TEST ಟೀಂಗೆ ಬೇಕಿತ್ತಾ ಶ್ರೇಯಸ್ ಅಯ್ಯರ್ – 3ನೇ ಸ್ಲಾಟ್ ಫೇಲ್ಯೂರ್ ಗೆ ಇದೇ ಕಾರಣ
ಫ್ಯಾನ್ಸ್ ಟ್ರೆಂಡ್.. ಕಮ್ ಬ್ಯಾಕ್ಸ್ ಫಿಕ್ಸ್!

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟರ್ಗಳಿಂದ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಬರ್ತಿಲ್ಲ. ಅದ್ರಲ್ಲೂ ನಂಬರ್ 3 ಸ್ಲಾಟ್ ಅಂತೂ ಕಂಪ್ಲೀಟ್ ಫ್ಲ್ಯಾಪ್. ಮೂರೂ ಪಂದ್ಯಗಳಲ್ಲೂ ಮೂರನೇ ಕ್ರಮಾಂಕದ ಬ್ಯಾಟ್ಸ್ಮನ್ನಿಂದ ಒಂದೇ ಒಂದು ಅರ್ಧಶತಕವೂ ಬಂದಿಲ್ಲ. ಇದೇ ಕಾರಣಕ್ಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಬ್ರಿಂಗ್ ಬ್ಯಾಕ್ ಶ್ರೇಯಸ್ ಅಯ್ಯರ್ ಅನ್ನೋ ಟ್ರೆಂಡ್ ಶುರುವಾಗಿದೆ. 4ನೇ ಪಂದ್ಯಕ್ಕಾದ್ರೂ ಶ್ರೇಯಸ್ಗೆ ಚಾನ್ಸ್ ಕೊಡಿ ಅಂತಾ ಪೋಸ್ಟ್ಗಳನ್ನ ಹಾಕ್ತಿದ್ದಾರೆ.
ಇದನ್ನೂ ಓದಿ : ಫ್ಯಾಷನ್ ಫ್ರೂಟ್ ಹಣ್ಣು ತಿಂದ್ರೆ ಈ ರೋಗಗಳು ಮಾಯ! – ಆರೋಗ್ಯ ಪ್ರಯೋಜನಗಳು ಒಂದಾ.. ಎರಡಾ?
ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸ್ತಿದ್ದಾರೆ. ಈ ಇಬ್ಬರ ಜೋಡಿ ಒಂದು ಮಟ್ಟಿಗೆ ಆರಂಭದಲ್ಲಿ ಭದ್ರ ಬುನಾದಿಯನ್ನೇ ಹಾಕುತ್ತಿದೆ. ಬಟ್ ಅದನ್ನ ಬಿಗ್ ಸ್ಕೋರ್ ಆಗಿ ಕನ್ವರ್ಸ್ ಮಾಡೋಕೆ ನಂಬರ್ 3 ಸ್ಲಾಟ್ ಬ್ಯಾಟರ್ನಿಂದ ಯಾವುದೇ ಎಫರ್ಟ್ ಕಾಣ್ತಿಲ್ಲ. ಮೊದಲ ಪಂದ್ಯದಲ್ಲಿ ಈ ಕ್ರಮಾಂಕದ್ಲಿ ಸಾಯಿ ಸುದರ್ಶನ್ ಕಣಕ್ಕಿಳಿದು ಡೆಬ್ಯೂ ಇನ್ನಿಂಗ್ಸ್ನಲ್ಲೇನಲ್ಲೇ ಡಕ್ಔಟ್ ಆಗಿದ್ರು. ಎರಡನೇ ಇನ್ನಿಂಗ್ಸ್ನಲ್ಲಿ 30 ರನ್ ಕಲೆ ಹಾಕಿದ್ರು. ಇನ್ನು ಎರಡು ಮತ್ತು ಮೂರನೇ ಪಂದ್ಯದಲ್ಲಿ ಕರುಣ್ ನಾಯರ್ರನ್ನ ಮೂರನೇ ಸ್ಲಾಟ್ನಲ್ಲಿ ಕಣಕ್ಕಿಳಿಸಲಾಗಿತ್ತು. ಬಟ್ ಕರುಣ್ ನಾಯರ್ದೂ ಅದೇ ಕಥೆ. ಒಂದೇ ಒಂದು ಅರ್ಧಶತಕ ಕೂಡ ಬಂದಿಲ್ಲ. ಇದೇ ಕಾರಣಕ್ಕೆ ಈಗ ನಾಲ್ಕನೇ ಪಂದ್ಯಕ್ಕೆ ಶ್ರೇಯಸ್ ಅಯ್ಯರ್ರನ್ನ ಕಣಕ್ಕಿಳಿಸಿ ಅಂತಾ ಅಭಿಮಾನಿಗಳು ಪೋಸ್ಟ್ಗಳನ್ನ ಹಾಕುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ.
ಕಮ್ ಬ್ಯಾಕ್ ಮಾಡ್ತಾರಾ ಶ್ರೇಯಸ್?
2024ರ ಫೆಬ್ರವರಿಯಲ್ಲಿ ಟೆಸ್ಟ್ ತಂಡದಿಂದ ಶ್ರೇಯಸ್ ಅಯ್ಯರ್ ಡ್ರಾಪ್
ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸ್ಥಾನವಿಲ್ಲ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ನಾಯಕನಾಗಿ ಐಪಿಎಲ್ ಚಾಂಪಿಯನ್
ಮುಂಬೈ ತಂಡವನ್ನು 2024-25 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ
ಪಂಜಾಬ್ ಕಿಂಗ್ಸ್ ತಂಡವನ್ನು 2025 ರ ಐಪಿಎಲ್ ನ ಫೈನಲ್ ಗೆ ಲೀಡ್
ಇಂಗ್ಲೆಂಡ್ ಎದುರು 3 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಶ್ರೇಯಸ್
181 ರನ್ ಕಲೆಹಾಕಿದ್ದ ಶ್ರೇಯಸ್ ಬ್ಯಾಟ್ ನಿಂದ 2 ಅರ್ಧಶತಕಗಳು
ಶ್ರೇಯಸ್ ಟೀಂ ಇಂಡಿಯಾ ಗೆಲುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ
ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಅಪರೂಪದ ಭಾರತೀಯ ಆಟಗಾರರ ಪಟ್ಟಿ
14 ಟೆಸ್ಟ್ ಗಳನ್ನು ಆಡಿ ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 811 ರನ್
ರಣಜಿ ಟ್ರೋಫಿಯ ಏಳು ಇನಿಂಗ್ಸ್ಗಳಲ್ಲಿ 68ರ ಸರಾಸರಿಯಲ್ಲಿ 480 ರನ್
2025ರ ಐಪಿಎಲ್ ನಲ್ಲಿ 17 ಪಂದ್ಯಗಳಲ್ಲಿ 604 ರನ್, ಮತ್ತೆ ಚಾನ್ಸ್ ಸಿಗುತ್ತಾ?

ನೋಡಿರಿ

