ಡೈವೊರ್ಸ್‌, ಡೇಟಿಂಗ್, ಸೀಕ್ರೆಟ್ ಲವ್.. – ಇಂಟರ್‌ನ್ಯಾಷನಲ್ ಕ್ರಷ್ ಎಲ್ಲಿಸ್‌ ಪೆರ್ರಿ ಲೈಫ್‌ ಸೀಕ್ರೆಟ್‌

ಡೈವೊರ್ಸ್‌, ಡೇಟಿಂಗ್, ಸೀಕ್ರೆಟ್ ಲವ್.. – ಇಂಟರ್‌ನ್ಯಾಷನಲ್ ಕ್ರಷ್ ಎಲ್ಲಿಸ್‌ ಪೆರ್ರಿ ಲೈಫ್‌ ಸೀಕ್ರೆಟ್‌

ಎಲ್ಲಿಸ್ ಪೆರ್ರಿ.. ಸದ್ಯ ಈಕೆಯೇ ಕ್ರಿಕೆಟ್‌ ಅಭಿಮಾನಿಗಳ ಇಂಟರ್ನ್ಯಾಷನಲ್ ಕ್ರಶ್.. WPL ನಲ್ಲಿ ಪೆರ್ರಿ ಆಟಕ್ಕೆ ಕ್ಲೀನ್ ಬೋಲ್ಡ್ ಆಗಿರುವ ಕ್ರಿಕೆಟ್ ಪ್ರೇಮಿಗಳು ಆಕೆಯ ಬ್ಯೂಟಿಗೂ ಫಿದಾ ಆಗಿದ್ದಾರೆ.. ಆದ್ರೆ ಈ ಸುಂದರಿ ರಿಯಲ್ ಲೈಫ್ನಲ್ಲಿ ಫೇಲ್ ಆಗಿದ್ದಾರೆ.. ಹಾಗಿದ್ರೂ ಶ್ರೀಮಂತಿಕೆಯಲ್ಲಿ ಪೆರ್ರಿ ನಂಬರ್ 1.. ಅಷ್ಟಕ್ಕೂ ಆರ್‌ಸಿಬಿ ಸ್ಟಾರ್ ಎಷ್ಟು ಕೋಟಿಯ ಒಡತಿ?, ಪೆರ್ರಿ ರಿಯಲ್ ಲೈಫ್‌ನಲ್ಲಿ ಟರ್ನಿಂಗ್ ಪಾಯಿಂಟ್ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಈಗ ಐಪಿಎಲ್ ಸೀಸನ್‌ ಶುರುವಾಗಿದೆ. ಹಾಗಿದ್ದರೂ ಆರ್‌ಸಿಬಿ ಅಭಿಮಾನಿಗಳು ಮಹಿಳಾ ಪ್ರೀಮಿಯರ್ ಲೀಗ್ ಗುಂಗಿನಿಂದ ಹೊರಬಂದಿಲ್ಲ.. ಯಾಕಂದ್ರೆ ಆರ್ಸಿಬಿ ವುಮೆನ್ಸ್ ತಂಡ ಮೊದಲ ಬಾರಿಗೆ ಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಪ್ರಶಸ್ತಿ ಗೆಲುವಿನ ಹಿಂದೆ ಎಲ್ಲಿಸ್ ಪೆರ್ರಿ ಎಂಬ ಶಕ್ತಿಯ ಕೊಡುಗೆ ದೊಡ್ಡದಿತ್ತು. ಮಳೆ ನಿಂತರೂ ಮಳೆಹನಿ ನಿಲ್ಲುವುದಿಲ್ಲ ಎನ್ನುತ್ತಾರಲ್ಲ.. ಹಾಗೇ WPL ಮುಗಿದ್ರೂ ಎಲ್ಲಿಸ್ ಪೆರ್ರಿ ಹವಾ ನಿಂತಿಲ್ಲ. ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಈಕೆಯದ್ದೇ ಹವಾ.. ಸದ್ಯ ಈಕೆಯೇ ಅಭಿಮಾನಿಗಳ ಇಂಟರ್ನ್ಯಾಷನಲ್ ಕ್ರಶ್. WPL ನಲ್ಲಿ ಕ್ರಿಕೆಟ್ ಪ್ರೇಮಿಗಳು ಪೆರ್ರಿ ಆಟಕ್ಕೆ ಮಾತ್ರವಲ್ಲದೇ, ಆಕೆಯ ಬ್ಯೂಟಿಗೂ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಇದನ್ನೂ ಓದಿ: ಬಡ ಕುಟುಂಬಗಳ ಮಹಿಳೆಗೆ ವರ್ಷಕ್ಕೆ ₹1 ಲಕ್ಷ ಆರ್ಥಿಕ ಸಹಾಯ – ಕಾಂಗ್ರೆಸ್‌ನಿಂದ ಮತ್ತೊಂದು ಗ್ಯಾರಂಟಿ!

