ಗೂಗಲ್ ‘ವಜಾ’ಸ್ತ್ರದ ವಿರುದ್ಧ ರೊಚ್ಚಿಗೆದ್ದ ಸಿಬ್ಬಂದಿ – ಸಾವಿರಾರು ಜನ ಬೀದಿಗಿಳಿದು ಹೋರಾಟ!
10 ಸಾವಿರಕ್ಕೂ ಹೆಚ್ಚು ನೌಕರರನ್ನ ಏಕಕಾಲಕ್ಕೆ ವಜಾಗೊಳಿಸಿರುವ ಟೆಕ್ ದೈತ್ಯ ಸಂಸ್ಥೆ ಗೂಗಲ್ ವಿರುದ್ಧ ಅಮೆರಿಕದಲ್ಲಿ ಆಕ್ರೋಶ ಭುಗಿಲೆದ್ದಿದೆ. ನೌಕರರ ವಜಾ ಮತ್ತು ಕಡಿಮೆ ವೇತನ ಖಂಡಿಸಿ ರೊಚ್ಚಿಗೆದ್ದಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ.
ಇದನ್ನೂ ಓದಿ : ಕಾರಿಗೆ ಡಿಕ್ಕಿಯಾದ ನಾಯಿ – 70 ಕಿ.ಮೀ ಪ್ರಯಾಣಿಸಿದ ಬಳಿಕ ಬಂಪರ್ ನೊಳಗೆ ಪ್ರತ್ಯಕ್ಷ!
ಹೌದು. ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾದ ಕೇಂದ್ರ ಕಚೇರಿಗಳ ಮುಂದೆ ಱಲಿ ನಡೆಸಿದ್ದಾರೆ. ಹಾಗೇ ನ್ಯೂಯಾರ್ಕ್ ಸಿಟಿಯ ಕಾರ್ಪೊರೇಟ್ ಕಚೇರಿಗಳ ಮುಂದೆಯೂ ಪ್ರತಿಭಟನೆ ನಡೆಸಿದ್ದಾರೆ. ಗೂಗಲ್ ಇತಿಹಾಸದಲ್ಲಿ ಬರೋಬ್ಬರಿ 12 ಸಾವಿರ ಸಿಬ್ಬಂದಿಯನ್ನ ಏಕಕಾಲಕ್ಕೆ ವಜಾಗೊಳಿಸಿದ್ದು ಇದೇ ಮೊದಲು. ಅಂದ್ರೆ ವಿಶ್ವದಾದ್ಯಂತ ತನ್ನ ನೌಕರರ ಪೈಕಿ 6 ಪರ್ಸೆಂಟ್ ನೌಕರರನ್ನ ಏಕಕಾಲಕ್ಕೆ ಕೈಬಿಟ್ಟಿದೆ. ಇದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.
ಗೂಗಲ್ ಸಂಸ್ಥೆಗೆ ಬಿಲಿಯನ್ಗಟ್ಟಲೆ ಪ್ರಾಫಿಟ್ ಇದ್ರೂ ಕೂಡ ನೌಕರರನ್ನ ವಜಾಗೊಳಿಸಿರೋ ಗೂಗಲ್ ವಿರುದ್ಧ ಸಿಬ್ಬಂದಿ ತಿರುಗಿ ಬಿದ್ದಿದ್ದು ಹೋರಾಟದ ಹಾದಿ ತುಳಿದಿದ್ದಾರೆ. ವಜಾಗೊಂಡ ಸಿಬ್ಬಂದಿ ಪ್ರತಿಭಟನೆಗೆ ಕುಟುಂಬಸ್ಥರು ಕೂಡ ಕೈ ಜೋಡಿಸಿದ್ದಾರೆ. ಗೂಗಲ್ ಬಳಿಕ ಮೈಕ್ರೋಸಾಫ್ಟ್ ಸಂಸ್ಥೆ, ಸೇಲ್ಸ್ ಫೋರ್ಸ್ ಹಾಗೂ ಅಮೇಜಾನ್ ಡಾಟ್ ಕಾಮ್ ಕೂಡ ನೌಕರರನ್ನ ವಜಾಗೊಳಿಸಿದೆ.
ಕೆಲವು ಉದ್ಯೋಗಿಗಳು ತಮ್ಮನ್ನು ವಜಾಗೊಳಿಸಿದ ಪ್ರಕ್ರಿಯೆಯೇ ಆಶ್ಚರ್ಯ ಉಂಟು ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ತಾವು ಉದ್ಯೋಗವನ್ನು ಕಳೆದುಕೊಳ್ಳುತ್ತೇವೆ ಎಂದುಕೊಂಡೇ ಇರಲಿಲ್ಲ. ಅಧಿಕೃತ ಖಾತೆಯನ್ನು ತೆರೆಯಲು ಸಾಧ್ಯವಾಗದ ಸಂದರ್ಭದಲ್ಲೇ ನನ್ನನ್ನು ಉದ್ಯೋಗದಿಂದ ವಜಾ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಉದ್ಯೋಗ ಕಳೆದುಕೊಂಡವರು ಮಾಹಿತಿ ನೀಡಿದ್ದರು.