ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಲಿಯೋನೆಲ್ ಮೆಸ್ಸಿ ಯುಗ ಅಂತ್ಯ!- 21 ವರ್ಷಗಳ ಆಟಕ್ಕೆ ಭಾವುಕ ವಿದಾಯ

ಫುಟ್ಬಾಲ್ ಮೈದಾನದಲ್ಲಿ ಒಂದು ಯುಗ ಮುಗಿದಿದೆ… ಗೋಲುಗಳ ಸರದಾರ, ದಾಖಲೆಗಳ ರಾಜ, ಅರ್ಜೆಂಟೀನಾದ ಹೆಮ್ಮೆಯ ಆಟಗಾರ ಲಿಯೋನೆಲ್ ಮೆಸ್ಸಿ ತಮ್ಮ 21 ವರ್ಷಗಳ ಭವ್ಯ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಭಾವುಕ ತೆರೆ ಎಳೆದಿದ್ದಾರೆ.
ಬ್ಯೂನಸ್ ಐರಿಸ್ನ ಐತಿಹಾಸಿಕ ಎಸ್ಟಾಡಿಯೊ ಮೊನುಮೆಂಟಲ್ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸಾಗರವೇ ಸೇರಿತ್ತು. ಬೆನಿನ್ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ 3-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತು. ಆದರೆ ಈ ಪಂದ್ಯ ಕೇವಲ ಗೆಲುವಿನ ಪಂದ್ಯವಾಗಿರಲಿಲ್ಲ. ಇದು ವಿಶ್ವ ಫುಟ್ಬಾಲ್ನ ದಿಗ್ಗಜ ಮೆಸ್ಸಿ ಅವರ ಅಂತಾರಾಷ್ಟ್ರೀಯ ವಿದಾಯದ ಕ್ಷಣವಾಗಿತ್ತು.
ಇದನ್ನೂ ಓದಿ: ಹೆಡ್ ಕೋಚ್ ಆಗಿ ದಾದಾ ಬಂದಾಯ್ತು… ಕಪ್ ಗೆಲ್ಲುತ್ತಾ ಡೆಲ್ಲಿ?
21 ವರ್ಷಗಳ ಕಾಲ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ ಮೆಸ್ಸಿ, ವಿಶ್ವಕಪ್, ಕೋಪಾ ಅಮೆರಿಕಾ ಸೇರಿದಂತೆ ಹಲವು ಮಹತ್ವದ ಟ್ರೋಫಿಗಳನ್ನು ದೇಶಕ್ಕೆ ತಂದುಕೊಟ್ಟಿದ್ದಾರೆ. ವೈಯಕ್ತಿಕವಾಗಿ ಅಸಂಖ್ಯಾತ ದಾಖಲೆಗಳನ್ನು ನಿರ್ಮಿಸಿರುವ ಮೆಸ್ಸಿ, ಫುಟ್ಬಾಲ್ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.
ಮೆಸ್ಸಿ ಮೈದಾನದಿಂದ ದೂರ ಸರಿದರೂ, ಅವರ ಎಡಗಾಲಿನ ಅದ್ಭುತ ಡ್ರಿಬ್ಲಿಂಗ್, ನಿಖರ ಪಾಸ್, ಅದ್ಭುತ ಗೋಲುಗಳು ಮತ್ತು ಗೆಲುವಿನ ಹಸಿವು ಎಂದಿಗೂ ಮರೆಯಾಗುವುದಿಲ್ಲ. ಅರ್ಜೆಂಟೀನಾ ಜೆರ್ಸಿಯಲ್ಲಿ ಕೊನೆಯ ಬಾರಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡ ಮೆಸ್ಸಿ, ಭಾವುಕ ವಿದಾಯದೊಂದಿಗೆ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ.
ಒಬ್ಬ ಆಟಗಾರನ ವಿದಾಯ ಮಾತ್ರವಲ್ಲ… ಇದು ಫುಟ್ಬಾಲ್ನ ಒಂದು ಸುವರ್ಣ ಯುಗಕ್ಕೆ ತೆರೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ನೋಡಿರಿ

