳಿದಿದ್ದ ಶಾರ್ದೂಲ್ ಠಾಕೂರ್ ಕೂಡ ಇದೇ ಪಂದ್ಯದ ಮೂಲಕ ಮತ್ತೆ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಹಾಗೂ ಕಳೆದ 8 ವರ್ಷದಿಂದ ಟೀಂ ಇಂಡಿಯಾದಲ್ಲಿ ಅವಕಾಶಕ್ಕಾಗಿ ಕಾದು ಕುಳಿತಿದ್ದ ಕನ್ನಡಿಗ ಕರುಣ್ ನಾಯರ್‌ಗೂ ಕೂಡ ಇಂದಿನ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ. ಇವರ ಜೊತೆಗೆ ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ಕೂಡ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ಪರ ಕಣಕ್ಕಿಳಿದಿದ್ದಾರೆ ಮೂವರು ಕನ್ನಡಿಗರು!
ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಟೆಸ್ಟ್ ಮ್ಯಾಚ್ ಕನ್ನಡಿಗರ ಪಾಲಿಗೆ ತುಂಬಾನೇ ಸ್ಪೆಷಲ್ ನೋಡಿ. ಯಾಕಂದ್ರೆ ಕರ್ನಾಟಕದ ಮೂವರು ಪ್ಲೇಯರ್ಸ್ ಒಟ್ಟೊಟ್ಟಿಗೆ ಮೈದಾನಕ್ಕೆ ಇಳಿಯೋ ಅವಕಾಶ ಸಿಕ್ಕಿದೆ. ಸಾಲಿಡ್ ಫಾರ್ಮ್ನಲ್ಲಿರೋ ಕೆ.ಎಲ್.ರಾಹುಲ್ ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದಾರೆ. ಪ್ರಸ್ತುತ ಇಂಗ್ಲೆಂಡ್ನಲ್ಲಿ ಆಡ್ತಿರೋರ ಪೈಕಿ ಮೋಸ್ಟ್ ಸೀನಿಯರ್ ಅಂದ್ರೆ ರಾಹುಲ್. ಹಾಗೇ ದೇಶಿ ಕ್ರಿಕೆಟ್‌ನಲ್ಲಿ ರನ್ ಶಿಖರವನ್ನೇರಿ ಟೀಂ ಇಂಡಿಯಾದಲ್ಲಿ ಪುನಃ ಸ್ಥಾನ ಗಿಟ್ಟಿಸಿಕೊಂಡಿರೋ ಕರುಣ್ ನಾಯರ್ ಕೂಡ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೇ ಈ ಬಾರಿ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಜೊತೆ ಪ್ರಸಿದ್ಧ್ ಕೃಷ್ಣಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿದೆ. ಇನ್ನು ಪ್ರಸಿದ್ಧ್ ಕೃಷ್ಣ 2025ರ ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ಪರ ಕಣಕ್ಕಿಳಿದಿದ್ರು. ಹಾಗೇ ಹೈಯೆಸ್ಟ್ ವಿಕೆಟ್ ಟೇಕರ್ ಆಗಿ ಪರ್ಪಲ್ ಕ್ಯಾಪ್ ಕೂಡ ತಮ್ಮದಾಗಿಸಿಕೊಂಡಿದ್ರು.

ನೋಡಿರಿ

