ಮಸ್ಕ್‌ ನಾಟೌಟ್‌ @ 12!! – ಡಜನ್‌ ಮಕ್ಕಳ ಅಪ್ಪನಾಗಿದ್ದೇಕೆ?
ಎಲಾನ್‌ ಗೆ ಎಷ್ಟು ಪತ್ನಿಯರು?

ಮಸ್ಕ್‌ ನಾಟೌಟ್‌ @ 12!! – ಡಜನ್‌ ಮಕ್ಕಳ ಅಪ್ಪನಾಗಿದ್ದೇಕೆ?ಎಲಾನ್‌ ಗೆ ಎಷ್ಟು ಪತ್ನಿಯರು?

ಪ್ರಪಂಚದಲ್ಲಿ ಜನಸಂಖ್ಯೆ ಕುಸಿತದ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರುವ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಮತ್ತೊಂದು ಮಗುವಿನ ತಂದೆಯಾಗಿದ್ದಾರೆ.. ಒಂದು ಡಜನ್‌ ಮಕ್ಕಳ ಅಪ್ಪನಾಗಿರುವ ಮಸ್ಕ್‌ ಇಷ್ಟೆಲ್ಲಾ ಮಕ್ಕಳನ್ನು ಪಡೆಯೋದಿಕ್ಕೆ ಜನಸಂಖ್ಯೆಯ ಕುಸಿತವನ್ನು ಬೊಟ್ಟು ಮಾಡುತ್ತಿದ್ದಾರೆ.. ಈ ಮೂಲಕ ಜಗತ್ತಿನ ಜನಸಂಖ್ಯೆಯ ಹೆಚ್ಚಳಕ್ಕೆ ತನ್ನ ಕೈಲಾದ ಕೊಡುಗೆಯನ್ನು ಮಸ್ಕ್‌ ನೀಡುತ್ತಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.. ಇಷ್ಟಕ್ಕೂ ಎಲಾನ್‌ ಮಸ್ಕ್‌ ತನಗೆ ಮಗುವಾಗುತ್ತಿರುವ ಸುದ್ದಿಯನ್ನು ಸೀಕ್ರೆಟ್‌ ಆಗಿ ಇಟ್ಟುಕೊಂಡಿದ್ದರು ಎನ್ನುವ ಆರೋಪಕ್ಕೂ ಮಸ್ಕ್‌ ಮಹಾಶಯ ವ್ಯಂಗ್ಯದ ಉತ್ತರ ನೀಡಿದ್ದಾರೆ..

ಇದನ್ನೂ ಓದಿ: ಗಿಲ್ ಗೆ ಕ್ಯಾಪ್ಟನ್ ಪಟ್ಟ ಕಟ್ಟಿದ BCCI – ಕನ್ನಡಿಗ ರಾಹುಲ್ ಗೆ ಮೋಸ ಮಾಡಿದ್ರಾ?

ಮಸ್ಕ್‌ ಮಹಾಶಯ ಏನು ಮಾಡಿದ್ರೂ ಸುದ್ದಿಯಾಗುತ್ತಿರುತ್ತದೆ.. ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಒಂದಲ್ಲಾ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿ ಇರೋದಿಕ್ಕೆ ಬಯಸುತ್ತಾರೆ.. ಈಗ ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್‌ಗೆ ಹನ್ನೆರಡನೇ ಮಗುವಾಗಿದೆ ಎಂದು ಬ್ಲೂಮ್‌ಬರ್ಗ್‌ ಒಂದು ವರದಿ ಮಾಡಿದೆ.. ಅಲ್ಲದೆ ತನಗೆ ಮಗುವಾಗಿರುವ ವಿಷಯವನ್ನು ಮಸ್ಕ್‌ ಸೀಕ್ರೆಟ್‌ ಆಗಿ ಇಟ್ಟುಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು.. ಆದರೆ ಈ ವರದಿಯ ನಂತರ ಪೇಜ್‌ ಸಿಕ್ಸ್‌ ವೆಬ್‌ಸೈಟ್‌ಗೆ ನೀಡಿದ ಮಾಹಿತಿಯಲ್ಲಿ ತನಗೆ ಮಗುವಾಗುತ್ತಿದೆ ಎನ್ನುವುದರ ಬಗ್ಗೆಯೂ ಮಾಧ್ಯಮ ಹೇಳಿಕೆ ನೀಡಬೇಕು ಅಂತ ಬಯಸುತ್ತಾರೆಂದು ಗೊತ್ತಿರಲಿಲ್ಲ ಎಂದು ಮಗುವಾಗುವ ವಿಚಾರದಲ್ಲಿ ಗೌಪ್ಯತೆ ಕಾಪಾಡಿದ್ದಾರೆಂಬ ಆರೋಪವನ್ನು ವ್ಯಂಗ್ಯವಾಡಿದ್ದಾರೆ.. ಜೊತೆಗೆ ತನಗೆ ಮಗುವಾಗುತ್ತಿರುವ ಬಗ್ಗೆ ಗೆಳೆಯರು ಮತ್ತು ಕುಟುಂಬವರ್ಗದವರಿಗೆ ಗೊತ್ತಿತ್ತು ಎಂದು ಮಸ್ಕ್‌ ಹೇಳಿಕೊಂಡಿದ್ದಾರೆ.. ಈಗ ಹುಟ್ಟಿರುವ ಮಗು ಗಂಡೋ ಹೆಣ್ಣೋ ಎನ್ನುವುದನ್ನು ಮಾತ್ರ ಮಸ್ಕ್‌ ಖಾತ್ರಿಪಡಿಸಿಲ್ಲ.. ಹಾಗಿದ್ದರೂ ಶಿವೋನ್‌ ಝಿಲ್ಲಸ್‌ ಅವರಿಂದ ಮೂರನೇ ಮಗುವನ್ನು ಮಸ್ಕ್‌ ಪಡೆದಿರುವುದು ಖಾತ್ರಿಯಾಗಿದೆ..