ಹೌದು.. ಆರ್ಸಿಬಿ ಪ್ರಮುಖ ಆಟಗಾರ್ತಿ ಎಲ್ಲಿಸ್ ಪೆರ್ರಿ ಸದ್ಯ ಭಾರಿ ಟ್ರೆಂಡ್ನಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಪೆರ್ರಿ ಅವರೇ ಕಾಣುತ್ತಿದ್ದಾರೆ. ಆಕೆಯ ಸುಂದರ ನೋಟಕ್ಕೆ ಅದೆಷ್ಟೋ ಕೋಟಿ ಕೋಟಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅವರ ಸೌಂದರ್ಯದ ಮುಂದೆ ಯಾವ ಹಾಲಿವುಡ್‌ ಸಿನಿಮಾ ನಟಿಯೂ ಸರಿಸಾಟಿಯಲ್ಲ ಅಂತಾನೇ ಹೇಳಬಹುದು..  ಅಷ್ಟು ಗ್ಲಾಮರಸ್ ಆಗಿದ್ದಾರೆ ಪೆರ್ರಿ.. ಆಕೆಯ ಬ್ಯೂಟಿ ನೋಡಿದ ನಂತರ ಸದ್ಯ ಕ್ರಿಕೆಟ್ ಸಾಧನೆಗಳ ಜೊತೆಗೆ ವೈಯಕ್ತಿಕ ಬದುಕಿನ ಕುರಿತು ಅಭಿಮಾನಿಗಳು ಗೂಗಲ್ನಲ್ಲಿ ಕೆದುಕುತ್ತಿದ್ದಾರೆ.  ಪೆರ್ರಿ ಸಿಂಗಲಾ? ಅವರ ಬಾಯ್‌ ಫ್ರೆಂಡ್‌ ಯಾರು? ಮದುವೆ ಆಗಿದ್ಯಾ? ಹೀಗೆ ಎಲ್ಲವನ್ನೂ ಹುಡುಕಿದ್ದಾರೆ. ಹೀಗೆ ಗೂಗಲ್ ಸರ್ಚ್ ಮಾಡಿದವರಿಗೆ ಶಾಕಿಂಗ್ ವಿಚಾರಗಳು ಗೊತ್ತಾಗ್ತಿವೆ..

ಪೆರ್ರಿಗೆ ಮದುವೆಯಾಗಿ ಡಿವೋರ್ಸ್ ಕೂಡ ಆಗಿದೆ. ಕೆಲ ಅಂತರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಎಲ್ಲಿಸ್ ಪೆರ್ರಿ 2015ರಲ್ಲಿ ವಿವಾಹವಾಗಿದ್ರು.. ಅವರು ಆಸ್ಟ್ರೇಲಿಯಾದ ಖ್ಯಾತ ರಗ್ಬಿ ಆಟಗಾರನಾದ ಟೂಮುವಾ ಅವರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಐದೇ ವರ್ಷಕ್ಕೆ ಇವರಿಬ್ಬರೂ ದೂರವಾಗಿದ್ದಾರೆ. 2020ರಲ್ಲಿ ವಿಚ್ಛೇದನ ಪಡೆದು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.  ವಿಚ್ಛೇದನದ ವಿಚಾರವನ್ನು ಈ ಜೋಡಿ ಜಂಟಿ ಸುದ್ದಿಗೋಷ್ಠಿ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದ್ದರು.. ಅಲ್ಲದೇ ತಮ್ಮಿಬ್ಬರ ನಿರ್ಧಾರವನ್ನು ಗೌರವಿಸುವಂತೆ ಮನವಿ ಮಾಡಿದ್ದರು. ತನ್ನ ಬಾಯ್ಡ್‌ ಫೆಂಡ್‌ನ ಬಂಗಲೆಯಲ್ಲಿ ವಾಸಿಸುತ್ತಿದ್ದ ಪೆರ್ರಿ, 2021ರಲ್ಲಿ 2.1 ಮಿಲಿಯನ್ ಆಸ್ಟ್ರೇಲಿಯನ್‌ ಡಾಲರ್‌ಗೆ ವಿಲ್ಲಾವನ್ನು ಮಾರಾಟ ಮಾಡಿದ್ದರು.

