ಸಿರಿವಂತರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಟ್ವಿಟ್ವರ್ ದೊರೆ – ಎಲಾನ್ ಮಸ್ಕ್ ಮತ್ತೆ ವಿಶ್ವದ ಅತಿ ಶ್ರೀಮಂತ ವ್ಯಕ್ತಿ

ಸಿರಿವಂತರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಟ್ವಿಟ್ವರ್ ದೊರೆ – ಎಲಾನ್ ಮಸ್ಕ್ ಮತ್ತೆ ವಿಶ್ವದ ಅತಿ ಶ್ರೀಮಂತ ವ್ಯಕ್ತಿ

ಟ್ವಿಟ್ಟರ್ ದೊರೆ ಎಲಾನ್ ಮಸ್ಕ್ ಮತ್ತೆ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.  ಕಳೆದ ತಿಂಗಳು 108.10 ಡಾಲರ್​ನಷ್ಟಿದ್ದ ಟೆಸ್ಲಾ ಷೇರು ಬೆಲೆ ಇದೀಗ 200 ಡಾಲರ್​ಗೂ ಹೆಚ್ಚಾಗಿದೆ. ಇದರಿಂದಾಗಿ ಎಲಾನ್ ಮಸ್ಕ್ ಆಸ್ತಿ ಮೌಲ್ಯ 187 ಬಿಲಿಯನ್ ಡಾಲರ್​ಗೆ ಏರಿದೆ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಬೆರ್ನಾರ್ಡ್ ಆರ್ನಾಲ್ಟ್ ಅವರನ್ನು ಹಿಂದಿಕ್ಕಿ ಮಸ್ಕ್ ಅಗ್ರಸ್ಥಾನಕ್ಕೇರಿದ್ದಾರೆ.  ಬ್ಲೂಮ್​ಬರ್ಗ್ ಬಿಡುಗಡೆ ಮಾಡಿದ ಸಿರಿವಂತರ ಪಟ್ಟಿಯಲ್ಲಿ ಮಸ್ಕ್ ಅಗ್ರಸ್ಥಾನಕ್ಕೆ ಏರಿದ್ದಾರೆ.

ಇದನ್ನೂ ಓದಿ:  ಮಾತು ಕೊಟ್ಟು ತಪ್ಪಿದ ಜಗತ್ತಿನ ಶ್ರೀಮಂತ ಎಲಾನ್ ಮಸ್ಕ್ – ಟ್ವಿಟರ್ ಉದ್ಯೋಗಿಗಳಿಗೆ ಇದೆಂಥಾ ಶಿಕ್ಷೆ..?

ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿಯ ಷೇರುಗಳ ಬೆಲೆ ಈ ವರ್ಷ ಶೇ. 70ರಷ್ಟು ಏರಿದ ಹಿನ್ನೆಲೆಯಲ್ಲಿ ಮಸ್ಕ್ ಆಸ್ತಿ ಮೌಲ್ಯ ಹೆಚ್ಚಾಗಿದೆ. ಟ್ವಿಟ್ಟರ್ ಖರೀದಿಸುವಾಗ ಎಲಾನ್ ಮಸ್ಕ್ ಹಣ ಹೊಂದಿಸಲು ಟೆಸ್ಲಾದ ಷೇರುಗಳನ್ನು ಮಾರಿದ್ದರು. ಜೊತೆಗೆ ಒಂದಷ್ಟು ವಿವಾದಕ್ಕೂ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಟೆಸ್ಲಾ ಷೇರುಗಳೂ ಕುಸಿತ ಕಂಡಿದ್ದವು. ಜನವರಿ 3ರಂದು ಟೆಸ್ಲಾ ಷೇರು ಬೆಲೆ 108.10 ಡಾಲರ್​ಗೆ (8,940 ರೂ) ಕುಸಿತ ಕಂಡಿತ್ತು. ಸುದೀರ್ಘ ಕಾಲ ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿಕೊಂಡಿದ್ದ ಎಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ ಕುಸಿದಿದ್ದರು.

ಇದೀಗ ಟೆಸ್ಲಾ ಷೇರು ಬೆಲೆ 207.63 ಡಾಲರ್​ಗೆ (17,171 ರೂ) ಏರಿದೆ. ಪರಿಣಾಮವಾಗಿ ಎಲಾನ್ ಮಸ್ಕ್ ಆಸ್ತಿ ಮೌಲ್ಯ 187.1 ಬಿಲಿಯನ್ ಡಾಲರ್​ನಷ್ಟಾಗಿದೆ (ಸುಮಾರು 15.47 ಲಕ್ಷ ಕೋಟಿ ರೂಪಾಯಿ). ಫ್ರಾನ್ಸ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ ಅವರನ್ನು ಸ್ವಲ್ಪದರಲ್ಲಿ ಮಸ್ಕ್ ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಮಾಹಿತಿ ಪ್ರಕಾರ ಆರ್ನಾಲ್ಟ್ ಆಸ್ತಿ ಮೌಲ್ಯ 185 ಬಿಲಿಯನ್ ಡಾಲರ್ (ಸುಮಾರು 15.30 ಲಕ್ಷ ಕೋಟಿ ರೂಪಾಯಿ) ಇದೆ. 2021ರಲ್ಲಿ ಎಲಾನ್ ಮಸ್ಕ್ ಅವರ ಆಸ್ತಿ ಮೌಲ್ಯ ಬರೋಬ್ಬರಿ 300 ಬಿಲಿಯನ್ ಡಾಲರ್​ಗೂ (24.8ಲಕ್ಷ ಕೋಟಿ ರೂ) ಹೆಚ್ಚು ಇತ್ತು. ಎರಡನೇ ಸ್ಥಾನದಲ್ಲಿದ್ದ ಆರ್ನಾಲ್ಟ್ ಮತ್ತು ಮಸ್ಕ್ ನಡುವೆ ಆಸ್ತಿ ಅಂತರ ಬಹಳ ಹೆಚ್ಚಿತ್ತು. ಟ್ವಿಟ್ಟರ್ ಗೂಡಿಗೆ ಕೈಹಾಕಿದ ಬಳಿಕ ಮಸ್ಕ್ ಬಹಳಷ್ಟು ನಷ್ಟ ಮಾಡಿಕೊಂಡಿದ್ದರು ಎಂದೇ ಹೇಳಲಾಗುತ್ತಿತ್ತು. ಇದೀಗ ಮತ್ತೆ ಮಸ್ಕ್ ವಿಶ್ವದ ನಂಬರ್ ಶ್ರೀಮಂತ ಎನಿಸಿಕೊಂಡಿದ್ದಾರೆ.

suddiyaana