ಹಕ್ಕಿಗೂ ಕೆಲಸದಿಂದ ಗೇಟ್ಪಾಸ್ ನೀಡಿದ ಮಸ್ಕ್! – ಟ್ವಿಟರ್ಗೆ ಇನ್ನುಮುಂದೆ ಹೊಸ ಲೋಗೊ
ಟೆಸ್ಲಾ ಸಿಇಒ ಎಲಾನ್ ಮಸ್ಕಿ ಅವರು ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಸಾಕಷ್ಟು ಬದಲಾವಣೆ ಮಾಡಿಕೊಂಡು ಬಂದಿದ್ದಾರೆ. ಸಾಕಷ್ಟು ಬದಲಾವಣೆಗಳನ್ನು ಮಾಡಿದ ಮಸ್ಕ್ ಈಗ ಟ್ವಿಟರ್ನ ಲೋಗೊ ಹಕ್ಕಿಯನ್ನೇ ಹಾರಿಸಿದ್ದಾರೆ. ಅಷ್ಟೇ ಅಲ್ಲದೇ ಈ ಅಪ್ಲಿಕೇಷನ್ ಗೆ ಹೊಸ ಲೋಗೊವನ್ನು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ನಟ ತಬಲಾ ನಾಣಿಯವರಿಗೆ ಹೆಂಡ್ತಿ ಬೇಕಂತೆ..! – ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬಂದು ಕೇಳುತ್ತಾರಂತೆ..!
ಎಲಾನ್ ಮಸ್ಕ್ ಹೊಸ ಲೋಗೊವನ್ನು ‘X’ ಎಂದು ನಾಮಕರಣ ಮಾಡಿದ್ದಾರೆ. ಮಿನುಗುತ್ತಿರುವ ‘X’ ಚಿತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಟ್ವಿಟರ್ ಅನ್ನು ‘ಎಕ್ಸ್’ ಅಪ್ ಎಂದು ರೀಬ್ರಾಂಡ್ ಮಾಡಿರುವ ಬಗ್ಗೆಯೂ ಟ್ವಿಟ್ ಮಾಡಿರುವ ಮಸ್ಕ್, ಈ ಆ್ಯಪ್ ಜಗತ್ತಿನಾದ್ಯಂತ ಲೈವ್ ಆಗಲಿದೆ ಎಂದು ಘೋಷಿಸಿದ್ದಾರೆ.
ಈ ಆ್ಯಪ್ ಸಾಕಷ್ಟು ವಿಶೇಷವಾಗಿದ್ದು, ಜನರು ತಮ್ಮ ಅನಿಸಿಕೆಗಳನ್ನು ವಿಶ್ವದ ಮುಂದೆ ಹಂಚಿಕೊಳ್ಳುವ ಇರುವ ಒಂದು ಅತ್ಯುತ್ತಮ ವೇದಿಕೆಯಾಗಿದೆ. ಹೊಸ ಆ್ಯಪ್ನಲ್ಲಿ ಆಡಿಯೊ, ವಿಡಿಯೊ, ಸಂದೇಶ ಕಳುಹಿಸಬಹುದು ಬಾಂಕಿಂಗ್ ಪಾವತಿ ಆಯೆಯೂ ಇದೆ ಎಂದು ಮಸ್ಕ್ ವಿವರಿಸಿದ್ದಾರೆ.
‘ಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್ಗೆ ಮತ್ತು ಎಲ್ಲಾ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ’ ಎಂದು ಎಲಾನ್ ಮಸ್ಕ್ ಇತ್ತೀಚೆಗೆ ಟ್ವಿಟ್ ಮಾಡಿದ್ದರು. ಎಲಾನ್ ಮಸ್ತ್ ಈ ರೀತಿ ಟ್ವೀಟ್ ಮಾಡಿದ ಬೆನ್ನಲ್ಲೇ ಈ ವಿಚಾರವಾಗಿ ಪರ-ವಿರೋಧದ ಚರ್ಚೆಗಳು ಆರಂಭವಾಗಿದ್ದವು. ಅನೇಕರು ಟ್ವಿಟರ್ ಲೋಗೊವನ್ನು ಬದಲಾಯಿಸಬೇಡಿ ಎಂದು ಹೇಳಿದ್ದರು.