ಕೋಟಿ ಕೋಟಿ ಕಳೆದುಕೊಂಡರೂ ಎಲಾನ್‌ ಮಸ್ಕ್‌ ಮತ್ತೆ ವಿಶ್ವದ ನಂ. 1 ಶ್ರೀಮಂತ!

ಕೋಟಿ ಕೋಟಿ ಕಳೆದುಕೊಂಡರೂ ಎಲಾನ್‌ ಮಸ್ಕ್‌ ಮತ್ತೆ ವಿಶ್ವದ ನಂ. 1 ಶ್ರೀಮಂತ!

ವಾಷಿಂಗ್ಟನ್: ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್‌ ಮಸ್ಕ್ ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. Arnault ನ LVMH ಷೇರುಗಳು ಪ್ಯಾರಿಸ್ ವಹಿವಾಟಿನಲ್ಲಿ 2.6% ಕುಸಿದ ನಂತರ ಟೆಸ್ಲಾ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲಾನ್ ಮಸ್ಕ್ ಐಷಾರಾಮಿ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಸಿರಿವಂತಿಕೆಯಲ್ಲಿ ಹಿಂದಿಕ್ಕಿ ನಂಬರ್‌ 1 ಸ್ಥಾನಕ್ಕೇರಿದ್ದಾರೆ.

ಇದನ್ನೂ ಓದಿ: ಇನ್ನು ಮುಂದೆ ಈ ರಾಜ್ಯದಲ್ಲೂ 100 ಯೂನಿಟ್‌ ವಿದ್ಯುತ್‌ ಉಚಿತ!

ಇಲಾನ್‌ ಮಸ್ಕ್‌ ಅವರು ಟ್ವಿಟರ್​ ಸಂಸ್ಥೆಯನ್ನು ಖರೀದಿಸಿದ ನಂತರ ತಮ್ಮ ಕೋಟಿ ಕೋಟಿ ಸಂಪತ್ತನ್ನು ಕಳೆದುಕೊಂಡಿದ್ದರು. ಆದರೆ ಏಪ್ರಿಲ್‌ನಿಂದ LVMH ಷೇರುಗಳು ಸುಮಾರು 10% ಕುಸಿಯುತ್ತಾ ಬಂದಿದೆ. ಒಂದು ಹಂತದಲ್ಲಿ ಒಂದೇ ದಿನದಲ್ಲಿ ಅರ್ನಾಲ್ಟ್‌ನ ನಿವ್ವಳ ಮೌಲ್ಯದಿಂದ 11 ಶತಕೋಟಿ ಡಾಲರ್ ಕೆಳಗಿಳಿದಿದೆ. ಇದೆಲ್ಲದರ ನಡುವೆ ಎಲಾನ್ ಮಸ್ಕ್ ಈ ವರ್ಷ 55.3 ಶತಕೋಟಿ ಡಾಲರ್​ಗಿಂತ ಹೆಚ್ಚು ಗಳಿಸಿದ್ದಾರೆ. ಈ ಆದಾಯವನ್ನು ಹೆಚ್ಚಾಗಿ ಟೆಸ್ಲಾ ಕಾರಣದಿಂದಾಗಿ ಪಡೆಯಲಾಗಿದೆ ಎನ್ನಲಾಗಿದೆ. ಇದು ಮಸ್ಕ್‌ ಅವರ ಸಂಪತ್ತಿನ 71% ಆಗಿದೆ. ಸೂಚ್ಯಂಕದ ಪ್ರಕಾರ ಮಸ್ಕ್‌ನ ಸಂಪತ್ತು ಈಗ ಸುಮಾರು 192.3 ಶತಕೋಟಿ ಡಾಲರ್​ ಮೌಲ್ಯದ್ದಾಗಿದ್ದು ಅರ್ನಾಲ್ಟ್​ದು ಸುಮಾರು 186.6 ಶತಕೋಟಿ ಡಾಲರ್ ಆಗಿದೆ. ಈ ಮೂಲಕ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಮರಳಿ ಪಡೆದಿದ್ದಾರೆ.

ಟೆಕ್ ಉದ್ಯಮವು ಹೆಣಗಾಡುತ್ತಿರುವಾಗ ಹಣದುಬ್ಬರ ಅನೇಕ ದೇಶಗಳ ಹೊಸ್ತಿಲಲ್ಲಿ ಇದ್ದರೂ ಅರ್ನಾಲ್ಟ್ ಸಂಸ್ಥೆ ಡಿಸೆಂಬರ್‌ನಲ್ಲಿ ಮಸ್ಕ್ ಅನ್ನು ಮೀರಿಸಿದ್ದರು. ಉದ್ಯಮಿ ಅರ್ನಾಲ್ಟ್, LVMH, ಲೂಯಿ ವಿಟಾನ್, ಫೆಂಡಿ ಮತ್ತು ಹೆನ್ನೆಸ್ಸಿ ಸೇರಿದಂತೆ ಅನೇಕ ಬ್ರಾಂಡ್‌ಗಳನ್ನು ಹೊಂದಿದ್ದಾರೆ.

suddiyaana