ನೂತನ ಕೋಚ್ ಹುಡುಕಾಟದಲ್ಲಿ ಬಿಸಿಸಿಐ – ಈ ಮೂವರ ಪೈಕಿ ಯಾರಿಗೆ ಒಲಿಯುತ್ತೆ ಲಕ್?
ಟಿ-20 ವಿಶ್ವಕಪ್ಗೆ ಜಸ್ಟ್ 20 ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಟೀಮ್ ಇಂಡಿಯಾಗೆ ಹೊಸ ಕೋಚ್ ನೇಮಕದ ಚರ್ಚೆ ಜೋರಾಗಿದೆ. ರಾಹುಲ್ ದ್ರಾವಿಡ್ ಪಾಲಿಗೆ ಇದೇ ಟಿ20 ವಿಶ್ವಕಪ್ ಕೊನೆ ಆಗಲಿದೆಯಾ ಎಂಬ ಅನುಮಾನ ಹುಟ್ಟಿಹಾಕಿದೆ.
ದ್ರಾವಿಡ್ ಇನ್ನು 2 ತಿಂಗಳಲ್ಲಿ ಕೋಚ್ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ಬಿಸಿಸಿಐ ಬಾಸ್ಗಳು ನೂತನ ಕೋಚ್ ಹುಡುಕಾಟದಲ್ಲಿದ್ದಾರೆ. ಅಲ್ಲದೇ ಟೀಮ್ ಇಂಡಿಯಾದ ಕೋಚ್ ಯಾರ್ ಆಗ್ತಾರೆ ಎಂಬ ಚರ್ಚೆ ಜೋರಾಗಿದೆ. ವಿವಿಎಸ್ ಲಕ್ಷಣ್, ಆಶಿಶ್ ನೆಹ್ರಾ, ರಿಕಿ ಪಾಂಟಿಂಗ್ ಹೆಸರುಗಳು ಓಡಾಡ್ತಿವೆ.
ಇದನ್ನೂ ಓದಿ: ಧೋನಿ LOSS.. ಕೊಹ್ಲಿಗೆ LUCK – CSK ಸೋತಿದ್ದಕ್ಕೆ RCBಗೆ ಪ್ಲೇಆಫ್
ದ್ರಾವಿಡ್ ಭವಿಷ್ಯದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ ಶಾ, ಮಾತನಾಡಿದ್ದಾರೆ. ಶ್ರೀಘ್ರವೇ ನೂತನ ಹೆಡ್ ಕೋಚ್ ಹುದ್ದೆಯ ನೇಮಕ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸುತ್ತೇವೆ. ರಾಹುಲ್ ದ್ರಾವಿಡ್ ಅವಧಿ ಮುಕ್ತಾಯವಾಗುತ್ತಿದೆ. ದ್ರಾವಿಡ್ ಮುಂದುವರಿಯಲು ಬಯಸುವುದಾದರೆ, ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತೆ. ನಾವು ಮುಂದಿನ 3 ವರ್ಷಗಳ ಅವಧಿಗೆ ಕೋಚ್ ನೇಮಿಸುವ ಬಗ್ಗೆ ಎದುರು ನೋಡುತ್ತಿದ್ದೇವೆ ಅಂತ ಹೇಳಿದ್ದಾರೆ.
ನವೆಂಬರ್ 3,2021. ದಿ ವಾಲ್ ರಾಹುಲ್ ದ್ರಾವಿಡ್, ಹೆಡ್ ಕೋಚ್ ಆಗಿ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದ ದಿನ. ದ್ರಾವಿಡ್ ದ್ರೋಣಾಚಾರ್ಯ ಹುದ್ದೆ ಏರಿ ಬರೋಬ್ಬರಿ, 2 ವರ್ಷ 6 ತಿಂಗಳು ಕಳೀತು. ಈ 2 ವರ್ಷ 6 ತಿಂಗಳಲ್ಲಿ ಸೋಲು, ಗೆಲುವು, ಟೀಕೆಗಳನ್ನ ಎದುರಿಸಿರುವ ದ್ರಾವಿಡ್, ಇನ್ನು 2 ತಿಂಗಳಲ್ಲಿ ಕೋಚ್ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ಬಿಸಿಸಿಐ ಬಾಸ್ಗಳು ನೂತನ ಕೋಚ್ ಹುಡುಕಾಟದಲ್ಲಿದ್ದಾರೆ. ಹೊಸ ಕೋಚ್ ಯಾರಾಗಲಿದ್ದಾರೆ ಅನ್ನೋ ಪ್ರಶ್ನೆಗೆ ಟಿ20 ವಿಶ್ವಕಪ್ ಬಳಿಕವಷ್ಟೇ ಉತ್ತರ ಸಿಗಲಿದೆ.