ಕರುಣ್ ನಾಯರ್ ವೃತ್ತಿ ಜೀವನ ಅವರಾಗಿ ಹಾಳು ಮಾಡಿಕೊಂಡ್ರಾ?- ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ ಯಾಕೆ ಗೊತ್ತಾ?

ಕರುಣ್ ನಾಯರ್ ವೃತ್ತಿ ಜೀವನ ಅವರಾಗಿ ಹಾಳು ಮಾಡಿಕೊಂಡ್ರಾ?- ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ ಯಾಕೆ ಗೊತ್ತಾ?

ಕರುಣ್ ನಾಯರ್.. ಡಿಯರ್ ಕ್ರಿಕೆಟ್ ನನಗೊಂದು ಚಾನ್ಸ್ ಕೊಡು ಅಂತಾ ಕೇಳಿಕೊಂಡಿದ್ದು, ನಂತರ ಅವರಿಗೆ ಚಾನ್ಸ್ ಸಿಕ್ಕಿದ್ದು ಎಲ್ಲವೂ ಗೊತ್ತಿರುವಂತದ್ದೇ. ಆದರೆ, ಕ್ರಿಕೆಟ್ ಅವಕಾಶ ಕೊಟ್ಟರೂ ಕರುಣ್ ನಾಯರ್ ಎಡವಿದ್ದರು. ಇದರ ಪರಿಣಾಮ ಲಕ್ನೋದಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ ನಡೆಯಲಿರುವ ಪಂದ್ಯಗಳಿಗೆ ಭಾರತ ಎ ತಂಡದಲ್ಲಿ ಕರುಣ್ ನಾಯರ್ ಗೆ ಸ್ಥಾನ ಸಿಕ್ಕಿಲ್ಲ.

ಇದನ್ನೂ ಓದಿ:8 ತಂಡ.. ಕಪ್ ಗೆದ್ದಿದ್ದೇ 3 ಟೀಂ – ಭಾರತಕ್ಕೆ ಲಂಕನ್ನರೇ ವಿಲನ್!

ಕರುಣ್ ನಾಯರ್‌ಗೆ ಈಗ 33 ವರ್ಷ. ಈಗ ಚಾನ್ಸ್ ಸಿಗದೇ ಇದ್ದರೆ ಇನ್ನು ಮುಂದೆ ಅವಕಾಶಗಳು ಸಿಗುವ ಗ್ಯಾರಂಟಿಯೂ ಇಲ್ಲ. ಹೀಗಾಗಿ ಕರುಣ್ ನಾಯರ್ ಕ್ರಿಕೆಟ್ ವೃತ್ತಿಜೀವನದ ಅಂತ್ಯ ಸಮೀಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಲಕ್ನೋದಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ ನಡೆಯಲಿರುವ ಎರಡು ಅನಧಿಕೃತ ನಾಲ್ಕು ದಿನಗಳ ಪಂದ್ಯಗಳಿಗೆ ಭಾರತ ಎ ತಂಡವನ್ನು ಘೋಷಿಸಲಾಗಿದೆ. ಈ ತಂಡದಲ್ಲಿ ಕರುಣ್ ನಾಯರ್ ಅವರ ಹೆಸರಿಲ್ಲ. ಒಂದು ಕಾಲದಲ್ಲಿ ಅವರನ್ನು ದೀರ್ಘ ಸ್ವರೂಪಕ್ಕೆ ಉತ್ತಮ ಆಟಗಾರ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಆಯ್ಕೆದಾರರು ಅವರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ. ಇತ್ತೀಚೆಗಷ್ಟೆ ಇಂಗ್ಲೆಂಡ್‌ನಲ್ಲಿ ನಡೆದ ಆಂಡರ್ಸನ್ ತೆಂಡೂಲ್ಕರ್ ಟ್ರೋಫಿಯಲ್ಲಿ ಕರುಣ್ ನಾಯರ್ ತಂಡಕ್ಕೆ ಮರಳಿದರು. ಸುಮಾರು 9 ವರ್ಷಗಳ ನಂತರ ಟೀಮ್ ಇಂಡಿಯಾಕ್ಕೆ ಕರುಣ್ ವಾಪಸ್ ಬಂದಿದ್ದರು. 6 ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ 50 ಕ್ಕೂ ಹೆಚ್ಚು ರನ್ ಗಳಿಸಿದ್ದು ಬಿಟ್ಟರೆ ಕೊಟ್ಟ ಅವಕಾಶಕ್ಕೆ ತಕ್ಕ ಪ್ರಯತ್ನ ಕಂಡು ಬಂದಿರಲಿಲ್ಲ. ಈ ರೀತಿಯಾಗಿ ಅವರು ತಮ್ಮ ಟೆಸ್ಟ್ ವೃತ್ತಿಜೀವನವನ್ನು ಪುನರಾರಂಭಿಸುವ ಅವಕಾಶ ಕಳೆದುಕೊಂಡಿದ್ದಂತೂ ಹೌದು.

ಓವಲ್‌ನಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ನಾಯರ್ ಬೆರಳಿಗೆ ಗಾಯವಾಗಿತ್ತು ಎಂಬುದನ್ನು ಗಮನಿಸಬೇಕಾದ ಸಂಗತಿ. ಈ ಗಾಯದಿಂದಾಗಿ, ಅವರು ಮಹಾರಾಜ ಟಿ 20 ಲೀಗ್‌ನಲ್ಲಿಯೂ ಭಾಗವಹಿಸಲಿಲ್ಲ. ಭಾರತ ಎ ತಂಡದಲ್ಲಿ ಆಯ್ಕೆಯಾಗದಿರಲು ಅವರ ಗಾಯವೇ ಕಾರಣವೇ ಎಂಬ ಅನುಮಾನವೂ ಇದೆ. ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ಅವರ ಗಾಯದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ. ಅವರ ಸ್ಥಾನದಲ್ಲಿ, ಆಯ್ಕೆದಾರರು ಭಾರತ ಎ ತಂಡದಲ್ಲಿ ಹೊಸ ಮತ್ತು ಕೆಲವು ಅನುಭವಿ ಆಟಗಾರರಿಗೆ ಅವಕಾಶ ನೀಡಿದ್ದಾರೆ.

Sulekha