ENGಗೆ ಟೆಸ್ಟ್ ಅಲ್ಲ.. ಟಿ-20 ಫೈಟ್ – ಬುಮ್ರಾ ವಿರುದ್ಧ BAZBALL ರಣನೀತಿ
ಬಲಿಷ್ಠ ಬ್ಯಾಟಿಂಗ್.. ಹೇಗಿರುತ್ತೆ ಫೈಟ್?  

ENGಗೆ ಟೆಸ್ಟ್ ಅಲ್ಲ.. ಟಿ-20 ಫೈಟ್ – ಬುಮ್ರಾ ವಿರುದ್ಧ BAZBALL ರಣನೀತಿಬಲಿಷ್ಠ ಬ್ಯಾಟಿಂಗ್.. ಹೇಗಿರುತ್ತೆ ಫೈಟ್?  

ಭಾರತ ಮತ್ತು ಇಂಗ್ಲೆಂಡ್​ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್​ ಸರಣಿ ನಾಳೆಯಿಂದ ಆರಂಭವಾಗ್ಲಿದೆ. ಇದರೊಂದಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ 2025-2027ರ ಸೈಕರ್ ಕೂಡ ಸ್ಟಾರ್ಟ್ ಆಗುತ್ತೆ. ಭಾರತದ ಪಾಲಿಗೆ ಈ ಸರಣಿ ಅತ್ಯಂತ ಮಹತ್ವ ಪಡೆದುಕೊಂಡಿದೆ. 2007ರ ಬಳಿಕ ಟೀಮ್​ ಇಂಡಿಯಾ ಇಂಗ್ಲೆಂಡ್​ ನೆಲದಲ್ಲಿ ಒಮ್ಮೆಯೂ ಟೆಸ್ಟ್​ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಈ ಹಿಂದೆ 1971ರಲ್ಲಿ ಅಜಿತ್​ ವಾಡೇಕರ್, 1986 ಕಪಿಲ್​ ದೇವ್​ ಮತ್ತು 2007ರಲ್ಲಿ ರಾಹುಲ್​ ದ್ರಾವಿಡ್ ಅವರ ನಾಯಕತ್ವದಲ್ಲಿ ಮಾತ್ರ ಭಾರತ ತಂಡ ಇಂಗ್ಲೆಂಡ್​ ನೆಲದಲ್ಲಿ ಸರಣಿ ಗೆದ್ದುಕೊಂಡಿತ್ತು. ಈ ಬಾರಿ ಭಾರತ ಗೆದ್ದರೇ ಬರೋಬ್ಬರಿ 18 ವರ್ಷಗಳ ಬಳಿಕ ಸರಣಿ ಗೆದ್ದ ದಾಖಲೆ ಬರೆಯಲಿದೆ. ಆದ್ರೆ ಸರಣಿ ಆರಂಭಕ್ಕೂ ಮುನ್ನವೇ ಇಂಜುರಿ ಆಘಾತ ತಟ್ಟಿದೆ.

ಇದನ್ನೂ ಓದಿ : 10 ಅಲ್ಲ 11 ದಿನಗಳ ಕಾಲ ಮೈಸೂರು ದಸರಾ – 410 ವರ್ಷದಲ್ಲಿ ಇದೇ ಮೊದಲ ಬಾರಿಗೆ 11ದಿನ ದಸರಾ

ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಕರುಣ್ ನಾಯರ್ ಮೇಲೆ ಸಾಕಷ್ಟು ಹೋಪ್ಸ್ ಇಟ್ಟುಕೊಳ್ಳಲಾಗಿದೆ. ಬರೋಬ್ಬರಿ 8 ವರ್ಷಗಳ ಬಳಿಕ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದು ಅವ್ರ ಪರ್ಫಾಮೆನ್ಸ್ ಮೇಲೆ ಎಲ್ಲರ ಕಣ್ಣಿದೆ. ಅವ್ರ ಫಾರ್ಮ್ ನೋಡಿದ್ರೆ ಪ್ಲೇಯಿಂಗ್ 11ನಲ್ಲಿ ಆಯ್ಕೆಯಾಗೋದು ಗ್ಯಾರಂಟಿ ಎನ್ನುವಂತಿದೆ. ಆದ್ರೆ ಪಂದ್ಯದ ಒಂದು ದಿನಕ್ಕೂ ಮುನ್ನ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಚೆಂಡು ತಗುಲಿ ಗಾಯಗೊಂಡಿದ್ದಾರೆ. ಪ್ರಸಿದ್ಧ್ ಕೃಷ್ಣ ಅವರ ಚೆಂಡು ನಾಯರ್ ಅವರ ಹೊಟ್ಟೆಗೆ ತಗುಲಿದ್ದು ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ. ಕರುಣ್ ನಾಯರ್ 2017 ರ ನಂತರ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಆಡಲಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ತಂಡದಲ್ಲಿ ಸೇರಿಸಲಾಗಿದೆ. ಬಟ್ ಈಗ ಇಂಜುರಿಯಾಗಿರೋದು ಆಡ್ತಾರೋ ಇಲ್ವೋ ಅನ್ನೋ ಆತಂಕ ಮೂಡಿಸಿದೆ.

ಭಾರತದ ಪ್ಲೇಯಿಂಗ್ 11 ಇನ್ನೂ ಫೈನಲ್ ಆಗದೇ ಇದ್ರೂ ಆಲ್ರೆಡಿ ಇಂಗ್ಲೆಂಡ್ ಎಲ್ಲವನ್ನೂ ಫೈನಲ್ ಮಾಡಿಯಾಗಿದೆ. ಭಾರತದ ವಿರುದ್ಧ ಮತ್ತೊಮ್ಮೆ ಪಾರುಪತ್ಯ ಮೆರೆಯೋ ನಿರೀಕ್ಷೆಯಲ್ಲಿರೋ ಇಂಗ್ಲೆಂಡ್ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಹೆಸರಿಸಿದೆ.

ಇಂಗ್ಲೆಂಡ್ ಪಡೆ ರೆಡಿ!

