ಎಲಾನ್ ಮಸ್ಕ್, ಮಾರ್ಕ್ ಜುಕರ್‌ಬರ್ಗ್ ಮಧ್ಯೆ ರಿಯಲ್‌ ಅಖಾಡದಲ್ಲಿ ಫೈಟ್!

ಎಲಾನ್ ಮಸ್ಕ್, ಮಾರ್ಕ್ ಜುಕರ್‌ಬರ್ಗ್ ಮಧ್ಯೆ ರಿಯಲ್‌ ಅಖಾಡದಲ್ಲಿ ಫೈಟ್!

ಜಾಗತಿಕ ಉದ್ಯಮದ ದೊರೆಗಳಾದ ಎಲಾನ್ ಮಸ್ಕ್ ಮತ್ತು ಮಾರ್ಕ್​ ಝುಕೆರ್​ಬರ್ಗ್ ನಡುವೆ ಕೇಜ್ ಫೈಟ್ ನಡೆಯೋದು ಬಹುತೇಕ ಗ್ಯಾರಂಟಿಯಾಗಿದೆ.

ಎಲಾನ್ ಮಸ್ಕ್ ಮತ್ತು ಮಾರ್ಕ್​ ಝುಕೆರ್​ಬರ್ಗ್ ನಡುವೆ ಕೇಜ್ ಫೈಟ್‌ಗೆ  ಇನ್ನೇನಿದ್ದರೂ ದಿನಾಂಕ ನಿಗದಿಗೊಳಿಸೋದಷ್ಟೇ ಬಾಕಿ ಉಳಿದಿದೆ. ಈ ನಡುವೆ ಝುಕೆರ್​ಬರ್ಗ್ ಜೊತೆಗಿನ ಕೇಜ್​ ಫೈಟ್​​ನ್ನ ಎಕ್ಸ್​ನಲ್ಲಿ ಅಂದ್ರೆ ಟ್ವಿಟ್ಟರ್​ನಲ್ಲಿ ಲೈವ್ ಸ್ಟ್ರೀಮ್ ಮಾಡೋದಾಗಿ ಎಲಾನ್ ಮಸ್ಕ್ ಹೇಳಿದ್ದಾರೆ.

ಇದನ್ನೂ ಓದಿ: ನಿಷೇಧದ ವೇಳೆ ಪ್ರವಾಸಿ ತಾಣಗಳಿಗೆ ತೆರಳಿದರೆ ಹುಷಾರ್‌ – ನಿಮ್ಮ ವಿರುದ್ದ ದಾಖಲಾಗುತ್ತೆ ಕೇಸ್‌!

ಇಬ್ಬರು ಜಗಜಟ್ಟಿ ಉದ್ಯಮಿಗಳ ಜಿದ್ದಾಜಿದ್ದಿಯ ನೇರಪ್ರಸಾರವನ್ನ ಜಗತ್ತಿನಾದ್ಯಂತ ಜನರು ಟ್ವಿಟ್ಟರ್​​ನಲ್ಲಿ ನೋಡಬಹುದಾಗಿದೆ. ಇನ್ನು ಇದ್ರಿಂದ ಬಂದ ಹಣವನ್ನ ಚಾರಿಟಿಗೆ ನೀಡೋದಾಗಿ ಎಲಾನ್​​ ಮಸ್ಕ್ ಘೋಷಿಸಿದ್ದಾರೆ. ಇವೆಲ್ಲದ್ರ ಮಧ್ಯೆ, ಝುಕೆರ್​ಬರ್ಗ್ ಜೊತೆಗಿನ ಫೈಟ್​ಗೂ ಮುನ್ನ ಆಗಸ್ಟ್​​ 8ರಂದು ಕುತ್ತಿಗೆಯ ಎಮ್​​ಆರ್​ಐ ಸ್ಕ್ಯಾನ್ ಮಾಡಿಸುತ್ತೇನೆ. ಬಹುಶ: ಕುತ್ತಿಗೆಗೆ ಸರ್ಜರಿ ಮಾಡಿಸಬೇಕಾಗಬಹುದು. ಸರ್ಜರಿ ಬಳಿಕವಷ್ಟೇ ಫೈಟ್​ಗೆ ಇಳಿಯೋದಾಗಿ ಎಲಾನ್ ಮಸ್ಕ್ ಟ್ವೀಟ್ ಮಾಟಿದ್ದಾರೆ.

ಕಳೆದ ಒಂದು ವರ್ಷದಿಂದ ಮಸ್ಕ್​​ಗೆ ಕತ್ತು ನೋವಿನ ಸಮಸ್ಯೆ ಇದೆ. ಹೀಗಾಗಿ ಝುಕೆರ್​ಬರ್ಗ್​ ಜೊತೆ ಫೈಟ್​​  ವೇಳೆ ಎಡವಟ್ಟಾಗೋದು ಬೇಡ ಅಂತಾ ಮಸ್ಕ್ ಸರ್ಜರಿ ಮಾಡಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ.

suddiyaana