ವಿಶ್ವದ ನಂ.1 ಶ್ರೀಮಂತನ ಪಟ್ಟ ಮತ್ತೆ ಕಳೆದುಕೊಂಡ ಎಲಾನ್ ಮಸ್ಕ್ – ಎರಡೇ ದಿನದಲ್ಲಿ ಅದೆಷ್ಟು ಕೋಟಿ ನಷ್ಟ?

ವಿಶ್ವದ ನಂ.1 ಶ್ರೀಮಂತನ ಪಟ್ಟ ಮತ್ತೆ ಕಳೆದುಕೊಂಡ ಎಲಾನ್ ಮಸ್ಕ್ – ಎರಡೇ ದಿನದಲ್ಲಿ ಅದೆಷ್ಟು ಕೋಟಿ ನಷ್ಟ?

ಟೆಸ್ಲಾ ಹಾಗೂ ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್ ಗೆ ಬಿಗ್ ಶಾಕ್ ಎದುರಾಗಿದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ  ಮೊನ್ನೆಯಷ್ಟೇ ಮೊದಲನೇ ಸ್ಥಾನ ಗಿಟ್ಟಿಸಿದ್ದ ಎಲಾನ್ ಮಸ್ಕ್ 48 ಗಂಟೆಗಳಲ್ಲೇ ಅದನ್ನ ಕಳೆದುಕೊಂಡಿದ್ದಾರೆ. ಮತ್ತೆ 2ನೇ ಸ್ಥಾನಕ್ಕೆ ಇಳಿದಿದ್ದಾರೆ.

ಬುಧವಾರ (ಮಾರ್ಚ್ 02) ಟೆಸ್ಲಾ ಷೇರುಗಳ ಮೌಲ್ಯ ಶೇ.5ಕ್ಕಿಂತಲೂ ಹೆಚ್ಚು ಕುಸಿತ ಕಂಡಿದ್ದರಿಂದ ಮಸ್ಕ್ ಅವರ ಒಟ್ಟು ಸಂಪತ್ತಿನ ಮೌಲ್ಯ 1.9 ಬಿಲಿಯನ್ ಡಾಲರ್ ನಷ್ಟು ಕಡಿಮೆಯಾಗಿದೆ. ಫ್ರೆಂಚ್ ಲಕ್ಸುರಿ ಬ್ರ್ಯಾಂಡ್ ಲೂಯಿಸ್ ವೂಟ್ಟನ್ ಮುಖ್ಯಸ್ಥ ಬೆರ್ನಾರ್ಡ್ ಆರ್ನಾಲ್ಟ್ ಮತ್ತೆ ನಂಬರ್ 1 ಶ್ರೀಮಂತ ಸ್ಥಾನಕ್ಕೆ ಜಿಗಿದಿದ್ದಾರೆ.  ಬುಧವಾರ ಮಸ್ಕ್ ಅವರ ಒಟ್ಟು ಸಂಪತ್ತಿನ ಮೌಲ್ಯ 184 ಬಿಲಿಯನ್ ಡಾಲರ್ ಗೆ ಕುಸಿದಿದ್ದು, ಆರ್ನಾಲ್ಟ್ ಅವರ ಸಂಪತ್ತಿನ ಮೌಲ್ಯ 186 ಬಿಲಿಯನ್ ಡಾಲರ್ ಆಗಿದೆ.

ಇದನ್ನೂ ಓದಿ : 2022ರಲ್ಲಿ ಜಗತ್ತಿನಾದ್ಯಂತ ಗರಿಷ್ಟ ಪ್ರಮಾಣದ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ – ಅಧ್ಯಯನ ವರದಿಯಿಂದ ಬಹಿರಂಗ

ಇತ್ತೀಚೆಗಷ್ಟೇ ಮಸ್ಕ್ ಅವರ ಸಂಪತ್ತಿನ ಮೌಲ್ಯ 187.1 ಬಿಲಿಯನ್ ಡಾಲರ್ ಗೆ ಏರಿಕೆಯಾಗಿ ಅವರು ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ನಲ್ಲಿ ಅಗ್ರಪಟ್ಟಕ್ಕೇರಿದ್ದರು. ಆದ್ರೆ ಎರಡೇ ದಿನದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. 2022ರ ಡಿಸೆಂಬರ್ ನಲ್ಲಿ ಟೆಸ್ಲಾ ಷೇರುಗಳ ಬೆಲೆ ಶೇಕಡಾ 65ರಷ್ಟು ಕುಸಿತವಾಗಿದ್ದರಿಂದ ಮಸ್ಕ್ ತಮ್ಮ ಮೊದಲ ಸ್ಥಾನವನ್ನ ಆರ್ನಾಲ್ಟ್ ಅವರಿಗೆ ಬಿಟ್ಟುಕೊಡುವಂತಾಗಿತ್ತು.

 

suddiyaana