ಇನ್ನು, ಟೂಮುವಾ ಪೆರ್ರಿ ಜೊತೆ ವಿಚ್ಛೇದನ ಪಡೆದ ಬಳಿಕ, ಅಂದ್ರೆ  2020 ರಲ್ಲಿ ವಿಧಿವಿಜ್ಞಾನ ಮನಶ್ಶಾಸ್ತ್ರಜ್ಞ ನವೋಮಿ ಕ್ಯಾಮರೂನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತ ಎಲ್ಲಿಸ್ ಪೆರ್ರಿ ಸಹ ಡಿವೋರ್ಸ್ ಬಳಿಕ AFL ಸ್ಟಾರ್, ನ್ಯಾಟ್ ಫೈಫ್ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.. ಇವರಿಬ್ಬರ ನಡುವಿವ ಸ್ನೇಹದ ಬಗ್ಗೆ ಈಗ ಗುಸು ಗುಸು ಶುರುವಾಗಿದೆ.

ಇನ್ನು ಪೆರ್ರಿ ಕೇವಲ ಕ್ರಿಕೆಟ್ ಜಗತ್ತಿನಲ್ಲಿ ಮಾತ್ರ ಸಾಧನೆ ಮಾಡಿಲ್ಲ. ಪೆರ್ರಿ ಫಿಫಾ ಫುಟ್ಬಾಲ್ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದರು. ಫಿಫಾ ಟೂರ್ನಿಯಲ್ಲೂ ಗೋಲು ಗಳಿಸಿದ ಕೀರ್ತಿ ಅವರಿಗಿದೆ. 16ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಹಾಗೂ ಐಸಿಸಿ ಮತ್ತು ಫಿಫಾ ಟೂರ್ನಮೆಂಟ್‌ಗಳಲ್ಲಿ ಕಾಣಿಸಿಕೊಂಡ ಏಕೈಕ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.

ಇನ್ನು ಎಲ್ಲಿಸ್ ಪೆರ್ರಿ, ತನ್ನ ಆಟ, ಸೌಂದರ್ಯದಲ್ಲಿ ಮಾತ್ರ ನಂಬರ್ 1 ಅಲ್ಲ.. ಶ್ರೀಮಂತಿಕೆಯಲ್ಲೂ ನಂಬರ್ 1.. ಎಲ್ಲಿಸ್ ಪೆರ್ರಿ ಆಸ್ಟ್ರೇಲಿಯಾ ಮತ್ತು ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಕ್ರಿಕೆಟರ್‌ ಆಗಿದ್ದಾರೆ. 2023ರ ವರದಿ ಪ್ರಕಾರ ಈ ಸ್ಟಾರ್ ಆಲ್ರೌಂಡರ್ ಒಟ್ಟು ಆಸ್ತಿ ಮೌಲ್ಯ 14 ಮಿಲಿಯನ್ ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 83 ಕೋಟಿಗೂ ಅಧಿಕ.  WPL ನಲ್ಲಿ ಅವರಿಗೆ ಒಂದು ಸೀಸನ್ನಲ್ಲೇ ಬರೋಬ್ಬರಿ 1.75 ಕೋಟಿ ರೂ ಕೈ ಸೇರುತ್ತೆ.

