ಇನ್ಮುಂದೆ ಎಲ್ಲಾ ಟ್ವಿಟರ್‌ ಬಳಕೆದಾರರಿಗೆ ಮಾಸಿಕ ಶುಲ್ಕ? – ಎಲಾನ್‌ ಮಸ್ಕ್‌ ಹೇಳಿದ್ದೇನು?

ಇನ್ಮುಂದೆ ಎಲ್ಲಾ ಟ್ವಿಟರ್‌ ಬಳಕೆದಾರರಿಗೆ ಮಾಸಿಕ ಶುಲ್ಕ? – ಎಲಾನ್‌ ಮಸ್ಕ್‌ ಹೇಳಿದ್ದೇನು?

ಟೆಸ್ಲಾ ಸಿಇಒ ಎಲಾನ್ ಮಸ್ಕಿ ಅವರು ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಸಾಕಷ್ಟು ಬದಲಾವಣೆ ಮಾಡಿಕೊಂಡು ಬಂದಿದ್ದಾರೆ. ಕೆಲವು ತಿಂಗಳ ಹಿಂದೆ  ಟ್ವಿಟರ್‌ನ ಲೋಗೊವನ್ನು ಬದಲಾವಣೆ ಮಾಡಿದ್ದ ಎಲಾನ್‌ ಮಸ್ಕ್‌ ಇನ್ಮುಂದೆ ಟ್ವಿಟರ್‌ ಬಳಕೆಗೆ ಮಾಸಿಕ ಶುಲ್ಕ ವಿಧಿಸಲಾಗುತ್ತದೆ ಎಂಬುದರ ಸುಳಿವು ನೀಡಿದ್ದಾರೆ.

ಎಲಾನ್‌ ಮಸ್ಕ್‌ ಅವರು ಟ್ಟಿಟರ್‌ನ ಬ್ಲೂ ಟಿಕ್‌ ಹಾಗೂ ಗೋಲ್ಡನ್‌ ಟಿಕ್‌ ಖಾತೆಗಳಿಗೆ ನಿಗದಿತ ಶುಲ್ಕ ವಿಧಿಸಿದ್ದರು. ಇದೀಗ ಟ್ವೀಟರ್‌ನಲ್ಲಿರುವ ನಕಲಿ ಅಕೌಂಟ್‌ಗಳು ಮತ್ತು ಬಾಟ್‌ಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೂ ಮಾಸಿಕ ಶುಲ್ಕ ವಿಧಿಸಲು ತಿರ್ಮಾನಿಸಲಾಗಿದೆ ಎಂದು ಮಸ್ಕ್‌ ಹೇಳಿದ್ದಾರೆ. ಆದರೆ ಎಷ್ಟು ಪ್ರಮಾಣದಲ್ಲಿ ಶುಲ್ಕ ವಿಧಿಸಲಾಗುತ್ತದೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಸಂಜು ಸ್ಯಾಮ್ಸನ್‌ಗೆ ಮತ್ತೆ ಅನ್ಯಾಯ – ಮಾತಾಡದೇ ಮನದಲ್ಲಿರುವ ನೋವನ್ನು ಮೆಸೇಜ್ ಮೂಲಕ ಹೊರಹಾಕಿದ ಸಂಜು

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರ ಜೊತೆ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಪ್ರಸ್ತುತ ಟ್ವೀಟರ್‌ನಲ್ಲಿ 55 ಕೋಟಿ ಬಳಕೆದಾರರಿದ್ದು, ಪ್ರತಿನಿತ್ಯ 20 ಕೋಟಿಯಷ್ಟು ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಇದರಲ್ಲಿ ನಕಲಿ ಖಾತೆಗಳು ಎಷ್ಟಿವೆ ಎಂಬುದನ್ನು ಅವರು ಬಹಿರಂಗ ಪಡಿಸಿಲ್ಲ. ಹಾಲಿ ಬ್ಲ್ಯೂಟಿಕ್‌ ಸೇವೆಗೆ ಮಸ್ಕ್‌ ಶುಲ್ಕ ಪ್ರಾರಂಭಿಸಿದ್ದಾರೆ.

Shwetha M