ಕ್ರಾಲಿ ಬಲಗೈ ದಾಂಡಿಗನಾದರೆ, ಡಕೆಟ್ ಎಡಗೈ ಬ್ಯಾಟರ್

ಇಬ್ಬರು 5.56 ಸರಾಸರಿಯಲ್ಲಿ ರನ್ ಪೇರಿಸಿದ ದಾಖಲೆ

ಕ್ರಾಲಿ & ಡಕೆಟ್ ಪಾಟ್ನರ್​ಶಿಪ್ ಬ್ರೇಕ್ ಮಾಡೋದೇ ಸವಾಲು

ಒಲೀ ಪೋಪ್ ಹಾಗೂ ಜೋ ರೂಟ್ ಬ್ಯಾಟಿಂಗ್ ಗೆ ಬರ್ತಾರೆ

ಹ್ಯಾರಿ ಬ್ರೂಕ್ 25 ಟೆಸ್ಟ್ ಪಂದ್ಯ, 2631 ಎಸೆತಗಳಲ್ಲಿ 2339 ರನ್

ಪ್ರತಿ ಪಂದ್ಯದಲ್ಲಿ 88.91 ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದಾರೆ

ಬೆನ್ ಸ್ಟೋಕ್ಸ್ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವ ದಾಂಡಿಗ

ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಸ್ಮಿತ್ ಸಿಡಿಲಬ್ಬರದ ಬ್ಯಾಟಿಂಗ್

ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಶ್ ಟಂಗ್ ಹಾಗೂ ಶೋಯೆಬ್ ಬಶೀರ್

ಇನ್ನು ಮೊದಲ ಟೆಸ್ಟ್ ಪಂದ್ಯ ನಡೆಯಲಿರುವುದು ಬೌಲಿಂಗ್ ಪಿಚ್​ನಲ್ಲಿ. ಅಂದರೆ ಹೆಡಿಂಗ್ಲೆಯಲ್ಲಿ ಬೌಲರ್​ಗಳಿಗೆ ಹೆಚ್ಚು ನೆರವಾಗುವಂತೆ ಪಿಚ್ ನಿರ್ಮಿಸಲಾಗಿದೆ. ಅಂದ್ರೆ ಇಂಗ್ಲೆಂಡ್ ಸ್ಫೋಟಕ ದಾಂಡಿಗರಿಗೆ ಒತ್ತು ನೀಡಿರೋ ಮಾಹಿತಿ ಇದೆ. ಇದಕ್ಕಾಗಿಯೇ ಟಾಪ್ ಆರ್ಡರ್, ಮಿಡಲ್ ಆರ್ಡರ್ ಹಾಗೇ ಕೆಳ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟರ್​ಗಳನ್ನೇ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಇಂಗ್ಲೆಂಡ್ ಕಳೆದ 18 ವರ್ಷಗಳಿಂದ ಭಾರತದ ವಿರುದ್ಧದ ತಮ್ಮ ನಾಡಲ್ಲಿ ಸೋತಿಲ್ಲವಾದ್ರೂ ಈ ಸಲ ಜಸ್ಪ್ರೀತ್ ಬುಮ್ರಾ ಭಯ ಕಾಡ್ತಿದೆ. ಈ ಭಯಕ್ಕೆ ಹೊಸ ಅಸ್ತ್ರ ಹೂಡುತ್ತಿದ್ದಾರೆ. ಅದುವೇ ಬಾಝ್ ಬಾಲ್ ರಣತಂತ್ರ.

 ಬುಮ್ರಾ ವಿರುದ್ಧ ಬಾಝ್ ಬಾಲ್ ಅಸ್ತ್ರ!

ಟೆಸ್ಟ್ ಕ್ರಿಕೆಟ್‌ ನಲ್ಲಿಯೂ ಟಿ20 ಶೈಲಿಯಲ್ಲಿ ಸ್ಫೋಟಕ ಬ್ಯಾಟಿಂಗ್

ಎದುರಾಳಿ ಪಡೆಯನ್ನ ಒತ್ತಡಕ್ಕೆ ಸಿಲುಕಿಸೋದೇ ಬಾಝ್ ಬಾಲ್

ಇಂಗ್ಲೆಂಡ್ ಆಟಗಾರರು ಟಿ-20 ಶೈಲಿಯಲ್ಲೇ ವೇಗವಾಗಿ ರನ್ಸ್ ಕಲೆ

ಬೌಲರ್ ಗಳು ಸೇರಿದಂತೆ ಎಲ್ಲಾ ಬ್ಯಾಟರ್ಸ್ ಅಟ್ಯಾಕಿಂಗ್ ಮೋಡ್

ಇಂಗ್ಲೆಂಡ್ ನಲ್ಲಿ ವರ್ಕೌಟ್ ಆಗ್ತಿದ್ದು ಬೇರೆ ದೇಶಗಳಲ್ಲಿ ಪ್ಲಸ್ & ಮೈನಸ್

2022ರ ಜೂನ್‌ನಿಂದ ಸ್ವದೇಶದಲ್ಲಿ ಇಂಗ್ಲೆಂಡ್‌ ಗೆಲುವಿನ ಶೇ.75ರಷ್ಟಿದೆ

ಅಗ್ರ-7 ಬ್ಯಾಟರ್‌ಗಳ ಪೈಕಿ ಇಂಗ್ಲೆಂಡ್‌ನ ಬ್ಯಾಟರ್‌ಗಳು 73.90 ಸ್ಟ್ರೈಕ್‌ ರೇಟ್

ಇಂಗ್ಲೆಂಡ್‌ನ ನಂತರ ಭಾರತವು (60.88)ಸ್ಟ್ರೈಕ್‌ ರೇಟ್‌ ನಲ್ಲಿ 2ನೇ ಸ್ಥಾನ

Shantha Kumari