ಕಾಲ್ ಮಾಡಲು ಫೋನ್ ನಂಬರ್ ಬೇಕಿಲ್ಲ.. ‘ಎಕ್ಸ್‌’ನಲ್ಲಿ ಖಾತೆ ಇದ್ದರೆ ಸಾಕು!

ಕಾಲ್ ಮಾಡಲು ಫೋನ್ ನಂಬರ್ ಬೇಕಿಲ್ಲ.. ‘ಎಕ್ಸ್‌’ನಲ್ಲಿ ಖಾತೆ ಇದ್ದರೆ ಸಾಕು!

ಫೋನ್ ಕರೆ ಮಾಡಲು ಫೋನ್ ನಂಬರ್ ಬೇಕೇ ಬೇಕು ಅಲ್ಲವೇ? ಆದರೆ, ಇನ್ನು ಮುಂದೆ ಯಾವುದೇ ನಂಬರ್ ಇಲ್ಲದೇ ಕರೆ ಮಾಡಬಹುದು! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಏನೆಂದರೆ, ನೀವು ಎಕ್ಸ್ ವೇದಿಕೆಯಲ್ಲಿ ಖಾತೆ ಹೊಂದಿರಬೇಕು! ಹೌದು, ಮಾಲೀಕ ಎಲಾನ್ ಮಸ್ಕ್ ಅವರು, ತಮ್ಮ ಎಕ್ಸ್ ವೇದಿಕೆಯಲ್ಲಿ ಶೀಘ್ರವೇ ವಿಡಿಯೋ ಮತ್ತು ಆಡಿಯೋ ಕಾಲ್ ಫೀಚರ್ ಒದಗಿಸುವುದಾಗಿ ಒದಗಿಸಿದ್ದಾರೆ.

ಇದನ್ನೂ ಓದಿ: ಕೋಟಿ ಕೋಟಿ ಕಳೆದುಕೊಂಡರೂ ಎಲಾನ್‌ ಮಸ್ಕ್‌ ಮತ್ತೆ ವಿಶ್ವದ ನಂ. 1 ಶ್ರೀಮಂತ!

ಎಲಾನ್ ಮಾಸ್ಕ್ ಅವರು ಇತ್ತೀಚೆಗಷ್ಟೇ ತಮ್ಮ ಮಾಲೀಕತ್ವದ ಟ್ವಿಟ್ಟರ್ ಸಂಸ್ಥೆಯ ಹೆಸರು ಮತ್ತು ಲೋಗೋವನ್ನ ಬದಲಿಸಿ ಸಂಚಲನ ಸೃಷ್ಟಿಸಿದ್ದರು. ಟ್ವಿಟ್ಟರ್ ಹೆಸರನ್ನ X ಎಂದು ಬದಲಿಸಿದ್ದರು. ಇದೀಗ ಎಕ್ಸ್​​ ಮೂಲಕ ವಾಟ್ಸಾಪ್​ಗೆ ಸೆಟ್ಟು ಹೊಡೆಯಲು ಮುಂದಾಗಿದ್ದಾರೆ. ಇನ್ನು ಮುಂದೆ  X  ಮೂಲಕ ಬಳಕೆದಾರರು ವಿಡಿಯೋ, ಆಡಿಯೋ ಕಾಲ್ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಆದರೆ ಈ ಹೊಸ ಫೀಚರ್ ಯಾವಾಗ ಲಾಂಚ್ ಆಗಲಿದೆ ಎಂಬ ಬಗ್ಗೆ ಮಾತ್ರ ಯಾವುದೇ ಮಾಹಿತಿಯನ್ನು ನೀಡಿಲ್ಲ.

X ನ ಹೊಸ ಫೀಚರ್ ಕುರಿತು ಖುದ್ದು ಎಲಾನ್ ಮಸ್ಕ್ ಘೋಷಣೆ ಮಾಡಿದ್ದಾರೆ. X ಇದೀಗ ಹೊಸ ಫೀಚರ್ ಪರಿಚಯಿಸಲು ಸಜ್ಜಾಗಿದೆ. X  ಮೂಲಕ ಬಳಕೆದಾರರು ವಿಡಿಯೋ, ಆಡಿಯೋ ಕಾಲ್ ಮಾಡಬಹುದು. ಈ ವಿಶೇಷ ಫೀಚರ್‌ಗೆ ಯಾವುದೇ ಫೋನ್ ನಂಬರ್ ಅಗತ್ಯವಿಲ್ಲ. ಯಾರಿಗೆ ಕರೆ ಮಾಡಬೇಕು, ಅವರ X ಖಾತೆ ಕ್ಲಿಕ್ ಮಾಡಿ ಆಡಿಯೋ ಅಥವಾ ವಿಡಿಯೋ ಕಾಲ್ ಆಯ್ಕೆ ಮಾಡಿಕೊಂಡರೆ ಸಾಕು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

suddiyaana