2023ರ ವರದಿಯಂತೆ 83 ಕೋಟಿ ನಿವ್ವಳ ಮೌಲ್ಯ ಹೊಂದಿರುವ ಪೆರ್ರಿಯ  ಆಸ್ತಿ ಮೌಲ್ಯ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ. ಕ್ರಿಕೆಟ್ ಆಸ್ಟ್ರೇಲಿಯಾದಿಂದ  ಪೆರಿಯ ವಾರ್ಷಿಕ ವೇತನ ಸುಮಾರು 2 ಲಕ್ಷ ಡಾಲರ್.. ಅಂದರೆ 1.66 ಕೋಟಿಗೂ ಅಧಿಕ ಮೊತ್ತ ಸಿಗುತ್ತಿದೆ. ಮಹಿಳೆಯರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದೊಂದಿಗೆ ಒಪ್ಪಂದ ಮಾಡ್ಕೊಂಡಿದ್ದಾರೆ.. ಇದ್ರಲ್ಲಿ ಪೆರ್ರಿ ಸುಮಾರು 1 ಲಕ್ಷ ಡಾಲರ್ ಅಂದರೆ 83 ಲಕ್ಷ ರೂಪಾಯಿ ಪಡೆಯುತ್ತಾರೆ.

ಹಾಗೆಯೇ ಇಂಗ್ಲೆಂಡ್ ಆಯೋಜಿಸುತ್ತಿರುವ ದಿ ಹಂಡ್ರೆಡ್ ಲೀಗ್ನಿಂದ 31 ಸಾವಿರ  ಡಾಲರ್ ಅಂದರೆ ಬರೋಬ್ಬರಿ 25 ಲಕ್ಷ ರೂಪಾಯಿ ವೇತನವಾಗಿ ಪಡಿತಾರೆ. ಇದಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುವ ಪಂದ್ಯದ ಶುಲ್ಕ, ಪಂದ್ಯಶ್ರೇಷ್ಠ ಪ್ರಶಸ್ತಿಗಳಿಂದ ಕೂಡ ಹಣ ಗಳಿಸ್ತಾರೆ.

ಕ್ರಿಕೆಟ್ ಹೊರತಾಗಿ ಆಸೀಸ್ ಆಲ್ರೌಂಡರ್ ಅಡಿಡಾಸ್, ಕಾಮನ್ವೆಲ್ತ್ ಬ್ಯಾಂಕ್, ವೀಟ್-ಬಿಕ್ಸ್  ಸೇರಿದಂತೆ ಜನಪ್ರಿಯ ಬ್ರ್ಯಾಂಡ್ಗಳಿಗೂ ಪ್ರಚಾರ ಮಾಡುತ್ತಾರೆ. ಅದರಿಂದಲೂ ಕೋಟಿಗಟ್ಟಲೆ ದುಡ್ಡು ಗಳಿಸುತ್ತಾರೆ. ಇನ್ಸ್ಟಾಗ್ರಾಂನಲ್ಲೂ 1 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಪೆರ್ರಿ.. ಬ್ರ್ಯಾಂಡ್ ಪ್ರಚಾರ ಮಾಡಲು 50 ಲಕ್ಷದಿಂದ 1 ಕೋಟಿವರೆಗೆ ಶುಲ್ಕ ವಿಧಿಸುತ್ತಾರೆ ಎಂದು ವರದಿಯಾಗಿದೆ. ಪೆರ್ರಿ ಇಷ್ಟೆಲ್ಲಾ ಸಾಧನೆ ಮಾಡಿದ್ದಾರೆ. ನ್ಯಾಷನಲ್ ಲೆವೆಲ್ನಲ್ಲಿ ಖ್ಯಾತಿ ಪಡ್ಕೊಂಡಿದ್ದಾರೆ.. ವಿಶ್ವದ ರಿಚ್ಚೆಸ್ಟ್ ಪ್ಲೇಯರ್ ಅನ್ನೋ ಪಟ್ಟ ಕೂಡ ಇದೆ. ಅವರ ಬಳಿ ಟೊಯೋಟಾ ಮತ್ತು ಲೆಕ್ಸಸ್ ಕಾರುಗಳಿವೆ ಎಂದೂ ವರದಿಯಾಗಿದೆ.

Shwetha M