“ಎಲಾನ್ ಮಸ್ಕ್ ಅಮೆರಿಕದ ಅಧ್ಯಕ್ಷ” – ಭವಿಷ್ಯ ನುಡಿದ ರಷ್ಯಾದ ಮಾಜಿ ಅಧ್ಯಕ್ಷ

 “ಎಲಾನ್ ಮಸ್ಕ್ ಅಮೆರಿಕದ ಅಧ್ಯಕ್ಷ” – ಭವಿಷ್ಯ ನುಡಿದ ರಷ್ಯಾದ ಮಾಜಿ ಅಧ್ಯಕ್ಷ

ಜರ್ಮನಿ ಮತ್ತು ಫ್ರಾನ್ಸ್ ಮಧ್ಯೆ ಮುಂದಿನ ವರ್ಷ ಯುದ್ಧ ಸಂಭವಿಸಲಿದೆ. ಅಲ್ಲದೇ ಜಗತ್ತಿನ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ ಎಂದು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮಡ್ವಡೇವ್ ಭವಿಷ್ಯ ನುಡಿದಿದ್ದಾರೆ.

ಜೊತೆಗೆ ಪೋಲೆಂಡ್ ಮತ್ತು ಹಂಗೇರಿ ದೇಶಗಳು ಉಕ್ರೇನ್​​​ನ ಪೂರ್ವ ಭಾಗವನ್ನು ವಶಪಡಿಸಿಕೊಳ್ಳಲಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಇನ್ನು ರಷ್ಯಾದ ಬಳಿಕ ಅಣ್ವಸ್ತ್ರ ಇರೋ ಕಾರಣಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಸೈಲೆಂಟ್ ಆಗಿವೆ. ಇಲ್ಲವಾದಲ್ಲಿ ರಷ್ಯಾ ವಿರುದ್ಧ ಯುದ್ಧ ಸಾರುತ್ತಿದ್ದವು ಎಂದು ಹೇಳಿದ್ದಾರೆ.

ಇದನ್ನೂ ಓದಿ:  Watch: ಸೇತುವೆ ಮೇಲೆ ದಟ್ಟ ಮಂಜು – ಚೀನಾದಲ್ಲಿ 200ಕ್ಕೂ ಹೆಚ್ಚು ವಾಹನಗಳ ಸರಣಿ ಅಪಘಾತ

ಇನ್ನು ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಇನ್ನಷ್ಟು ಏರಿಕೆಯಾಗಲಿದೆ. ಬ್ರಿಟನ್ ಮತ್ತೆ ಯುರೋಪಿಯನ್ ಯೂನಿಯನ್ ಜೊತೆ ಸೇರಲಿದೆ. ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಆಂತರಿಕ ಕಲಹಗಳು ನಡೆಯಲಿವೆ. ಜಗತ್ತಿನ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ ಎಂದು ಡಿಮಿಟ್ರಿ ಮಡ್ವಡೇವ್ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯೆ ನೀಡಿದ್ದು, ಅದ್ಬುತ ಎಂದಿದ್ದಾರೆ.

suddiyaana