ಮಾತು ಕೊಟ್ಟು ತಪ್ಪಿದ ಜಗತ್ತಿನ ಶ್ರೀಮಂತ ಎಲಾನ್ ಮಸ್ಕ್ – ಟ್ವಿಟರ್ ಉದ್ಯೋಗಿಗಳಿಗೆ ಇದೆಂಥಾ ಶಿಕ್ಷೆ..?
ದೈತ್ಯ ಟೆಕ್ ಸಂಸ್ಥೆಗಳಲ್ಲಿ ಉದ್ಯೋಗಿಗಳ ವಜಾ ಸರಣಿ ಮುಂದುವರಿದಿದೆ. ವಿಶ್ವದ ಎರಡನೇ ಬಿಲೇನಿಯೇರ್ ಮತ್ತು ಟ್ವಿಟರ್‌ನ ಸಿಇಒ ಎಲಾನ್ ಮಸ್ಕ್ ಮತ್ತೊಮ್ಮೆ ಟ್ವಿಟರ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಅವರ ಭರವಸೆಯ ಹೊರತಾಗಿಯೂ ಉದ್ಯೋಗಿಗಳನ್ನ ಟರ್ಮಿನೇಟ್ ಮಾಡಿದ್ದಾರೆ.
ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ನೆಟ್ ವರ್ಕಿಂಗ್ ಕಂಪನಿ ಟ್ವಿಟರ್ ಮತ್ತೆ ನೌಕರರನ್ನ ವಜಾಗೊಳಿಸಿದೆ. ಇಂಜಿನಿಯರಿಂಗ್ ಮತ್ತು ಉತ್ಪನ್ನವನ್ನು ಒಳಗೊಂಡಂತೆ ಕಂಪನಿಯಾದ್ಯಂತ ತಂಡಗಳಲ್ಲಿನ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಶನಿವಾರ ತಡರಾತ್ರಿ ಕಂಪನಿಯಿಂದ ಬಂದ ಇ-ಮೇಲ್ ಮೂಲಕ ತಮ್ಮನ್ನ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ತಿಳಿದುಕೊಂಡಿದ್ದಾರೆ. ಇನ್ನೂ ಕೆಲವರು ಕಂಪನಿಯ ಜಾಲತಾಣಕ್ಕೆ ಲಾಗ್ ಇನ್ ಮಾಡಲು ಸಾಧ್ಯವಾಗದಿದ್ದಾಗ ತಮ್ಮನ್ನ ಕೆಲಸದಿಂದ ತೆಗೆದುಹಾಕಿರೋದನ್ನ ದೃಢಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ! – ಆರೋಗ್ಯ ಸಚಿವರು ಹೀಗೇಕೆ ಹೇಳಿದ್ದು?
ಅಸಲಿಗೆ ಟ್ವಿಟರ್ ನಿಂದ ಎಷ್ಟು ನೌಕರರನ್ನ ವಜಾಗೊಳಿಸಿದ್ದಾರೆ ಅನ್ನೋದು ದೃಢಪಟ್ಟಿಲ್ಲವಾದರೂ 50ಕ್ಕೂ ಹೆಚ್ಚು ಉದ್ಯೋಗಿಗಳನ್ನ ಕೈ ಬಿಡಲಾಗಿದೆ. ವಜಾ ಪೈಕಿ ಸೈಟ್‌ನ ಚಂದಾದಾರಿಕೆ ಸೇವೆಯಾದ Twitter ಬ್ಲೂನ ಉಸ್ತುವಾರಿ ವಹಿಸಿದ್ದ ಕಾರ್ಯನಿರ್ವಾಹಕರಲ್ಲಿ ಒಬ್ಬರಾದ ಎಸ್ತರ್ ಕ್ರಾಫೋರ್ಡ್ ಕೂಡ ಇದ್ದಾರೆ ಎಂದು ಪ್ಲಾಟ್‌ಫಾರ್ಮರ್‌ನ ಜೊಯ್ ಸ್ಕಿಫರ್ ಭಾನುವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಟ್ವಿಟರ್ ಅನ್ನು ಮಸ್ಕ್ ಸ್ವಾಧೀನಪಡಿಸಿಕೊಂಡ ನಂತರದ ದಿನಗಳಲ್ಲಿ ಕಳೆದ ವರ್ಷ ಟ್ವಿಟರ್‌ನಲ್ಲಿ 3,700 ಕ್ಕೂ ಹೆಚ್ಚು ಉದ್ಯೋಗಿಗಳನ್ನ ತೆಗೆದು ಹಾಕಿದ್ದರು.