ಮಸ್ಕ್‌ ಒಡೆತನದ ನ್ಯೂರೋ ಲಿಂಕ್‌ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಝಿಲ್ಲಸ್‌ ಅವರ ಜೊತೆಗೆ 2021ರಲ್ಲಿ ಮಸ್ಕ್‌ಗೆ ಅವಳಿ ಮಕ್ಕಳು ಹುಟ್ಟಿದ್ದರು.. ಈಗ ಮಸ್ಕ್‌ ಅವರ ಮೂರನೇ ಮಗುವಿಗೆ ಝಿಲ್ಲಸ್‌ ಜನ್ಮ ನೀಡಿದ್ದಾರೆ.. ಮಸ್ಕ್‌ ತನ್ನ ಮೊದಲ ಹೆಂಡತಿ ಜಸ್ಟಿನ್‌ ಮಸ್ಕ್‌ 5 ಮಕ್ಕಳಿಗೆ ಜನ್ಮ ಕೊಟ್ಟಿದ್ದರು.. ಇದಾದ ನಂತರ ಕೆನಾಡದ ಸಂಗೀತಗಾರ್ತಿ ಗ್ರಿಮ್ಸ್‌ ಜೊತೆಗೆ ಮೂರು ಮಕ್ಕಳನ್ನು ಪಡೆದಿದ್ದರು. ಜೊತೆಗೆ ಒಂದು ಮಗುವನ್ನು ಬಾಡಿಗೆ ತಾಯಿಯ ಮೂಲಕವೂ ಪಡೆದಿದ್ದರು.. ಈಗ ಝಿಲ್ಲಿಸ್‌ ಮೂಲಕ ಮೂರು ಮಕ್ಕಳಿಗೆ ಜನ್ಮ ನೀಡಿರುವ ಎಲಾನ್‌ ಮಸ್ಕ್‌ ಈ ಮೂಲಕ ಒಟ್ಟು 12 ಮಕ್ಕಳ ತಂದೆಯಾಗಿದ್ದಾರೆ..

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಜನಸಂಖ್ಯೆ ಕುಸಿತವಾಗುತ್ತಿದೆ ಎಂದು ತೀವ್ರ ಕಳವಳ ಹೊಂದಿರುವ ಮಸ್ಕ್‌.. ಮುಂದಿನ ದಿನಗಳಲ್ಲಿ ಜನಸಂಖ್ಯೆ ಕುಸಿತ ತೀವ್ರವಾಗಲಿದೆ ಎಂದು ಹೇಳಿದ್ದಾರೆ.. ಇತ್ತೀಚೆಗೆ ರೋಬೋಟ್‌ಗಳು ಮತ್ತು ಮನುಷ್ಯ ಮಿದುಳನ್ನು ತೋರಿಸುತ್ತಾ, ಇದೇ ಒರಿಜಿನಲ್‌ ಪ್ರಾಸೆಸರ್‌ ಎನ್ನುವ ವ್ಯಂಗ್ಯ‘ಚಿತ್ರ ಪೋಸ್ಟ್‌ ಮಾಡಿದ್ದ ಮಸ್ಕ್‌, ಈ ಮೂಲಕ ಜನಸಂಖ್ಯೆ ಅಪಾಯದಲ್ಲಿದೆ ಎಂದು ಸಾರಿದ್ದರು.. ಹೀಗಾಗಿ 52 ವರ್ಷದ ಮಸ್ಕ್‌ ಮಹಾಶಯ ಮತ್ತಷ್ಟು ಮಕ್ಕಳಿಗೆ ತಂದೆಯಾಗುವ ಖುಷಿಯಲ್ಲಿದ್ದಾರೆ..

Shwetha M