ಇಂತಹ ವ್ಯಕ್ತಿಗಳೊಂದಿಗೆ ಕೆಲಸ ಮಾಡೋದು ಕಷ್ಟ! – ವರದಿಯಿಂದ ಬಯಲಾಯ್ತು ಸತ್ಯ!
ಈಗಾಗಲೇ Gen Z ಪೀಳಿಗೆ ಉದ್ಯೋಗಕ್ಕೆ ಕಾಲಿಟ್ಟಾಗಿದೆ. ಸಾಮಾನ್ಯವಾಗಿ 1997 ಮತ್ತು ನಂತರ ಹುಟ್ಟಿದವರನ್ನ ಜೆನ್ ಝೆಡ್ ಗೆ ಸೇರಿದವರೆಂದು ಕರೆಯಲಾಗುತ್ತಿದೆ. ಅಷ್ಟೇ ಅಲ್ಲದೇ ಇವರು ತಂತ್ರಜ್ಞಾನದ ಕ್ರಾಂತಿಗೆ ನೇರವಾಗಿ ಸಾಕ್ಷಿಯಾದವರು ಎಂದು ಕರೆಯಲಾಗುತ್ತದೆ. ಹಾಗಾಗಿ ಇವರು 1997 ರ ಹಿಂದಿನ ಪೀಳಿಗೆಗೆ ತೀರಾ ಭಿನ್ನವಾಗಿ ಕಂಡುಬರುತ್ತಾರೆ. COVID-19 ಮತ್ತು ಆನ್ ಲೈನ್ ಶಿಕ್ಷಣದ ಪರಿಣಾಮವಾಗಿ, Gen Z-ers ಉದ್ಯೋಗ ಪ್ರವೇಶವೂ ಅಷ್ಟೊಂದು ಸುಲಭವಾಗಿರಲಿಲ್ಲ. ಇನ್ನೂ ಇವರ ಉದ್ಯೋಗಶೀಲತೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲತೆ ಹಳೆ ತಲೆಮಾರಿನವರಲ್ಲಿದೆ. ಅಮೆರಿಕದ ರೆಸ್ಯೂಮ್‌ಬಿಲ್ಡರ್ ಸಂಸ್ಥೆಯು ಈ ಕುರಿತಾಗಿ ಒಂದು ಸಮೀಕ್ಷೆ ನಡೆಸಿದ್ದು Gen Z-ers ಕೆಲಸದ ಕುರಿತಾಗಿ ಆತಂಕಕಾರಿ ವಿಚಾರವನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ: ಒಂದೇ ತಿಂಗಳಲ್ಲಿ 2 ಚೀತಾಗಳು ಸಾವು – ಕೂನೋ ಉದ್ಯಾನವನದಿಂದ ಬೇರೆಡೆಗೆ ಶಿಫ್ಟ್ ಮಾಡ್ತಾರಾ?
ಹೌದು, Gen Z ಪೀಳಿಗೆಯವರೊಂದಿಗೆ ಕೆಲಸ ಮಾಡೋದು ಅತ್ಯಂತ ಕಷ್ಟಕರವಂತೆ. ಅಮೆರಿಕದ ರೆಸ್ಯೂಮ್‌ಬಿಲ್ಡರ್ ಸಂಸ್ಥೆಯು 1344 ಜನರೊಂದಿಗೆ 1997 ರ ನಂತರ ಜನಿಸಿದವರ ಜೊತೆ ಕೆಲಸ ಮಾಡಿದ ಅನುಭವವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಆ ವರದಿಯ ಪ್ರಕಾರ ಆಶ್ಚರ್ಯವೆಂಬಂತೆ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 49 ರಷ್ಟು ಜನರು ಹೆಚ್ಚಿನ ಸಮಯ Gen Z ಪೀಳಿಗೆಯವರೊಂದಿಗೆ ಕೆಲಸ ಮಾಡೋದು ಕಷ್ಟಕರ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಶೇಕಡಾ 79 ರಷ್ಟು ಜನರು ಅವರನ್ನು ಕೆಲಸದ ಸ್ಥಳದಲ್ಲಿ ಹೊಂದಲು ಅತ್ಯಂತ ಕಷ್ಟಕರವಾದ ಪೀಳಿಗೆ ಎಂದು ಕರೆಯುತ್ತಾರೆ.
ಹೆಚ್ಚಿನ ಮ್ಯಾನೇಜರ್‌ಗಳು ಜೆನ್ ಝಡ್ ಕೆಲಸಗಾರರಲ್ಲಿ ಅರ್ಹತೆ, ಪ್ರೇರಣೆಯ ಕೊರತೆ, ಪ್ರಯತ್ನ ಮತ್ತು ಉತ್ಪಾದಕತೆಯ ಕೊರತೆಯು ಕಂಡು ಬರುತ್ತಿದೆ ಎಂದು ಹೇಳುತ್ತಾರೆ. Gen Zs ಅವರು ಶಿಸ್ತಿನ ಕೊರತೆಯಿಂದ ಬಳಲುತ್ತಿದ್ದಾರೆ ಮತ್ತು ಅವರು ನಿಮಗೆ ಸವಾಲು ಹಾಕಲು ಇಷ್ಟಪಡುತ್ತಾರೆ. ಅವರು ನಿಮಗಿಂತ ಉತ್ತಮರು, ನಿಮಗಿಂತ ಬುದ್ಧಿವಂತರು, ನಿಮಗಿಂತ ಹೆಚ್ಚು ಸಮರ್ಥರು ಎಂದು ಭಾವಿಸುತ್ತಾರೆ ಮತ್ತು ಅವರು ನಿಮ್ಮ ಮುಖಕ್ಕೆ ನೇರವಾಗಿ ಹೇಳುತ್ತಾರೆ ಎನ್ನುವ ಅಭಿಪ್ರಾಯಗಳು ಸಮೀಕ್ಷೆಗೆ ಪ್ರತಿಕ್ರಿಯಿಸಿದವರಿಂದ ವ್ಯಕ್ತವಾಗಿದೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಜೆನ್ ಝಡ್ ಕೆಲಸಗಾರರು ಉದ್ಯೋಗವನ್ನು ತೆಗೆದುಕೊಂಡಿದ್ದರಿಂದ ಸಾಂಪ್ರದಾಯಿಕ ವೃತ್ತಿಪರ ಸೆಟಪ್‌ಗಳಿಗೆ ಹೊಂದಿಕೊಳ್ಳಲು ಅವರಿಗೆ ಮೂಲಭೂತ ಕೌಶಲ್ಯಗಳ ಕೊರತೆಯಿದೆ ಎಂದು ರೆಸ್ಯೂಮ್‌ಬಿಲ್ಡರ್ ಸಂಸ್ಥೆಯು ಹೇಳುತ್ತಿದೆ. Gen Z ಪೀಳಿಗೆ ಈಗಷ್ಟೇ ಕೆಲಸ ಪ್ರಾರಂಭಿಸುತ್ತಿರುವುದರಿಂದ, ಉದ್ಯೋಗದಾತರರಿಂದ ಇಂತಹ ಋಣಾತ್ಮಕ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದರಿಂದ ಅವರ ವೃತ್ತಿಜೀವನಕ್ಕೆ ತೊಂದರೆಯಾಗಲಿದೆ ಅಂತಾ ವರದಿಯಲ್ಲಿ ಬಹಿರಂಗವಾಗಿದೆ.