ದೊಡ್ಮನೆಯಲ್ಲಿ ಎಮರ್ಜೆನ್ಸಿ ಸೈರನ್ – ಆತಂಕದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು!
ಬಿಗ್ ಬಾಸ್ ಕನ್ನಡ ಸೀಸನ್ 11 ಭಾರಿ ಕುತೂಹಲ ಮೂಡಿಸಿದೆ. ಸ್ವರ್ಗ, ನರಕ ಕಾನ್ಸೆಪ್ಟ್ನಲ್ಲಿ ಈ ಸೀಸನ್ ಪ್ರಸಾರವಾಗ್ತಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಇದ್ದಕ್ಕಿದ್ದಂತೆ ಎಮರ್ಜೆನ್ಸಿ ಸೈರನ್ ಮೊಳಗಿದೆ. ಇದ್ರಿಂದಾಗಿ ಸ್ಪರ್ಧಿಗಳು ಭಯಗೊಂಡಿದ್ದಾರೆ.
ಇದನ್ನೂ ಓದಿ: ಅರಮನೆ ನಗರಿಯಲ್ಲಿ ಡಬಲ್ ಸಂಭ್ರಮ – ಯದುವೀರ್, ತ್ರಿಷಿಕಾ ದಂಪತಿಗೆ 2ನೇ ಮಗು ಜನನ
ಹೌದು, ದೊಡ್ಮನೆಯಲ್ಲಿ ಎಮರ್ಜನ್ಸಿ ಸೈರನ್ ಮೊಳಗಿದೆ. ಒಂದು ಕ್ಷಣಕ್ಕೆ ಎಲ್ಲಾ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದು, ಮನೆಯಲ್ಲಿ ಏನಾಗ್ತಿದೆ ಅನ್ನೋ ಆತಂಕದಿಂದ ಕಿರುಚಾಡಿದ್ದಾರೆ. ಇದರ ಪ್ರೊಮೋ ರಿಲೀಸ್ ಆಗಿದ್ದು, ಬಿಗ್ಬಾಸ್ ವೀಕ್ಷಕರ ಕುತೂಹಲವನ್ನು ಹೆಚ್ಚಾಗಿದೆ.
ಪ್ರೊಮೋದಲ್ಲಿ ಏನಿದೆ..?
ಬಿಗ್ಬಾಸ್ ಮನೆಯಲ್ಲಿ ಸೈರನ್ ಆಗಿದೆ. ಇದರಿಂದ ಸ್ಪರ್ಧಿಗಳು ಗಾಬರಿಯಾಗಿ ಓಡಿ ಬಂದು ಒಟ್ಟಿಗೆ ನಿಂತಿದ್ದಾರೆ. ‘ಏನೋ ಎಂಟ್ರಿ ಆಗ್ತಿದೆ.., ಕ್ರೇನ್ನಿಂದ ಏನೋ ತೆಗಿತಾ ಇದ್ದಾರೆ, ಏಯ್ ಯಾರು? ಏನಿದು’ ಅಂತಾ ಆತಂಕದಿಂದ ಮಾತನಾಡಿಕೊಂಡಿದ್ದಾರೆ. ಅಷ್ಟರಲ್ಲೇ ಬಿಗ್ಬಾಸ್ ಮನೆಗೆ ಎಂಟ್ರಿಯಾಗಿರುವ ಮುಸುಕುಧಾರಿಗಳು ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ಹಾನಿ ಮಾಡಿದ್ದಾರೆ. ನಂತರ ಸ್ವರ್ಗ-ನರಕ ಎಂದು ವಿಭಾಗ ಮಾಡಿದ್ದ ಗೇಟ್ಗಳನ್ನು ಬೇಧಿಸಿದ್ದಾರೆ. ನಂತರ ಬಿಗ್ಬಾಸ್ನ ಧ್ವನಿ ಮೊಳಗಿದೆ. 11ನೇ ವೇದಿಕೆಯಲ್ಲಿ ನೀವೆಲ್ಲರೂ ಎರಡು ವಾರ ಜೀವಿಸಿದ್ದೀರಿ. ಇಲ್ಲಿನ ಪ್ರತಿ ಕ್ಷಣವನ್ನೂ ಅನುಭವಿಸಿದ್ದೀರಿ ಎಂಬ ಧ್ವನಿ ಬಂದು ಹೋಗಿದೆ.
ಈ ಪ್ರೋಮೋ ನೊಡಿದ ಅಭಿಮಾನಿಗಳು ಸ್ವರ್ಗ-ನರಕ ಇಂದಿಗೆ ಕೊನೆಗೊಂಡಿದೆ ಎಂದು ಮಾತನಾಡಿಕೊಳ್ತಿದ್ದಾರೆ. ಸ್ವರ್ಗ-ನರಕ ಕಾನ್ಸೆಪ್ಟ್ಗೆ ಏನಾಯ್ತು? ಎರಡೇ ವಾರಕ್ಕೆ ನಿಂತು ಹೋಯ್ತಾ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಇಂದು ನಡೆಯುವ ಎಪಿಸೋಡ್ ತುಂಬಾ ಕುತೂಹಲಕಾರಿಯಾಗಿದ್ದು, ವೀಕ್ಷಕರು ಎಕ್ಸೈಟ್ ಆಗಿದ್ದಾರೆ.