ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದ ಡಿಕೆಶಿ – ಸಿದ್ದು ಆಶೀರ್ವಾದ, ಶಿವಕುಮಾರ್ ಕಣ್ಣೀರು

ಸಿಎಂ ಸಿದ್ದರಾಮಯ್ಯ ತಮ್ಮ ಹುದ್ದೆಯನ್ನು ತ್ಯಾಗ ಮಾಡಲು ಕ್ಷಣಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಸಿಎಂ ಮತ್ತು ಡಿಸಿಎಂ ನಡುವಿನ ಭಾವನಾತ್ಮಕ ಕ್ಷಣಗಳು ಕಂಡುಬಂದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಿಗೆ ಬಿದ್ದು ಡಿ.ಕೆ ಶಿವಕುಮಾರ್ ಆಶೀರ್ವಾದ ಪಡೆದಿದ್ದಾರೆ.
ಇದನ್ನೂ ಓದಿ: ವೈಭವ್ ಅಬ್ಬರಕ್ಕ ಹೈದರಾಬಾದ್ ತತ್ತರ- ರಾಜಸ್ಥಾನ್ ರಾಯಲ್ಸ್ ಗುಜರಾತ್ ಟೈಟಾನ್ಸ್ ಎದುರಾಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ. ಕರ್ನಾಟಕ ರಾಜಕಾರಣದಲ್ಲಿ ಒಂದು ದೊಡ್ಡ ಶಕ್ತಿ. ಕಾಂಗ್ರೆಸ್‌ನ ಗತ್ತು. ಇದೀಗ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರ ಪರ್ವ ಮುಗಿಯುತ್ತಿದೆ. ಹೈಕಮಾಂಡ್ ರಾಜೀನಾಮಗೆ ಸೂಚನೆ ನೀಡಿದ ಬೆನ್ನಲ್ಲೇ, ಡಿ.ಕೆ ಶಿವಕುಮಾರ್ ಸಿಎಂ ಪಟ್ಟಕ್ಕೇರಲು ಸಜ್ಜಾಗಿದ್ದಾರೆ. ಈ ಮಧ್ಯೆ, ಗುರುವಾರ ಬೆಳಗ್ಗೆ ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಸಿಎಂ ಮತ್ತು ಡಿಸಿಎಂ ನಡುವಿನ ಭಾವನಾತ್ಮಕ ಕ್ಷಣಗಳು ಕಂಡು ಬಂದಿವೆ.
ಬ್ರೇಕ್‌ಫಾಸ್ಟ್ ಮೀಟಿಂಗ್‌ಗೆ ಆಗಮಸಿದ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾ ಪಡೆದಿದ್ದಾರೆ. ಆಗ ಸಿಎಂ ಸಿದ್ದು ಡಿಕೆಶಿಯವರನ್ನು ಆತ್ಮೀಯವಾಗಿ ಆಲಂಗಿಸಿಕೊಂಡಿದ್ದಾರೆ. ಸಿಎಂ, ಡಿಸಿಎಂ ಅಪ್ಪುಗೆಯಲ್ಲಿ ನೂರಾರು ಭಾವನೆಗಳಿದ್ದವು. ಡಿಕೆಶಿ ಅವರಿಗೆ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅವರ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡಿತು. ಅಲ್ಲದೇ ರಾಜಕೀಯದಲ್ಲಿ ಹಲವೊಮ್ಮೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಿದ್ದರೂ, ಈ ಕ್ಷಣದಲ್ಲಿ ಇಬ್ಬರ ನಡುವಿನ ಮಾನವೀಯ ಬಾಂಧವ್ಯ ಸ್ಪಷ್ಟವಾಗಿ ಕಂಡಿತು. ಡಿಕೆಶಿ ಕಣ್ಣೀರು ಹಾಕಿದರು. ಆಗ ಸಿಎಂ ಸಿದ್ದು ಆಲಿಂಗನಮಾಡಿಕೊಂಡು ಡಿಕೆಶಿಯನ್ನು ಸಮಾಧಾನಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯಿಂದ ಪದತ್ಯಾಗ ಎಷ್ಟೊತ್ತಿಗೆ ಮಾಡಬಹುದು ಎಂಬ ಕುತೂಹಲವೂ ಇದೆ. ರಾಜ್ಯಪಾಲರು ಬೇರೆ ರಾಜ್ಯಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಸಿಎಂ ಗುರುವಾರವೇ ರಾಜೀನಾಮೆ ನೀಡುತ್ತಾರಾ ಇಲ್ಲವೋ ಅನ್ನೋ ಗೊಂದಲವೂ ಇತ್ತು. ಆದರೆ, ಸಿಎಂ ಕಚೇರಿ ಮೂಲಗಳ ಪ್ರಕಾರ ಗುರುವಾರ ಮಧ್ಯಾಹ್ನ 3 ಗಂಟೆಗೆ ಸಿದ್ದರಾಮಯ್ಯ ಅವರು ಪದತ್ಯಾಗ ಮಾಡಲಿದ್ದಾರೆ.

ನೋಡಿರಿ

