ಬೃಹತ್ ರಾಕೆಟ್ ಉಡಾವಣೆಗೆ ಕ್ಷಣಗಣನೆ – ಇತಿಹಾಸ ನಿರ್ಮಿಸುತ್ತಾ ಎಲಾನ್ ಮಸ್ಕ್ ಕಂಪನಿ?
ಟೆಕ್ಸಾಸ್: ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿಯಿಂದ ನಿರ್ಮಿಸಲಾದ ಬೃಹತ್ ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ರಾಕೆಟ್ ಉಡಾವಣೆ ಯಶಸ್ವಿಯಾದ್ರೆ ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಉಡಾವಣೆಯಾದ ಬೃಹತ್ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಬಿಲಿಯನೇರ್ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿಯಿಂದ ಸ್ಟಾರ್ ಶಿಪ್ ಎಂಬ ಬೃಹತ್ ರಾಕೆಟ್ ಅನ್ನು ನಿರ್ಮಿಸಲಾಗಿದೆ. ಸೋಮವಾರ ಪರೀಕ್ಷಾರ್ಥವಾಗಿ ಟೆಕ್ಸಾಸ್‌ನ ಗಲ್ಫ್ ಕೋಸ್ಟ್ ನಿಂದ ರಾಕೆಟ್ ಉಡಾವಣೆಯಾಗಲಿದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚಂದ್ರನತ್ತ ಪ್ರಯಾಣಕ್ಕೆ ಸಜ್ಜಾದ ನಾಲ್ವರು ಗಗನಯಾನಿಗಳು – ಯಾರ್ಯಾರು & ಹೇಗಿದೆ ಸಿದ್ಧತೆ?
ಸ್ಟಾರ್ ಶಿಪ್ ರಾಕೆಟ್ ಸುಮಾರು 390 ಮಿಟರ್ ಎತ್ತರವಿದ್ದು, 30 ಮೀಟರ್ ಸುತ್ತಳತೆ ಹೊಂದಿದೆ. ಇದು ಅಮೆರಿಕದ ಲಿಬರ್ಟಿ ಆಫ್ ಸ್ಟ್ಯಾಚುಗಿಂತ ಎತ್ತರವಾಗಿದೆ. ಈ ರಾಕೆಟ್ ವ್ಯವಸ್ಥೆಯು ಭೂಮಿಯಿಂದ ಸುಮಾರು 65 ಕಿ.ಮೀ. ಮೇಲೆ ಹೋಗಿ ಬಳಿಕ ಸ್ಟಾರ್‌ಶಿಪ್‌ನಿಂದ ಪ್ರತ್ಯೇಕಗೊಂಡು ಭೂಮಿಗೆ ಹಿಂತಿರುಗಲಿದೆ. ಈ ಮೂಲಕ ಭವಿಷ್ಯದಲ್ಲಿ ಚಂದ್ರ ಹಾಗೂ ಮಂಗಳನಲ್ಲಿ ಮಾನವರನ್ನು ಕಳಿಸಲು ಈ ರಾಕೆಟ್ ಬಳಸಲು ಸ್ಪೇಸ್ ಎಕ್ಸ್ ಬೃಹತ್ ಯೋಜನೆ ಹಾಕಿಕೊಂಡಿದೆ ಎನ್ನಲಾಗುತ್ತಿದೆ.
ಸ್ಟಾರ್ ಶಿಪ್ ರಾಕೆಟ್ ಸಿಬ್ಬಂದಿಯಿಲ್ಲದೇ ಹಾರಾಟ ನಡೆಸಲಿದ್ದು, ಸಾಗರ ಪ್ರದೇಶದಲ್ಲಿ ಇದನ್ನು ಯಶಸ್ವಿಯಾಗಿ ಇಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅಲ್ಲದೇ ಈ ರಾಕೆಟ್ ಅನ್ನು ಸಂಪೂರ್ಣವಾಗಿ ಮರುಬಳಕೆ ಮಾಡಲು ಉದ್ದೇಶಿಸಲಾಗಿದ್ದು ಬಾಹ್ಯಾಕಾಶ ವಿಜ್ಞಾನಿಗಳು ಈ ಪ್ರಕ್ರಿಯೆ ಮೇಲೆ ತೀವ್ರ ಕಣ್ಣಿಟ್ಟಿದ್ದಾರೆ.
🚀Starship Orbital Flight Test Flight Path🚀
At T-3:30 until #Starship liftoff Monday 2023-04-17, here’s the #Starship Ship 24 (S24) flight path around the earth, and the path of Super Heavy Booster 7 (B7) doing a boost back burn into the Gulf of Mexico.pic.twitter.com/XEa5QDdMt0
— Starbase Watcher 🚀 (@watchstarbase) April 17, 2023