ಟ್ವಿಟರ್ ಸಾಮ್ರಾಜ್ಯಕ್ಕೆ ಹೊಸ ಸಿಇಒ! –  ನಾಯಿ ಫೋಟೋ ಹಾಕಿ ಮಸ್ಕ್ ಕಾಲೆಳೆದಿದ್ದು ಯಾರಿಗೆ?  

ಟ್ವಿಟರ್ ಸಾಮ್ರಾಜ್ಯಕ್ಕೆ ಹೊಸ ಸಿಇಒ! –  ನಾಯಿ ಫೋಟೋ ಹಾಕಿ ಮಸ್ಕ್ ಕಾಲೆಳೆದಿದ್ದು ಯಾರಿಗೆ?  

ವಾಷಿಂಗ್ಟನ್:‌ ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್ ಅನ್ನು ಖರೀದಿಸಿದಾಗಿನಿಂದಲೂ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಹಿಂಬಡ್ತಿ, ಬದಲಾವಣೆಗಳು, ಚಂದಾದಾರಿಕೆ ಶುಲ್ಕ ಬಳಿಕ ಮಸ್ಕ್ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿಯೂ ಹೇಳಿದ್ದರು. ಇದರ ಬೆನ್ನಲ್ಲೇ ಮಸ್ಕ್ ಇವರೇ ನಮ್ಮ ಸಂಸ್ಥೆಯ ಹೊಸ ಸಿಇಒ ಅಂತಾ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಿಬಿಸಿ ಸಂಸ್ಥೆಯ ದೆಹಲಿ, ಮುಂಬೈ ಕಚೇರಿಗಳಲ್ಲಿ ಐಟಿ ಪರಿಶೀಲನೆ – ರೇಡ್ ಹಿಂದಿದ್ಯಾ ಸಾಕ್ಷ್ಯಚಿತ್ರ ಸಿಟ್ಟು..!?

ಹೌದು, ಟ್ವಿಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ತನ್ನ ಅಧಿಪತ್ಯಕ್ಕೆ ಸಿಇಒ ಆಗಿ ಹೊಸಬರನ್ನು ನೇಮಿಸಿಕೊಂಡಿದ್ದಾರಂತೆ. ಆ ಸಿಇಒ ಬೇರೆ ಯಾರು ಅಲ್ಲ ಅವರ ಪ್ರೀತಿಯ ನಾಯಿ! ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಟ್ವಿಟರ್‌ ಸಂಸ್ಥೆಯ ಹೊಸ ಸಿಇಒ ಇವರೇ ಅಂತಾ ತಮ್ಮ ಮುದ್ದಿನ ನಾಯಿಯ ಫೋಟೋ ಹಾಕಿಕೊಂಡಿದ್ದಾರೆ.

ಶಿಬಾ ಇನು ತಳಿಯ ಫ್ಲೋಕಿ ಎನ್ನುವ ನಾಯಿಯನ್ನು ಮಸ್ಕ್ ತಮ್ಮ ಸಿಇಒ ಕುರ್ಚಿ ಮೇಲೆ ಕೂರಿಸಿದ್ದಾರೆ. ಅಲ್ಲದೇ ನಾಯಿಯ ಮುಂದೆ ಹಲವು ಫೈಲ್‌ ಗಳನ್ನು ಇಟ್ಟು, ಈತ ಹೊಸ ಸಿಇಒ, ಇತರ ವ್ಯಕ್ತಿಗಳಿಗಿಂತ ಈತನೇ ಬೆಸ್ಟ್‌ ಎಂದು ಟ್ವೀಟ್‌ ಮಾಡಿದ್ದಾರೆ.

ಸದ್ಯ ಮಸ್ಕ್‌ ಅವರ ಟ್ವೀಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಮಸ್ಕ್‌ ಟ್ವಿಟರ್‌ ಖರೀದಿಸಿದ ಬಳಿಕ ಭಾರತ ಮೂಲದ ಪರಾಗ್ ಅಗರವಾಲ್ ಅವರನ್ನು ಸಿಇಒ ಸ್ಥಾನದಿಂದ ವಜಾಗೊಳಿಸಿದ್ದರು. ಇದರೊಂದಿಗೆ ಅನೇಕ ಉದ್ಯೋಗಿಗಳನ್ನೂ ಕೆಲಸದಿಂದ ವಜಾಮಾಡಲಾಗಿತ್ತು.

suddiyaana